ಮಂಗಳೂರಿನಲ್ಲಿ ನಡೆದ ಸಚಿವ ಸಂಪುಟ ಸಭೆಯು ಮುಖ್ಯಮಂತ್ರಿಗಳ ಮಹಾ ನಾಟಕ: ಸತೀಶ್ ಕುಂಪಲ
ಮಂಗಳೂರು: ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಕರ್ನಾಟಕ ಸರ್ಕಾರದ ಸಚಿವ ಸಂಪುಟದ ಸಭೆಯಲ್ಲಿ ಮುಖ್ಯಮಂತ್ರಿಗಳು ಹಲವಾರು ಅಭಿವೃದ್ಧಿ ಕಾರ್ಯಗಳಿಗೆ ಸರಿಸುಮಾರು 32,000 ಕೋಟಿ ಯೋಜನೆಗಳ ಘೋಷಣೆಗಳನ್ನು ಮಾಡಿದ್ದಾರೆ. ಆದರೆ ಇದು ದಕ್ಷಿಣಕನ್ನಡದ ಜನತೆಯನ್ನು ಮರಳು ಮಾಡಲು ಹೊರಟಿರುವ ತಂತ್ರ ಎಂದು ಬಯಲಾಗಿದೆ. ರಾಜ್ಯದ ಆರ್ಥಿಕ ಇಲಾಖೆಯು, ಹಣದ ಕೊರತೆಯಿಂದ ಯಾವುದೇ ಹೊಸ ಯೋಜನೆಗಳನ್ನು ಘೋಷಣೆ ಮಾಡದಂತೆ ಸೆ.17 ರಂದು ಸಂಪುಟ ಸಭೆಯ ಹಿಂದಿನ ದಿನ ಟಿಪ್ಪಣಿಯನ್ನು ನೀಡಿರುತ್ತದೆ.
ಈಗಾಗಲೇ 2026-27ನೇ ಸಾಲಿನ ಬಜೆಟ್ ಅನುಷ್ಠಾನಕ್ಕೆ 27,000 ಸಾವಿರ ಕೋಟಿ ರೂ. ಕೊರತೆಯನ್ನು ಎದುರಿಸುತ್ತಿದೆ ಎಂದು ಆರ್ಥಿಕ ಇಲಾಖೆ ಸ್ಪಷ್ಟವಾಗಿ ತಿಳಿಸಿದ್ದಾರೆ. ಹಾಗಾದರೆ ಮಂಗಳೂರಿನಲ್ಲಿ ಘೋಷಿಸಿರುವ 32,000 ಸಾವಿರ ಕೋಟಿ ರೂ.ಗಳನ್ನು ಮುಖ್ಯಮಂತ್ರಿಗಳೇ ಎಲ್ಲಿಂದ ತರುತ್ತೀರಿ? ಎಂದು ಭಾರತೀಯ ಜನತಾ ಪಾರ್ಟಿಯ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಪ್ರಕಟಣೆಯಲ್ಲಿ ಪ್ರಶ್ನಿಸಿದ್ದಾರೆ.
ರಾಜ್ಯದ ಆರ್ಥಿಕ ಪರಿಸ್ಥಿತಿ ಡೋಲಾಯನವಾಗಿದೆ. ಕೆಎಸ್‌ಆರ್‌ಟಿಸಿ ನೌಕರರಿಗೆ ಸಂಬಳ ನೀಡಲು ಹಣವಿಲ್ಲ ಎಂದು ಇಲಾಖೆಯ ಎಂ.ಡಿ. ಹೇಳುತ್ತಾರೆ. ಶಾಲಾ ಮಕ್ಕಳಿಗೆ ಶೂ, ಸಾಕ್ಸ್ ನೀಡಲು ಅನುದಾನವಿಲ್ಲ. ಗುತ್ತಿಗೆದಾರರಿಗೆ ಹಣ ಪಾವತಿಯಾಗುತ್ತಿಲ್ಲ. ವಿದ್ಯುತ್ ಇಲಾಖೆಯು ಆರ್ಥಿಕ ದುಸ್ಥಿತಿಯ ಸುಳಿಯಲ್ಲಿದೆ.
ಸರಕಾರ ಈಗಾಗಲೇ ಲೋಕೋಪಯೋಗಿ ಇಲಾಖೆ ಸಣ್ಣ ನೀರಾವರಿ, ಬೃಹತ್ ನೀರಾವರಿ, ಗ್ರಾಮೀಣ ಆಭಿವೃದ್ಧಿ ಇಲಾಖೆ ಸರಕಾರದಿಂದ 36,136 ಕೊಟಿ ರೂ. ಪಾವತಿಗೆ ಬಾಕಿ ಇದೆ. ಬರ ನಿರ್ಮಾಣಕ್ಕೆ ರಾಜ್ಯ ಸರಕಾರಕ್ಕೆ 5,000 ಕೊಟಿ ಆಗತ್ಯವಿದೆ ಎಂದು ಅರ್ಥಿಕ ಇಲಾಖೆ ತಿಳಿಸಿದೆ. ಪ್ರತೀ ತಿಂಗಳ ಹಣಕಾಸಿನ ನಿರ್ವಹಣೆ ಮಾಡಲು ಸಾದ್ಯವಾಗುತ್ತಿಲ್ಲ ಕಳೆದ ಬಜೆಟ್‌ನಲ್ಲಿ ಘೋಷಣೆ ಮಾಡಿರುವ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಲಾಗುತ್ತಿಲ್ಲವಾದುದರಿಂದ ಮತ್ತು ಗ್ಯಾರಂಟಿ ಯೋಜನೆಗಳನ್ನು ಜನರಿಗೆ ನೀಡಲಾಗುತ್ತಿಲ್ಲ. ಆದುದರಿಂದ ಸರಕಾರದಿಂದ ಆರ್ಥಿಕ ಇಲಾಖೆಯು ಮಂಗಳೂರು ಸಂಫುಟ ಸಭೆಗೆ ಮುನ್ನ ದಿನ ಸರಕಾರದ ಆರ್ಥಿಕ ಪರಿಸ್ಥಿತಿಯ ನೈಜತೆಯನ್ನು ಅರಿತು ಕೊಂಡು ಘೋಷಣೆಗಳನ್ನು ಮಾಡಬೇಕು ಮತ್ತು ಸರಕಾರವು ಆರ್ಥಿಕವಾಗಿ ಮುಗ್ಗಟ್ಟಿನಲ್ಲಿರುವುದರಿಂದ ಹೊಸ ಘೋಷಣೆ, ಆರ್ಥಿಕ ಘೋಷಣೆಗಳನ್ನು ಮಾಡಬಾರದೆಂದು ತಿಳಿಸಿದೆ. ಆದರೂ ರಾಜ್ಯದ ಮುಖ್ಯ ಮಂತ್ರಿಗಳು ಸಹಿತ ರಾಜ್ಯದ ಮಂತ್ರಿಗಳು ಮಂಗಳೂರಿನಲ್ಲಿ ಸಂಪುಟ ಸಭೆ ನಡೆಸಿ 32,0000 ಕೋಟಿ ರೂ.ನ ಯೋಜನೆಯನ್ನು ಘೋಷಣೆ ಮಾಡಿರುವುದು ಜಿಲ್ಲೆಯ ಜನರಿಗೆ ಮೋಸ ಮಾಡುವ ಹೊಸ ನಾಟಕ ಆಗಿದೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.