ಬಸವನಕಜೆಯಲ್ಲಿ ಸೋಲಾರ್ ದಾರಿ ದೀಪ ಲೋಕಾರ್ಪಣೆ

ಬಸವನಕಜೆಯಲ್ಲಿ ಸೋಲಾರ್ ದಾರಿ ದೀಪ ಲೋಕಾರ್ಪಣೆ


ಮೂಡುಬಿದಿರೆ: ತಾಲೂಕಿನ  ಬೆಳುವಾಯಿ ಸಹಕಾರಿ ವ್ಯವಸಾಯಿಕ ಸಂಘ ನಿಯಮಿತ ವತಿಯಿಂದ ಅಲಂಗಾರು ಬಸವನಕಜೆ ಪ್ರಯಾಣಿಕರ ತಂಗುದಾಣದ ಬಳಿ ನಿರ್ಮಿಸಲಾದ ನೂತನ ಸೋಲಾರ್ ದಾರಿ ದೀಪವನ್ನು ದ.ಕ. ಜಿಲ್ಲಾ ಡಿಸಿಸಿ ಬ್ಯಾಂಕ್ ನಿರ್ದೇಶಕ, ಬೆಳುವಾಯಿ ಸಹಕಾರಿ ವ್ಯವಸಾಯಿಕ ಸಂಘ ನಿಯಮಿತದ ಅಧ್ಯಕ್ಷ "ಸಹಕಾರಿ ರತ್ನ" ಬೆಳುವಾಯಿ ಭಾಸ್ಕರ್ ಕೋಟ್ಯಾನ್ ಲೋಕಾಪ೯ಣೆಗೊಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಎಂ. ದಯಾನಂದ ಪೈ ಅವರು ಈ ಪರಿಸರದಲ್ಲಿ ದಾರಿದೀಪದ ಕೊರತೆ ಇದ್ದಾಗ ತಾವು ನೀಡಿದ ಮನವಿಯ ಬಗ್ಗೆ ಕ್ಷಿಪ್ರಗತಿಯಲ್ಲಿ ಸ್ಪಂದಿಸಿದ ಬೆಳುವಾಯಿ ಸಹಕಾರಿ ವ್ಯವಸಾಯಿಕ ಸಂಘಕ್ಕೆ  ಕ್ರತಜ್ಞತೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರುಗಳಾದ ಪಾಂಡುರಂಗ ರಾಮಪ್ರಸಾದ್, ಪಡುಮಾರ್ನಾಡು ಹಾಲು ಉತ್ಪಾದಕರ ಸಂಘದ ಉಪಾಧ್ಯಕ್ಷ ಬೇoಗೂರಿ ಬಾಲಕೃಷ್ಣ ಶೆಟ್ಟಿ, ಪಡುಮಾರ್ನಾಡು ಜನತಾ ಕೋ ಓಪರೆಟಿವ್ ವಿವಿದೋದ್ದೇಶ  ಸಹಕಾರಿ  ನಿರ್ದೇಶಕರುಗಳಾದ ಎಂ. ರಾಘವೇಂದ್ರ ಭಂಡಾರ್ಕರ್ ಮತ್ತು  ಕಿಶೋರ್ ಭಂಡಾರಿ, ಅಮೃತ ಸಾವಯವ ಕೃಷಿಕರ ಸಂಘದ ಅಶೋಕ್ ಭಂಡಾರಿ, ಸಿವಿಲ್ ಕಾಂಟ್ರಾಕ್ಟರ್ ಗಣೇಶ್ ಶೆಟ್ಟಿ, ಉದ್ಯಮಿ ಉಮೇಶ್ ಆಚಾರ್ ಮತ್ತಿತರರು ಉಪಸ್ಥಿತರಿದ್ದರು. 

 ನಿರ್ದೇಶಕ  ಪಾಂಡುರಂಗ ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article