ಪಚ್ಚನಾಡಿಯಲ್ಲಿ ಕಸ ವಿಂಗಡನೆ ಮಾಡುವ ಕಾರ್ಮಿಕರ ಬದುಕು ಬವಣೆ ಯಾರೂ ಉಹಿಸಲು ಅಸಾಧ್ಯ: ನಾಗರಾಜ್ ಬಜಾಲ್
ನಾನು ವಿದೇಶದಲ್ಲಿದ್ದಾಗ ನಡೆದ ಘಟನೆಯೇ ಈ ಬದಲಾವಣೆಗೆ ಕಾರಣ ಎನ್ನುತ್ತಾ ತನ್ನ ಅನುಭವವನ್ನು ಹಂಚಿಕೊಂಡು, ವಿದೇಶಿರಿಗರು ಕಸವನ್ನು ಎಲ್ಲೆಂದರಲ್ಲಿ ಹಾಕುವುದಿಲ್ಲ ಪರಿಸರದ ಬಗ್ಗೆ ಅವರಿರುವಷ್ಟು ಜ್ಞಾನ ಭಾರತೀಯ ಜನರಿಗೆ ಇಲ್ಲ ಎಂದರು. ಪರಿಸರ ಸಂರಕ್ಷಣೆಯ ಕಾರ್ಯ ಮಾಡುವ ಹಿನ್ನೆಲೆಯಲ್ಲಿ ವಿವಿಧ ಸ್ಥಳಗಳಲ್ಲಿ ಹಾಗೂ ಗ್ರಾಮ ಪಂಚಾಯತ್ ಗಳಲ್ಲಿ ಸ್ವಚ್ಛತೆ ಮಾಡುವ ಕ್ರಮಗಳನ್ನು ತಿಳಿದು, ಹಸಿರುದಳ ಎಂಬ ಸಂಘಟನೆ ಕಟ್ಟಿ ಪರಿಸರ ಸ್ವಚ್ಛತೆ ಕಾಯಕಕ್ಕೆ ಮುಂದಡಿ ಇಟ್ಟಿದ್ದಾರೆ. ಇದಕ್ಕಾಗಿ ಕಾರವಾರದಿಂದ ಮಂಗಳೂರು ತನಕ ಸುಮಾರು 300 ಕಿಲೋ ಮೀಟರ್ ನಡೆದು ಜನರು ಅಲ್ಲಲ್ಲಿ ಕಸ ಬಿಸಡದಾಂತೆ ಜಾಗೃತಿ ಮೂಡಿಸಿರುವ ಇವರು ಕೊರಾನ ವಾರಿಯರ್ ಕೆಲಸ ಮಾಡಿರುತ್ತಾರೆ. ಇಂತಹ ಜಾಗೃತಿ ಮೂಡಿಸುವ ಕೆಲಸಕ್ಕೆ ನಾವು ಹೋಗುವ ಮೊದಲು ನಮ್ಮ ಜೀವನದಲ್ಲಿ ಬದಲಾವಣೆ ಮಾಡಬೇಕು ಬಳಿಕ ಪರಿಸರ ರಕ್ಷಣೆ ಮಾಡುವ ಮುಖಾಂತರ ಸಮಾಜದ ಬದಲಾವಣೆಗೆ ಹೋಗಲು ಸಾಧ್ಯ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷೆತೆಯನ್ನು ಘಟಕದ ಅಧ್ಯಕ್ಷ ಹರೀಶ್ ಕೆ. ಸುವರ್ಣ ವಹಿಸಿದರು.
ಸಂಪನ್ಮೂಲ ವ್ಯಕ್ತಿಯಾಗಿ ಬಂದಿದ್ದ, ಪರಿಸರವಾದಿ ನಾಗರಾಜ್ ಬಜಾಲ್ ಇವರನ್ನು ಮಂಗಳೂರು ಘಟಕದ ಮಾಜಿ ಅಧ್ಯಕ್ಷರಾದ ಹರೀಶ್ ಕೆ. ಪೂಜಾರಿ ಇವರು ಹೂ ನೀಡಿ ಸ್ವಾಗತಿಸಿದರು.
ಕಸ ನಿರ್ವಹಣೆ ಬಗ್ಗೆ ಮಾಹಿತಿ ನೀಡಿದ ಸಂಪನ್ಮೂಲ ವ್ಯಕ್ತಿ ನಾಗರಾಜ್ ಬಜಾಲ್ ಇವರನ್ನು ಘಟಕದ ಅಧ್ಯಕ್ಷರು ಹಾಗೂ ಮಾಜಿ ಅಧ್ಯಕ್ಷರುಗಳು ಗೌರವಿಸಿದರು. ಸಭೆಯಲ್ಲಿ ಪದಾಧಿಕಾರಿಗಳು ಹಾಗೂ ಇತರ ಸದಸ್ಯರು ಉಪಸ್ಥಿತರಿದ್ದರು.
ಕಾರ್ಯದರ್ಶಿ ಉಷಾ ಕಳೆದ ಸಭೆಯ ವರದಿ ಮಂಡಿಸಿ ಅನುಮೋದನೆ ಪಡೆದರು, ಘಟಕದ ಸದಸ್ಯರಾದ ದೀಕ್ಷಾ ಸಾಲ್ಯಾನ್ ಗುರು ಸಂದೇಶವನ್ನು ವಾಚಿಸಿದರು. ಮಹಿಳಾ ಸಂಘಟನಾ ನಿರ್ದೇಶಕಿ ಜಯಂತಿ ಕೋಟ್ಯಾನ್ ವಂದಿಸಿದರು.

