ಸಚಿವ ನಾಗೇಂದ್ರ ರಾಜೀನಾಮೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಧರಣಿ ಸತ್ಯಾಗ್ರಹ

ಸಚಿವ ನಾಗೇಂದ್ರ ರಾಜೀನಾಮೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಧರಣಿ ಸತ್ಯಾಗ್ರಹ


ಉಜಿರೆ: ವಾಲ್ಮೀಕಿ ನಿಗಮದ ಲೂಟಿ ಹಗರಣಕ್ಕೆ ಸಂಬಂಧಿಸಿ ಸಚಿವ ನಾಗೇಂದ್ರ ಅವರ ರಾಜೀನಾಮೆ ಆಗ್ರಹಿಸಿ ಹಾಗೂ ಕಾಂಗ್ರೆಸ್ ಸರ್ಕಾರದ  ಆಡಳಿತ ವೈಫಲ್ಯಗಳನ್ನು ಖಂಡಿಸಿ ಬೆಳ್ತಂಗಡಿ ಬಿಜೆಪಿ ಮಂಡಲ ವತಿಯಿಂದ ಆ.18 ರಂದು ಬೆಳ್ತಂಗಡಿ ತಾಲೂಕು ಆಡಳಿತ ಸೌಧದ ವಠಾರದಲ್ಲಿ ಪ್ರತಿಭಟನಾ ಧರಣಿ  ಸತ್ಯಾಗ್ರಹ ನಡೆಯಿತು.

ಪ್ರತಿಭಟನೆಯಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಮಾತನಾಡಿ, ಕಾಂಗ್ರೆಸ್ ಸರಕಾರದ ಆಡಳಿತ ವೈಫಲ್ಯವನ್ನು ಖಂಡಿಸಿ, ಸಚಿವರ ರಾಜಿನಾಮೆಗೆ ಆಗ್ರಹಿಸಿದರು. 

ಬೆಳ್ತಂಗಡಿ ಮಂಡಲ ಅಧ್ಯಕ್ಷ ಶ್ರೀನಿವಾಸ ರಾವ್, ಪ್ರಧಾನ ಕಾರ್ಯದರ್ಶಿ ಜಯಾನಂದ, ಪ್ರಶಾಂತ್ ಪಾರೆಂಕಿ, ಬಿಜೆಪಿ ನಾಯಕರಾದ ಜಯಂತ್ ಕೊಟ್ಯಾನ್, ಜಯಾನಂದ ಕಲ್ಲಾಪು, ಸುಂದರ ಹೆಗ್ಡೆ, ಕೊರಗಪ್ಪ ಗೌಡ, ವಿದ್ಯಾ ಶ್ರೀನಿವಾಸ್, ಚೆನ್ನಕೇಶವ ಮುಂಡಾಜೆ, ಸೀತಾರಾಮ ಬೆಳಾಲು, ಲಕ್ಷ್ಮಣ, ವಿಜಯ್ ಗೌಡ, ಗಣೇಶ್ ನಾವೂರು, ಶಶಧರ ಕಲ್ಮನ್ಜ, ಉಮೇಶ್ ಕುಲಾಲ್, ಶಶಿರಾಜ್ ಶೆಟ್ಟಿ, ಸಂತೋಷ್ ಜೈನ್ ಪಡಂಗಡಿ, ರಾಜೇಶ್ ಪ್ರಭು, ವಸಂತಿ, ರಂಜಿನಿ ಮುಂಡಾಜೆ, ಪ್ರದೀಪ್ ಕುವೆಟ್ಟು, ಚಂದ್ರಕಾಂತ್ ನಿಡ್ದಾಜೆ ಸೇರಿದಂತೆ ನೂರಾರು ಕಾರ್ಯಕರ್ತರು ಪ್ರತಿಭಟನಾ ಧರಣಿಯಲ್ಲಿ ಭಾಗವಹಿಸಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article