ಪೊಳಲಿ ಕ್ಷೇತ್ರದಲ್ಲಿ ಭಕ್ತರಿಗೆ ವಸ್ತ್ರಸಂಹಿತೆ ಜಾರಿಗೆ ಆಗ್ರಹಿಸಿ ಮನವಿ
Friday, August 28, 2026
ಪೊಳಲಿ: ಮುಜರಾಯಿ ಇಲಾಖೆಗೊಳಪಟ್ಟ ಐತಿಹಾಸಿಕವಾದ ಹಿನ್ನಲೆಯನ್ನು ಹೊಂದಿರುವ ಮತ್ತು ಸಾವಿರ ಸೀಮೆಯ ಒಡತಿ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನಕ್ಕಾಗಮಿಸುವ ಭಕ್ತರು ಕಡ್ಡಾಯವಾಗಿ ವಸ್ತ್ರ ಸಂಹಿತೆಯನ್ನು ಪಾಲಿಸುವಂತೆ ದೇವಸ್ಥಾನದ ವತಿಯಿಂದ ಕ್ರಮ ಕೈಗೊಳ್ಳಬೇಕು ಸಹಿತ ವಿವಿಧ ಬೇಡಿಕೆಯನ್ನು ಈಡೇರಿಸುವಂತೆ ಆಗ್ರಹಿಸಿ ಕರಿಯಂಗಳ, ಪೊಳಲಿ ಹಿಂದೂ ಧಾರ್ಮಿಕ ಶಿಕ್ಷಣ ಹಕ್ಕೊತ್ತಾಯ ಸಮಿತಿ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಹಾಗೂ ಆಡಳಿತ ಮೊಕ್ತೇಸರರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದೆ.
ದೇವಳದಲ್ಲಿ ಶಾಸ್ತ್ರೀಯ ಹಿನ್ನೆಲೆಯುಳ್ಳಂತಹ ಸಂಗೀತ ಮತ್ತು ನಾಟ್ಯ ಶಾಲೆಯನ್ನು (ವಿದ್ವತ್ ಮಟ್ಟದವರೆಗೆ) ವ್ಯವಸ್ಥಿತವಾಗಿ ಆರಂಭಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಚಂದ್ರಮೋಹನ್ ಹಾಗೂ ಆಡಳಿತ ಮೊಕ್ತೇಸರ ಡಾ. ಮಂಜಯ್ಯ ಶೆಟ್ಟಿ ಅಮ್ಮುಂಜೆಗುತ್ತು ಅವರು ಮನವಿಯನ್ನು ಸ್ವೀಕರಿಸಿದ್ದು,ಸಕರಾತ್ಮಕವಾಗಿ ಸ್ಪಂದಿಸಿದ್ದಾರೆ.
ಈ ಸಂದರ್ಭದಲ್ಲಿ ಹಿಂದೂ ಧಾರ್ಮಿಕ ಶಿಕ್ಷಣ ಹಕ್ಕೊತ್ತಾಯ ಸಮಿತಿ ಸಂಚಾಲಕರಾದ ಚಂದ್ರಹಾಸ ಶೆಟ್ಟಿ ನಾರಳ, ವೆಂಕಟೇಶ್ ನಾವಡ ಪೊಳಲಿ, ಚಂದ್ರಹಾಸ ಪಲ್ಲಿಪಾಡಿ, ಚಂದ್ರಶೇಖರ್ ಭಂಡಾರಿ, ಸುಕೇಶ್ ಚೌಟ ಬಡಕಬೈಲು, ಭಾಸ್ಕರ ಮೊಗರು, ಕಿಶೋರ್ ಪಲ್ಲಿಪಾಡಿ, ರಾಧಕೃಷ್ಣ ತಂತ್ರಿ, ಯಶವಂತ ಪೊಳಲಿ, ಲಕ್ಷ್ಮೀಶ್ ಶೆಟ್ಟಿ, ಜನಾರ್ಧನ ಅಮ್ಮುಂಜೆ, ಯಶೋಧರ ಪೊಳಲಿ, ಕಾರ್ತಿಕ್ ಬಳ್ಳಾಲ್, ಯುವರಾಜ್ ಪೂಂಜ, ಜಗದೀಶ್ ಆಚಾರ್ಯ, ಸಂದೀಪ್ ಕಮ್ಮಾಜೆ, ಚಂದ್ರಶೇಖರ ಶೆಟ್ಟಿ, ಚಂದ್ರಾವತಿ ಮತ್ತಿತರರು ಉಪಸ್ಥಿತರಿದರು.