ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ‘ಪುರಲ್ದ ಕುರಲ್’
ಬಳಿಕ ದೇವಳದ ಅರ್ಚಕರ ನೇತೃತ್ವದಲ್ಲಿ ಪ್ರಾರ್ಥನೆಗೈದು ತೆನೆಯನ್ನು ವಾದ್ಯಗೋಷ್ಠಿಯೊಂದಿಗೆ ದೇವಾಲಯದ ಒಳಗೆ ತಂದು ಶ್ರೀ ರಾಜರಾಜೇಶ್ವರಿ ದೇವಿಯ ಮುಂದಿಟ್ಟು ವಿಶೇಷ ಪೂಜೆಗಳು ನಡೆಯುತ್ತದೆ.
ಶ್ರೀ ಕ್ಷೇತ್ರಕ್ಕೆ ಸಂಭಂದಪಟ್ಟ ಸಾವಿರ ಸೀಮೆಯ ಭಗವದ್ಬಕ್ತರು, ತೆನೆ ಹಬ್ಬದಲ್ಲಿ ಪಾಲ್ಗೊಂಡು ದೇವರ ಪ್ರಸಾದವೆಂಬಂತೆ ತೆನೆಗಳನ್ನು ಅಲ್ಲದೇ ದೇವರಿಗೆ ಮಾಡಿದ ನೈವೇದ್ಯವನ್ನು ತಮ್ಮ ಮನೆಗೆ ಕೊಂಡೊಯ್ದು ಮನೆಯಲ್ಲಿ ಪುದ್ದರ್ ಆಚರಣೆ ಮಾಡಲಾಗುತ್ತದೆ.
ಪ್ರತಿ ವರ್ಷವು ಸಂಪ್ರದಾಯ ಪ್ರಕಾರವಾಗಿ ಶ್ರೀ ಕ್ಷೇತ್ರದಲ್ಲಿ ತೆನೆಹಬ್ಬ (ಕುರಲ್ ಪರ್ಬ) ಆಚರಣೆಯನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ.
ಕ್ಷೇತ್ರದ ತಂತ್ರಿಗಳಾದ ಸುಬ್ರಹ್ಮಣ್ಯ ತಂತ್ರಿ, ವೆಂಕಟೇಶ್ ತಂತ್ರಿ, ಪ್ರಧಾನ ಅನುವಂಶಿಕ ಮೊಕ್ತೇಸರ ಮಾಧವ ಭಟ್ ಪೊಳಲಿ, ಆಡಳಿತ ಮೊಕ್ತೇಸರರಾದ ಡಾ. ಮಂಜಯ್ಯ ಶೆಟ್ಟಿ ಅಮ್ಮುಂಜೆಗುತ್ತು, ದೇವಾಲಯದ ಪ್ರಧಾನ ಅರ್ಚಕರಾದ ರಾಮ್ ಭಟ್, ಪರಮೇಶ್ವರ ಭಟ್, ಅನಂತ ಭಟ್, ಪದ್ಮನಾಭ ಭಟ್ ಕಾರ್ಯನಿರ್ವಹಣಾಧಿಕಾರಿ ಚಂದ್ರಮೋಹನ್ ಹಾಗೂ ಕ್ಷೇತ್ರದ ಭಕ್ತಾಧಿಗಳು ಭಾಗವಹಿಸಿ ದೇವರ ಪ್ರಸಾದ ಸ್ವೀಕರಿಸಿದರು.
