ಸೇಂಟ್ ಆಗ್ನೆಸ್ ಕಾಲೇಜಿನ ಗ್ರಂಥಾಲಯದಲ್ಲಿ ‘ಜ್ಞಾನ ಕೋಶ’ ಜ್ಞಾನ ವ್ಯವಸ್ಥೆಗಳ (IKS) ವಿಭಾಗದ ಉದ್ಘಾಟನೆ

ಸೇಂಟ್ ಆಗ್ನೆಸ್ ಕಾಲೇಜಿನ ಗ್ರಂಥಾಲಯದಲ್ಲಿ ‘ಜ್ಞಾನ ಕೋಶ’ ಜ್ಞಾನ ವ್ಯವಸ್ಥೆಗಳ (IKS) ವಿಭಾಗದ ಉದ್ಘಾಟನೆ


ಮಂಗಳೂರು: ಭಾರತದ ಸಮೃದ್ಧ ಹಾಗೂ ಆಳವಾದ ಬೌದ್ಧಿಕ ಪರಂಪರೆಯನ್ನು ಸಂಭ್ರಮಿಸುವ ಮತ್ತು ಸಂರಕ್ಷಿಸುವ ಮಹತ್ವದ ಹೆಜ್ಜೆಯಾಗಿ, ಮಂಗಳೂರಿನ ಸೇಂಟ್ ಆಗ್ನೆಸ್ ಕಾಲೇಜು (ಸ್ವಾಯತ್ತ) ಗ್ರಂಥಾಲಯದಲ್ಲಿ ‘ಭಾರತೀಯ ಜ್ಞಾನ ಕೋಶ-ಭಾರತೀಯ ಜ್ಞಾನ ವ್ಯವಸ್ಥೆಗಳ ಭಂಡಾರ’ ಎಂಬ ಹೆಸರಿನ ನೂತನ ಭಾರತೀಯ ಜ್ಞಾನ ವ್ಯವಸ್ಥೆಗಳ (Indian Knowledge Systems -IKS) ವಿಭಾಗವನ್ನು ಗ್ರಂಥಾಲಯದಲ್ಲಿ ಸೆ.19 ರಂದು ಹಾವೇರಿಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಮಾಜಿ ಕುಲಪತಿ ಡಾ. ಕೆ. ಚಿನ್ನಪ್ಪ ಗೌಡ ಅವರು ಉದ್ಘಾಟಿಸಿದರು.


ಐಕೆಎಸ್ ಕೇಂದ್ರ, ಆಂತರಿಕ ಗುಣಮಟ್ಟ ಭರವಸೆ ಕೋಶ (IQAC) ಹಾಗೂ ಸೇಂಟ್ ಆಗ್ನೆಸ್ ಕಾಲೇಜು ಗ್ರಂಥಾಲಯದ ಸಂಯುಕ್ತ ಆಶ್ರಯದಲ್ಲಿ ನಡೆದ ಈ ಕಾರ್ಯಕ್ರಮವು ಪ್ರಾಚೀನ ಭಾರತೀಯ ಜ್ಞಾನ ಮತ್ತು ಸಮಕಾಲೀನ ಶಿಕ್ಷಣದ ನಡುವೆ ಸೇತುವೆ ನಿರ್ಮಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಯಿತು.


ಡಾ. ಕೆ. ಚಿನ್ನಪ್ಪ ಗೌಡ ಅವರು ಮಾತನಾಡಿ, ಶಾಸ್ತ್ರೀಯ ಭಾರತೀಯ ಜ್ಞಾನ ಪರಂಪರೆಗಳ ಜೊತೆಗೆ ಸ್ಥಳೀಯ ಹಾಗೂ ಜಾನಪದ ಜ್ಞಾನ ವ್ಯವಸ್ಥೆಗಳೂ ಸಮಾನವಾಗಿ ಮಹತ್ವವುಳ್ಳವು, ವಿವಿಧ ಜ್ಞಾನ ಪರಂಪರೆಗಳ ವಿಶಿಷ್ಟತೆ, ವೈವಿಧ್ಯತೆ ಹಾಗೂ ಮಹತ್ವವನ್ನು ಅರ್ಥಮಾಡಿಕೊಳ್ಳಲು ಬಹುಶಿಸ್ತೀಯ (Multidisciplinary) ವಿಧಾನದಲ್ಲಿ ತುಲನಾತ್ಮಕ ಸಂಶೋಧನೆ ನಡೆಸುವ ಅಗತ್ಯವಿದೆ ಎಂದು ಪ್ರತಿಪಾದಿಸಿದರು.


ಸೇಂಟ್ ಆಗ್ನೆಸ್ ಕಾಲೇಜಿನ ನಿವೃತ್ತ ಕನ್ನಡ ಪ್ರಾಧ್ಯಾಪಕ ಡಾ. ಸಂಪೂರ್ಣಾನಂದ ಬಾಳ್ಕೂರು ಅವರು ಕಾರ್ಯಕ್ರಮದಲ್ಲಿ ಗೌರವ ಅತಿಥಿಗಳಾಗಿ ಭಾಗವಹಿಸಿ, ಭಾರತೀಯ ಜ್ಞಾನ ಪರಂಪರೆಯ ಕುರಿತು ತಮ್ಮ ಅಮೂಲ್ಯವಾದ ವಿಚಾರಗಳನ್ನು ಹಂಚಿಕೊಂಡರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸೇಂಟ್ ಆಗ್ನೆಸ್ ಕಾಲೇಜಿನ ಪ್ರಾಂಶುಪಾಲೆ ಡಾ. ಎಂ. ವೆನಿಸ್ಸಾ ಎ.ಸಿ. ಅವರು, ಐಕೆಎಸ್ ಕೇಂದ್ರದ ಪ್ರಮುಖ ಉದ್ದೇಶವು ನಮ್ಮಲ್ಲಿರುವ ಸಾಂಪ್ರದಾಯಿಕ ಜ್ಞಾನವನ್ನು ಸಕ್ರಿಯ ಸಂಶೋಧನೆಯ ಮೂಲಕ ಸಂರಕ್ಷಿಸುವುದು, ದಾಖಲಿಸುವುದು ಮತ್ತು ಮುಂದಿನ ಪೀಳಿಗೆಗೆ ಅರ್ಥಪೂರ್ಣವಾಗಿ ಹಸ್ತಾಂತರಿಸುವುದು ಎಂದು ಹೇಳಿದರು. ವಿಶೇಷವಾಗಿ, ವಿದ್ಯಾರ್ಥಿಗಳು ಈ ಮಹತ್ವದ ಕ್ಷೇತ್ರದಲ್ಲಿ ಸಂಶೋಧನೆ ಕೈಗೊಳ್ಳುವಂತೆ ಅವರು ಪ್ರೋತ್ಸಾಹಿಸಿದರು. 


ಐಕೆಎಸ್ ಸಂಯೋಜಕಿ ಡಾ. ವಿಶಾಲ ಬಿ.ಕೆ. ಸ್ವಾಗತಿಸಿದರು. ಸಂಯೋಜಕಿ ಡಾ. ವಿನೋದಾ ಎಸಿ, ಐಕ್ಯೂಎಸಿ ಸಂಯೋಜಕಿ ಡಾ ಶಬೀನಾ ಡಿಸೋಜಾ ಉಪಸ್ಥಿತರಿದ್ದರು.


ಕಾರ್ಯಕ್ರಮವನ್ನು ಪ್ರಥಮ ವರ್ಷದ ಎಂಎ ಇಂಗ್ಲಿಷ್ ವಿಭಾಗದ ದೀಪ್ತಿ ಕಾರ್ಯಕ್ರಮ ನಿರೂಪಿಸಿದರು. ಸಹಾಯಕ ಪ್ರಾಧ್ಯಾಪಕಿ ಮನೀಷಾ ವಂದಿಸಿದರು. ಜಾನೆಟ್ ಬ್ರಾಗ್ಸ್ ಪ್ರಾರ್ಥನೆ ನೆರವೇರಿಸಿದರು.























Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article