ಸಂವಿಧಾನ, ದೇಶದ ಸಂಸ್ಕೃತಿ ಬಗ್ಗೆ ಕಾಂಗ್ರೆಸ್‌ಗೆ ಗೌರವವಿಲ್ಲ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆರೋಪ

ಸಂವಿಧಾನ, ದೇಶದ ಸಂಸ್ಕೃತಿ ಬಗ್ಗೆ ಕಾಂಗ್ರೆಸ್‌ಗೆ ಗೌರವವಿಲ್ಲ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆರೋಪ


ಮಂಗಳೂರು: ಕಾಂಗ್ರೆಸ್ ಪಕ್ಷಕ್ಕೆ ಭಾರತದ ಸಂವಿಧಾನ, ಸಂಸತ್ತು ರೂಪಿಸಿದ ಕಾನೂನು, ದೇಶದ ಸಂಸ್ಕೃತಿ ಬಗ್ಗೆ ಗೌರವವಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆರೋಪಿಸಿದರು.

ಮೂಡುಬಿದಿರೆಯಲ್ಲಿ ಸೋಮವಾರ ಸಂಜೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 150 ವರ್ಷಗಳ ಇತಿಹಾಸ ಹೊಂದಿರುವ ವಂದೇ ಮಾತರಂ ಗೀತೆಗೆ ಅಪಮಾನ ಮಾಡುವುದು ಕಾಂಗ್ರೆಸ್‌ನ ತುಷ್ಟೀಕರಣ ರಾಜಕಾರಣದ ಪರಮಾವಧಿ ಎಂದರು.

ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ವಂದೇ ಮಾತರಂ ಘೋಷಣೆ ಕೂಗಿ ಅನೇಕ ಹೋರಾಟಗಾರರು ತ್ಯಾಗ ಮಾಡಿದ್ದಾರೆ. 1937ರಲ್ಲಿ ಮುಸ್ಲಿಂ ಲೀಗ್ ಇದಕ್ಕೆ ವಿರೋಧ ವ್ಯಕ್ತಪಡಿಸಿತ್ತು. ಈಗ ಕೇರಳದಲ್ಲಿ ಮುಸ್ಲಿಂ ಲೀಗ್ ಕಾಂಗ್ರೆಸ್ನೊಂದಿಗೆ ಇರುವುದರಿಂದ ಈ ನಿಲುವು ತಳೆಯಲಾಗುತ್ತಿದೆಯೇ ಎಂದು ಅವರು ಪ್ರಶ್ನಿಸಿದರು.

ಕಾಂಗ್ರೆಸ್ ಪ್ರತಿ ಬಾರಿಯೂ ತುಷ್ಟೀಕರಣ ರಾಜಕಾರಣ ಮಾಡುತ್ತಿದೆ. ದೇಶಪ್ರೇಮದ ಪಾಠವನ್ನು ಕಾಂಗ್ರೆಸ್‌ನಿಂದ ಕಲಿಯುವ ಅಗತ್ಯ ಬಿಜೆಪಿಗೆ ಇಲ್ಲ. ವಂದೇ ಮಾತರಂ ಅನ್ನು ಬಿಜೆಪಿಯಲ್ಲಿ ಸಂಪೂರ್ಣವಾಗಿ ಹಾಡಲಾಗುತ್ತಿದ್ದು, ರಾಷ್ಟ್ರಗೀತೆಯಾದ ಜನಗಣಮನವನ್ನೂ ಗೌರವಿಸಲಾಗುತ್ತಿದೆ. ಕಾನೂನನ್ನು ವಿರೋಧಿಸುವವರು ಸಂಸತ್ತಿನಲ್ಲೇ ಏಕೆ ವಿರೋಧ ವ್ಯಕ್ತಪಡಿಸಲಿಲ್ಲ ಎಂದರು.

ತುಳು ಮಾನ್ಯತೆ ಸ್ವಾಗತ..

ಕರ್ನಾಟಕ ಸರಕಾರ ಸಂಪುಟ ಸಭೆಯಲ್ಲಿ ತುಳು ಭಾಷೆಗೆ ಮಾನ್ಯತೆ ನೀಡಿರುವುದನ್ನು ಸ್ವಾಗತಿಸುವುದಾಗಿ ಹೇಳಿದರು. ಆದರೆ ಪಿಪಿಪಿ ಮಾದರಿಯಲ್ಲಿ ಯೋಜನೆಗಳನ್ನು ಘೋಷಿಸಿದರೆ ಸಾಲದು. ಬಜೆಟ್‌ನಲ್ಲಿ ಸೂಕ್ತ ಅನುದಾನ ಮೀಸಲಿಟ್ಟು ತತ್ಕ್ಷಣ ಹಣ ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ ಟೈಯರ್-2 ನಗರಗಳಲ್ಲಿ ಅಭಿ ವೃದ್ಧಿ ಅಸಾಧ್ಯ ಎಂದರು.

ಯುಪಿಐ ವಿಸ್ತರಣೆಗೆ ಕ್ರಮ ಅಗತ್ಯ...

ಯುಪಿಐ ಪಾವತಿ ವ್ಯವಸ್ಥೆಯ ವಿಸ್ತರಣೆ ಹಾಗೂ ನಿರ್ವಹಣೆಗೆ ಹೆಚ್ಚಿನ ವೆಚ್ಚವಾಗುತ್ತಿದೆ. ಜಾಗತಿಕ ಮಟ್ಟದಲ್ಲಿ ಯುಪಿಐ ವ್ಯವಸ್ಥೆಯನ್ನು ಬೆಳೆಸಲು ಕೆಲವು ಕ್ರಮಗಳು ಅಗತ್ಯವಾಗಿವೆ. ಇದರಿಂದ ದೇಶದ ಶೇ. 96ರಷ್ಟು ಸಾಮಾನ್ಯ ಬಳಕೆದಾರರಿಗೆ  ತೊಂದರೆ ಯಾಗುವುದಿಲ್ಲ. ಕೇವಲ ಶೇ.4ರಷ್ಟು ಬಳಕೆದಾರರ ಮೇಲೆ ಪರಿಣಾಮ ಬೀರಲಿದೆ ಎಂದು ಹೇಳಿದರು.

ಡಿ.ಕೆ.ಶಿ. ವಿರುದ್ಧ ಟೀಕೆ..

ಸಿಎಂ ಡಿ.ಕೆ. ಶಿವಕುಮಾರ್ ಅವರ ದೇವಸ್ಥಾನ ಭೇಟಿ ಅವರ ವೈಯಕ್ತಿಕ ವಿಚಾರ. ಆದರೆ ಮಂಗಳೂರು ಸ್ಫೋಟದ ಆರೋಪಿಯನ್ನು "ಬ್ರದರ್ಸ್’ ಎಂದು ಕರೆದಿರುವ  ಅವರು ಓಟ್ ಬ್ಯಾಂಕ್ ಮತ್ತು ತುಷ್ಟೀಕರಣ ರಾಜಕಾರಣವನ್ನು ಬಿಡಲು ಸಾಧ್ಯವಿಲ್ಲ ಎಂದು ಆರೋಪಿಸಿದರು.

ರಾಹುಲ್ ಗಾಂಧಿ ವಿರುದ್ಧ ವಾಗ್ಧಾಳಿ..

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅಪ್ರಬುದ್ಧವಾಗಿ ನಡೆದುಕೊ ಳ್ಳುತ್ತಿದ್ದಾರೆ. ಜನರನ್ನು ಆಕರ್ಷಿಸಲು ಅವರು ಹಲವು ರೀತಿಯ ಪ್ರಯತ್ನ ಮಾಡುತ್ತಿದ್ದು, ಅದರಿಂದ ಜನರನ್ನು ಆಕರ್ಷಿಸಲು ಸಾಧ್ಯವಾಗಿಲ್ಲ ಎಂದರು.ಪ್ರಧಾನಿ ನರೇಂದ್ರ ಮೋದಿ ಅವರ ತಾಯಿಯನ್ನು ಅಪಮಾನಿಸುವ ರೀತಿಯ ಹೇಳಿಕೆ ನೀಡಿದವರನ್ನು ತಾನು ನೋಡಿಲ್ಲ. ರಾಹುಲ್ ಗಾಂಧಿ ಅಪ್ರಬುದ್ಧ ಜೋಕರ್ ಎಂದರು.ಕರ್ನಾಟಕದಲ್ಲಿ  ಕಾಂಗ್ರೆಸ್ ಅಧಿಕಾರದಿಂದ ಹೊರ ಹೋಗಲಿದೆ ಎಂದು ತಿಳಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article