ಜಾರಕಿಹೊಳಿ ಇಡಿ ದಾಳಿ: ಆತ್ಮವಿಶ್ವಾಸ ಕುಗ್ಗಿಸುವ ಕುತಂತ್ರ

ಜಾರಕಿಹೊಳಿ ಇಡಿ ದಾಳಿ: ಆತ್ಮವಿಶ್ವಾಸ ಕುಗ್ಗಿಸುವ ಕುತಂತ್ರ

ಮಂಗಳೂರು: ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಸೇರಿದ ಮನೆ ಮತ್ತು ಕಚೇರಿ ಸೇರಿ 21 ಕಡೆಗಳಿಗೆ ಸೆ.9-10ರಂದು 36 ಗಂಟೆಗಳ ಕಾಲ ಜಾರಿ ನಿರ್ದೇಶನಾಲಯ (ಇಡಿ)ದ ಅಧಿಕಾರಿಗಳು ದಾಳಿ ನಡೆದಿಸಿದ್ದಾರೆ. ಇದು ಜಾರಕಿಹೊಳಿ ಅವರ ರಾಜಕೀಯ ಯಶಸ್ಸು  ಮತ್ತು ತಂತ್ರಗಾರಿಕೆಯನ್ನು ಸಹಿಸದ ಕೇಂದ್ರ ಸರಕಾರ, ಅವರ ಆತ್ಮವಿಶ್ವಾಸ ಕುಗ್ಗಿಸಲು ಮಾಡಿದ ಕುತಂತ್ರವಾಗಿ ಎಂದು  ಗಾನಿಕ್ ಇಂಡಿಯಾ ಪ್ರತಿಷ್ಠಾನ ಮಂಗಳೂರು ಆರೋಪಿಸಿದೆ.

ಸೋಮವಾರ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆ ಅಧ್ಯಕ್ಷ ನವೀನ್ ರೈ ಚೆಲ್ಯಡ್ಕ, ಜಾರಕಿಹೊಳಿ ಅವರು ಹಲವು ಚುನಾವಣೆಗಳಲ್ಲಿ ಬಿಜೆಪಿ ವಿರುದ್ಧ ತನ್ನ ತಂತ್ರಗಾರಿಕೆಯನ್ನು ಪ್ರದರ್ಶಿಸಿದ್ದರು. ಇದು ಸಹಜವಾಗಿ ಬಿಜೆಪಿಯ ನಿದ್ದೆಗೆಡಿಸಿದೆ. ಮೌಢ್ಯಮುಕ್ತ ಸಮಾಜಕ್ಕೆ ತನ್ನ ವೈಚಾರಿಕೆ ವಿಷಯಗಳ ಮೂಲಕ ತಕ್ಕ ಉತ್ತರ ಕೊಡುತ್ತಿದ್ದಾರೆ. ದಲಿತ ಸಮುದಾಯದಿಂದ ಬಂದಿರುವ ಅವರ ವಿರುದ್ಧ ಬಿಜೆಪಿ ಸಂಘ ಪರಿವಾರಕ್ಕೆ ವೈರತ್ವ ಇರುವುದರಿಂದ ಇಡಿ ದಾಳಿ ನಡೆದಿವೆ ಎಂದು ಆರೋಪಿಸಿದರು.

ಅವರ ವಿರುದ್ಧದ ಭ್ರಷ್ಟಾಚಾರ ಆರೋಪಕ್ಕೆ ಯಾವುದೇ ದಾಖಲೆ ಸಿಕ್ಕಲ್ಲ. ಭ್ರಷ್ಟಾಚಾರ ಆರೋಪವಿದ್ದರೂ ಅವರನ್ನು ತನಿಖೆ ಮಾಡಲು ಲೋಕಾಯುಕ್ತ ಸಂಸ್ಥೆಗೆ  ಮಾತ್ರ ಅವಕಾಶವಿದೆ. ಆದರೆ ಕೇಂದ್ರ ಸರಕಾರ ಜಾರಕಿಹೊಳಿ ಅವರನ್ನು ಇಕ್ಕಟ್ಟಿನಲ್ಲಿ ಸಿಲುಕಿಸಲು ಇಡಿಯನ್ನು ಬಳಸಿದೆ. ದೇಶದಲ್ಲಿ ಕಳೆದ 12 ವರ್ಷದಲ್ಲಿ 193 ಇಡಿ ದಾಳಿಗಳು ನಡೆದಿದ್ದು, ಈ ವರೆಗೆ 2ರಲ್ಲಿ ಮಾತ್ರ ಆರೋಪ ಸಾಬೀತಾಗಿದೆ. ಸುಪ್ರೀಂ ಕೋರ್ಟ್ ಕೂಡಾ ಇಡಿಗೆ ಛೀಮಾರಿ ಹಾಕಿದೆ. ಆದ್ದರಿಂದ ಮುಂದೆ ಇಂತಹ ಯಾವುದೇ ರಾಜಕೀಯ ಪ್ರೇರಿತ ದಾಳಿ ನಡೆಯಬಾರದು. ಇದೇ ಕೊನೆಯ ದಾಳಿ ಆಗಬೇಕು. ಇಲ್ಲವಾದಲ್ಲಿ ತಾಲೂಕು, ಜಿಲ್ಲಾ ಮಟ್ಟದಲ್ಲಿ ಹಾಗೂ ಬೆಂಗಳೂರಿನಲ್ಲೂ ದೊಡ್ಡ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಎಚ್ಚರಿಸಿದರು.

ಸಂಘಟನೆಯ ಪದಾಧಿಕಾರಿಗಳಾದ ದಿನೇಶ್ ಮೂಳೂರು, ಜಯರಾಮ ಪೂಜಾರಿ, ಅನ್ಸಾರುದ್ದೀನ್ ಸಾಲ್ಮರ ಹಾಗೂ ಶೇಷಪ್ಪ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article