ಶತಾಯುಷಿ, ನಿವೃತ್ತ ತಹಶೀಲ್ದಾರ್, ಸಹಕಾರಿ ಭೀಷ್ಮ ಬಿ.ಎಸ್. ಕುಲಾಲ್ ನಿಧನ

ಶತಾಯುಷಿ, ನಿವೃತ್ತ ತಹಶೀಲ್ದಾರ್, ಸಹಕಾರಿ ಭೀಷ್ಮ ಬಿ.ಎಸ್. ಕುಲಾಲ್ ನಿಧನ


ಪುತ್ತೂರು: ಕುಲಾಲ ಸಮಾಜ ರತ್ನ, ನಿವೃತ್ತ ತಹಶೀಲ್ದಾರ್, ಸಹಕಾರಿ ಭೀಷ್ಮ ಹಾಗೂ ಪುತ್ತೂರಿನ ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘದ (ನಿ.) ಮಾಜಿ ಅಧ್ಯಕ್ಷರು, ಹಾಲಿ ನಿರ್ದೇಶಕರಾಗಿದ್ದ ಶತಾಯುಷಿ ಬಿ.ಎಸ್. ಕುಲಾಲ್ (100) ಅವರು ಆ.30ರಂದು ನಿಧನರಾದರು.

ಕಂದಾಯ ಇಲಾಖೆಯಲ್ಲಿ ತಹಶೀಲ್ದಾರ್ ಆಗಿ ದೀರ್ಘಕಾಲ ದಕ್ಷ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಬಿ.ಎಸ್. ಕುಲಾಲ್ ಅವರು, ಸಹಕಾರ ಹಾಗೂ ಸಾರ್ವಜನಿಕ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಪುತ್ತೂರಿನ ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘದ ಅಧ್ಯಕ್ಷರಾಗಿ ಹಾಗೂ ನಿರ್ದೇಶಕರಾಗಿ ಸಂಸ್ಥೆಯ ಬೆಳವಣಿಗೆಗೆ ಗಣನೀಯ ಕೊಡುಗೆ ನೀಡಿದ್ದರು.

ಮೃತರು ಇಬ್ಬರು ಪುತ್ರರು, ಓರ್ವ ಪುತ್ರಿ, ಸೊಸೆ, ಅಳಿಯಂದಿರು ಹಾಗೂ ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಬಿ.ಎಸ್. ಕುಲಾಲ್ ಅವರ ನಿಧನಕ್ಕೆ ಸಹಕಾರ ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ತೀವ್ರ ಕಂಬನಿ ಮಿಡಿದಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article