ವಿಶ್ವಕರ್ಮರ ಕಲಾ ನೈಪುಣ್ಯತೆ ವಿಶ್ವಕ್ಕೇ ಶ್ರೇಷ್ಠ’: ಸಂಸದ ಬ್ರಿಜೇಶ್ ಚೌಟ

ವಿಶ್ವಕರ್ಮರ ಕಲಾ ನೈಪುಣ್ಯತೆ ವಿಶ್ವಕ್ಕೇ ಶ್ರೇಷ್ಠ’: ಸಂಸದ ಬ್ರಿಜೇಶ್ ಚೌಟ


ಮಂಗಳೂರು: ವಿಶ್ವಕರ್ಮರ ಕಲಾನೈಪುಣ್ಯತೆ  ವಿಶ್ವಕ್ಕೇ ಮಾನ್ಯವಾದುದು, ವಿಶ್ವಕರ್ಮ ಸಮಾಜದವರಿಗೆ ಅವರ ಪಂಚ ಕಸುಬುಗಳಲ್ಲಿ ಯಾವುದೇ ಕೆಲಸಕೊಟ್ಟರೂ ಅದಕ್ಕೆ ಅತ್ಯಂತ ಸುಂದರ ರೂಪ ನೀಡುವುದು ಅವರಿಗೆ ರಕ್ತಗತವಾಗಿ ಬಂದಿದೆ ಎಂದು ಲೋಕಸಭಾ ಸದಸ್ಯ ಬ್ರಿಜೇಶ್ ಚೌಟ ಹೇಳಿದರು.

ಅವರು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ದಕ್ಷಿಣ ಕನ್ನಡ ಮತ್ತು ಮಂಗಳೂರು ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನ ಇದರ ಸಹಯೋಗದಲ್ಲಿ ನಗರದ ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಶ್ರೀ ಕಾಳಿಕಾಂಬಾ ಕಲಾರಂಗ ಮಂಟಪದಲ್ಲಿ ನಡೆದ ಶ್ರೀ ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕರ್ನಾಟಕ ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿಯ ಅಧ್ಯಕ್ಷ ಟಿ ಎಂ ಶಾಹಿದ್ ತೆಕ್ಕಿಲ್ ಉದ್ಘಾಟಿಸಿ ಶುಭ ಹಾರೈಸಿದರು.

ಲೇಖಕ ಉದಯಭಾಸ್ಕರ್ ಆಚಾರ್ಯ ಸುಳ್ಯ ಅವರು ಭಗವಾನ್ ಶ್ರೀ ವಿಶ್ವಕರ್ಮ ದೇವರ ಬಗ್ಗೆ, ವಿಶ್ವಬ್ರಾಹ್ಮಣ ಸಮಾಜದ ಪರಂಪರೆ ಬಗ್ಗೆ ಉಪನ್ಯಾಸ ನೀಡಿದರು. 

ದ.ಕ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನಗಳ ಪ್ರಾಧಿಕಾರದ ಅಧ್ಯಕ್ಷ ಭರತ್ ಮುಂಡೋಡಿ, ಕಾಳಿಕಾಂಬಾ ವಿನಾಯಕ ದೇವಸ್ಥಾನದ ಆಡಳಿತಾಧಿಕಾರಿ ಕೆ. ಉಮೇಶ್ ಆಚಾರ್ಯ ಪಾಂಡೇಶ್ವರ ಮತ್ತಿತ್ತರರು ಇದ್ದರು. 

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್ ಜಿ ಸ್ವಾಗತಿಸಿದರು.  ಚೇತನ್ ಕುಮಾರ್ ಮತ್ತು ಅಖಿಲೇಶ್ ಶರ್ಮಾ ವೇದಮಂತ್ರ ಪಟಿಸಿದರು. ಪಿ ರವೀಂದ್ರ ಮಂಗಳಾದೇವಿ ಕಾರ್ಯಕ್ರಮ ನಿರೂಪಿಸಿದರು.

ಬಳಿಕ ವಿಶ್ವಬ್ರಾಹ್ಮಣ ಮಹಿಳಾ ಸಮಿತಿ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article