ಸುಳ್ಯ ಯುವಜನ ಸಂಯುಕ್ತ ಮಂಡಳಿ, ಯುವಜನ ಸೇವಾ ಸಂಸ್ಥೆಯ ಭೋಜನ ಶಾಲೆಯ ವಿಸ್ತೃತ ಕಟ್ಟಡ 'ಅನ್ನಪೂರ್ಣ' ಲೋಕಾರ್ಪಣೆ
Sunday, August 23, 2026
ಸುಳ್ಯ: ಸುಳ್ಯದ ಯುವಜನ ಸಂಯುಕ್ತ ಮಂಡಳಿ ಹಾಗೂ ಯುವಜನ ಸೇವಾ ಸಂಸ್ಥೆ ಇಲ್ಲಿಗೆ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನದ ರೂ.10 ಲಕ್ಷ ಮೊತ್ತದಲ್ಲಿ ನಿರ್ಮಾಣಗೊಂಡ ಭೋಜನ ಶಾಲೆಯ ವಿಸ್ತೃತ ಕಟ್ಟಡ ಅನ್ನಪೂರ್ಣ ಲೋಕಾರ್ಪಣಾ ಸಮಾರಂಭ ಆ.22ರಂದು ನಡೆಯಿತು.
ಶಾಸಕಿ ಭಾಗೀರಥಿ ಮುರುಳ್ಯ ಅನ್ನಪೂರ್ಣದ ಲೋಕಾರ್ಪಣೆ ಮಾಡಿದರು.
ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಎಸ್.ಅಂಗಾರ ಉಪಸ್ಥಿತರಿದ್ದರು. ಶಾಸಕಿ ಭಾಗೀರಥಿ ಮುರುಳ್ಯ, ಮಾಜಿ ಸಚಿವ ಎಸ್.ಅಂಗಾರ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು.
ಯುವಜನ ಸೇವಾ ಸಂಸ್ಥೆಯ ಅಧ್ಯಕ್ಷ ದೀಪಕ್ ಕುತ್ತಮೊಟ್ಟೆ ಅಧ್ಯಕ್ಷತೆ ವಹಿಸಿದ್ದರು. ಯುವಜನ ಸಂಯುಕ್ತ ಮಂಡಳಿ ಅಧ್ಯಕ್ಷ ಪವನ್ ಪಲ್ಲತ್ತಡ್ಕ, ಯುವಜನ ಸೇವಾ ಸಂಸ್ಥೆ ಕೋಶಾಧಿಕಾರಿ ಅನಿಲ್ ಪೂಜಾರಿಮನೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಯುವಜನ ಸಂಯುಕ್ತ ಮಂಡಳಿ ನಿರ್ದೇಶಕ ನಿತೇಶ್ ಎರ್ಮೆಟ್ಟಿ ಪ್ರಾರ್ಥಿಸಿದರು. ಯುವಜನ ಸೇವಾ ಸಂಸ್ಥೆ ಗೌ.ಕಾರ್ಯದರ್ಶಿ ದಯಾನಂದ ಕೇರ್ಪಳ ಸ್ವಾಗತಿಸಿದರು. ಮಂಡಳಿಯ ಪೂರ್ವಾಧ್ಯಕ್ಷ ದಿನೇಶ್ ಮಡಪ್ಪಾಡಿ ಪ್ರಾಸ್ತಾವಿಕ ಮಾತನಾಡಿದರು. ನಿರ್ದೇಶಕ ಪ್ರಸಾದ್ ಕಾಟೂರು ಮತ್ತು ಗೌರವಾಧ್ಯಕ್ಷ ವಿಜಯ ಕುಮಾರ್ ಉಬರಡ್ಕ ಕಾರ್ಯಕ್ರಮ ನಿರೂಪಿಸಿದರು.