ಯುಐ ಗ್ರೀನ್‌ಮೆಟ್ರಿಕ್ ವಿಶ್ವ ಸುಸ್ಥಿರ ಶ್ರೇಯಾಂಕ: ಮಂಗಳೂರು ವಿವಿ ಭಾರತದಲ್ಲಿ 2ನೇ ಸ್ಥಾನ

ಯುಐ ಗ್ರೀನ್‌ಮೆಟ್ರಿಕ್ ವಿಶ್ವ ಸುಸ್ಥಿರ ಶ್ರೇಯಾಂಕ: ಮಂಗಳೂರು ವಿವಿ ಭಾರತದಲ್ಲಿ 2ನೇ ಸ್ಥಾನ


ಮಂಗಳೂರು: ಇಂಡೋನೇಷ್ಯಾ ವಿಶ್ವವಿದ್ಯಾನಿಲಯವು ಸೆ.24 ರಂದು ಅಜೆರ್ಬೈಜಾನ್‌ನಲ್ಲಿ ಬಿಡುಗಡೆ ಮಾಡಿದ ಯುಐ ಗ್ರೀನ್‌ಮೆಟ್ರಿಕ್ ವಿಶ್ವ ಸುಸ್ಥಿರ ವಿಶ್ವವಿದ್ಯಾನಿಲಯ ಶ್ರೇಯಾಂಕಗಳ ಪ್ರಕಾರ, ಮಂಗಳೂರು ವಿಶ್ವವಿದ್ಯಾನಿಲಯವು 2026ರ ಅತ್ಯಂತ ಸುಸ್ಥಿರ ವಿಶ್ವವಿದ್ಯಾನಿಲಯವಾಗಿ ಭಾರತದಲ್ಲಿ 2ನೇ ಸ್ಥಾನವನ್ನು ಪಡೆದುಕೊಂಡಿದೆ.

ಗ್ರೀನ್‌ಮೆಟ್ರಿಕ್ ಶ್ರೇಯಾಂಕವು ಹಸಿರು ಕ್ಯಾಂಪಸ್ ಮತ್ತು ಪರಿಸರ ಸುಸ್ಥಿರತೆಯನ್ನು ಆಧರಿಸಿದೆ ಮತ್ತು ಪರಿಸರಕ್ಕೆ ವಿಶ್ವವಿದ್ಯಾನಿಲಯದ ಬದ್ಧತೆ ಮತ್ತು ಸುಸ್ಥಿರತೆಯತ್ತ ಉಪಕ್ರಮಗಳನ್ನು ನಿರ್ಣಯಿಸುತ್ತದೆ. ಮೌಲ್ಯಮಾಪನ ಮಾಡುವ ಏಳು ಮಾನದಂಡಗಳೆಂದರೆ ಸ್ಥಾಪನೆ ಮತ್ತು ಮೂಲಸೌಕರ್ಯ, ಇಂಧನ ಮತ್ತು ಹವಾಮಾನ ಬದಲಾವಣೆ, ತ್ಯಾಜ್ಯ ನಿರ್ವಹಣೆ, ನೀರಿನ ಸಂರಕ್ಷಣೆ ಮತ್ತು ಮರುಬಳಕೆ, ಸಾರಿಗೆ, ಶಿಕ್ಷಣ, ಆಡಳಿತ ಮತ್ತು ಡಿಜಿಟಲೀಕರಣವನ್ನು ಒಳಗೊಂಡಿದೆ.

ಮಂಗಳೂರು ವಿಶ್ವವಿದ್ಯಾನಿಲಯವು ಮೇಲಿನ ಎಲ್ಲಾ ಕ್ರಮಗಳಲ್ಲಿ ಸುಧಾರಣೆ ಕಂಡಿದ್ದು, ವಿಶ್ವದಲ್ಲಿ 125ನೇ ಸ್ಥಾನದಲ್ಲಿದ್ದು, ರಾಜ್ಯ ಸಾರ್ವಜನಿಕ ವಿಶ್ವವಿದ್ಯಾನಿಲಯಗಳಲ್ಲಿ, ಮಂಗಳೂರು ವಿಶ್ವವಿದ್ಯಾನಿಲಯವು 1ನೇ ಸ್ಥಾನದಲ್ಲಿದೆ.

ಈ ರ‍್ಯಾಂಕಿಂಗ್‌ನಲ್ಲಿ 68 ಭಾರತೀಯ ಉನ್ನತ ಶಿಕ್ಷಣ ಸಂಸ್ಥೆಗಳು ಭಾಗವಹಿಸಿದ್ದವು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article