ಲಕ್ಷದ್ವೀಪ ಜೆಟ್ಟಿ ಅಭಿವೃದ್ಧಿಗೆ ಸಿ.ಆರ್.ಝೆಡ್ ಅನುಮೋದನೆ

ಲಕ್ಷದ್ವೀಪ ಜೆಟ್ಟಿ ಅಭಿವೃದ್ಧಿಗೆ ಸಿ.ಆರ್.ಝೆಡ್ ಅನುಮೋದನೆ

ಮಂಗಳೂರು: ಕರ್ನಾಟಕ ಜಲಸಾರಿಗೆ ಮಂಡಳಿಯ ವತಿಯಿಂದ ಮಂಗಳೂರು ತಾಲೂಕಿನ ಗುರುಪುರದಲ್ಲಿ (NW-42)  ಜಲಮಾರ್ಗಗಳ  ಅಭಿವೃದ್ಧಿ ಯೋಜನೆ  ಹಾಗೂ  ಹಳೆ ಮಂಗಳೂರು ಬಂದರಿನಲ್ಲಿ ಸರಕು ಸಾಗಣೆ ಮತ್ತು ಕ್ರೂಸ್ ಟರ್ಮಿನಲ್ಗಾಗಿ, ಲಕ್ಷದ್ವೀಪಕ್ಕೆ ಮೀಸಲಾದ ಜೆಟ್ಟಿ ಹಾಗೂ ಅದಕ್ಕೆ ಸಂಬಂಧಿಸಿದ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುವ ಯೋಜನೆಗಳಿಗೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಪರಿಸರ ಆಲಿಕೆ ಸಭೆಯನ್ನು ನಡೆಸಲಾಗಿದ್ದು, ಯೋಜನೆಗಳಿಗೆ ರಾಜ್ಯ ಪರಿಸರ ಪ್ರಭಾವ ಮೌಲ್ಯಮಾಪನ ಪ್ರಾಧಿಕಾರ (SEIAA), ಕರ್ನಾಟಕ ಪರಿಸರ ಮತ್ತು  ಸಿ.ಆರ್.ಝೆಡ್ (CRZ )ಅನುಮೋದನೆಯನ್ನು ನೀಡಿದೆ. 

ಪರಿಸರ ಮತ್ತು ಸಿ.ಆರ್.ಝೆಡ್ ಅನುಮೋದನೆಯ ಪ್ರತಿಯು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಬಳಿ ಹಾಗೂ ಸಚಿವಾಲಯದ ವೆಬ್ಸೈಟ್ https://parivesh.nic.in ಮತ್ತು ಕರ್ನಾಟಕ ಕಡಲಸಾರಿಗೆ ಮಂಡಳಿಯ ವೆಬ್ಸೈಟ್ https://karnatakamaritime.in/ka-projects/   ನಲ್ಲಿ ಲಭ್ಯವಿದೆ ಎಂದು ಉಡುಪಿ ಬಂದರು ಮತ್ತು ಮೀನುಗಾರಿಕಾ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article