ಕುಮಾರಧಾರ ಸ್ನಾನ ಘಟ್ಟ ಮುಂದುವರೆದ ಮುಳುಗಡೆ: ನೀರು ಹರಿವಿನ ಪ್ರಮಾಣ ಹೆಚ್ಚಳ
Saturday, August 1, 2026
ಸುಬ್ರಹ್ಮಣ್ಯ: ಪಶ್ಚಿಮ ಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ಭಾರಿ ಮಳೆಯ ಹಿನ್ನೆಲೆಯಲ್ಲಿ ಕುಮಾರಧಾರ ನದಿಯ ಸ್ನಾನ ಘಟ್ಟ ಜು.31 ರ ಸಂಜೆಯಿಂದ ಸಂಪೂರ್ಣವಾಗಿ ಮುಳುಗಡೆಯಾಗಿದ್ದು ಇಂದು ನೀರಿನ ಹರಿವಿನ ಪ್ರಮಾಣ ಮತ್ತೆ ಹೆಚ್ಚಿದೆ. ತಾತ್ಕಾಲಿಕವಾಗಿ ಡ್ರಮ್ ಇಟ್ಟು ತೀರ್ಥ ಸ್ನಾನ ವ್ಯವಸ್ಥೆ ಮಾಡಿತ್ತಾದರೂ ಅಲ್ಲೂ ನೀರು ತುಂಬಿರುವುದಾಗಿ ವರದಿಯಾಗಿದೆ.
ಸ್ನಾನ ಘಟ್ಟದ ಬಳಿಯಿದ್ದ ದೇವರ ಕಟ್ಟೆ, ಡ್ರೆಸ್ಸಿಂಗ್ ಕೊಠಡಿ, ಶೌಚಾಲಯ ನೀರಿನಲ್ಲಿ ಮುಳುಗಿವೆ. ಭದ್ರತಾ ಕೊಠಡಿ ಮೆಟ್ಟಿಲ ಬಳಿ ವರೆಗೆ ನೀರು ಬಂದಿದೆ. ದೇವಾಲಯದ ಭದ್ರತಾ ಸಿಬ್ಬಂದಿಗಳು ಮುನ್ನೆಚ್ಚರಿಕೆ ವಹಿಸಿದ್ದು ಭಕ್ತರು ನೀರಿಗಿಳಿಯದಂತೆ ನೋಡಿಕೊಳ್ಳುತಿದ್ದಾರೆ.
