ಮೂಡುಬಿದಿರೆ ಕಡಲಕೆರೆಗೆ 20,000 ಮೀನು ಮರಿಗಳ ಸಮಪ೯ಣೆ, ಬೋಟಿಂಗ್ ಗೆ ಚಾಲನೆ

ಮೂಡುಬಿದಿರೆ ಕಡಲಕೆರೆಗೆ 20,000 ಮೀನು ಮರಿಗಳ ಸಮಪ೯ಣೆ, ಬೋಟಿಂಗ್ ಗೆ ಚಾಲನೆ


ಮೂಡುಬಿದಿರೆ: ಇಲ್ಲಿನ ಅರಣ್ಯ ಇಲಾಖೆ ಮತ್ತು ರೋಟರಿ ಕ್ಲಬ್ ನೇತೃತ್ವದಲ್ಲಿ ಕಡಲಕೆರೆಗೆ ಮೀನು ಮರಿಗಳನ್ನು ಬಿಡುವ, ಬೋಟಿಂಗ್ ಉದ್ಘಾಟನೆ ಹಾಗೂ ವನಮಹೋತ್ಸವ ಕಾಯ೯ಕ್ರಮವು ಶನಿವಾರ ನಡೆಯಿತು. 


ಶಾಸಕ ಉಮಾನಾಥ ಎ ಕೋಟ್ಯಾನ್ ಅವರು  ಕಡಲಕೆರೆಗೆ ಕಾಟ್ಲಾ, ರೋಹೋ, ಕಾಮನ್ ಕಾಪ್೯ ತಳಿಯ 20,000 ಮೀನು ಮರಿಗಳನ್ನು ಸಮಪಿ೯ಸಿ, ಬೋಟಿಂಗ್ ಗೆ ಚಾಲನೆ ನೀಡಿ ಮಾತನಾಡಿ, ಕಡಲಕೆರೆಯಲ್ಲಿ ವಷ೯ವಿಡೀ ಜಲಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ರೂ. ಹತ್ತು ಕೋಟಿಯ ಯೋಜನೆಯ ಪ್ರಸ್ತಾವಣೆಯನ್ನು 6 ವಷ೯ಗಳ ಹಿಂದೆ ಸರಕಾರಕ್ಕೆ ಸಲ್ಲಿಸಲಾಗಿದೆ.  ಅನುದಾನ ಲಭಿಸದಿರುವುದರಿಂದ ಯೋಜನೆ ಕಾಯ೯ಗತಗೊಂಡಿಲ್ಲ ಆದ್ದರಿಂದ ಮಂಗಳೂರಿನಲ್ಲಿ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ಗಮನ ಸೆಳೆದು ಯೋಜನೆಯನ್ನು ಕಾಯ೯ಗತಗೊಳಿಸಲು ಪ್ರಯತ್ನಿಸಲಾಗುವುದು. ಈ ಯೋಜನೆ ಸಾಕಾರಗೊಂಡಲ್ಲಿ ಮತ್ಸೋದ್ಯಮದ ಬೆಳವಣಿಗೆಯ ಜತೆಗೆ ಜಲಸಂರಕ್ಷಣೆಯಾಗಲಿದೆ ಎಂದರು. 

ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಆಕಾಶ್ ಅವರು ಮಾತನಾಡಿ ಅರಣ್ಯ ಪ್ರದೇಶವನ್ನು ಪ್ಲಾಸ್ಟಿಕ್ ಮುಕ್ತಗೊಳಿಸಬೇಕು ಹಾಗೂ ಕಡಲಕೆರೆಗೆ ಕಾಖಾ೯ನೆಗಳಿಂದ ಕಲುಷಿತ ನೀರನ್ನು ಬಿಡದಂತೆ ಎಚ್ಚರ ವಹಿಸಬೇಕೆಂದರು.

ಸಾಲು ಮರ ತಿಮ್ಮಕ್ಕ ವೃಕ್ಷ ಉದ್ಯಾನವನದಲ್ಲಿ ವನ ಮಹೋತ್ಸವ ಆಚರಿಸಲಾಯಿತು. 

ಪುರಸಭೆಯ ಮುಖ್ಯಾಧಿಕಾರಿ ಇಂದು ಎಂ,  ಸಾವ೯ಜನಿಕ ಗಣೇಶೋತ್ಸವ ಟ್ರಸ್ಟ್ನ ಅಧ್ಯಕ್ಷ ನಾರಾಯಣ ಪಿ. ಎಂ, ರೋಟರಿ ಕ್ಲಬ್ ಅಧ್ಯಕ್ಷ ಡಾ. ಆಶೀರ್ವಾದ್, ಕಾಯ೯ದಶಿ೯ ಪ್ರಜ್ವಲ್ ಆಚಾರ್, ರೋಟರಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ  ಪಿ. ಕೆ. ತೋಮಸ್, ಪುರಸಭೆಯ ಮಾಜಿ ಉಪಾಧ್ಯಕ್ಷ ನಾಗರಾಜ ಪೂಜಾರಿ, ಇನ್ನರ್ ವ್ಹೀಲ್ ಕ್ಲಬ್ ಅಧ್ಯಕ್ಷೆ ನಿಶ್ಮಿತಾ, ಹಿರಿಯ ನ್ಯಾಯವಾದಿ ಕೆ. ಆರ್. ಪಂಡಿತ್, ದೋಣಿ ವಿಹಾರದ ನಿವಾ೯ಹಕರಾದ ಡಾ. ಎಂ.ಎಸ್. ನಝೀರ್ ಉಪಸ್ಥಿತರಿದ್ದರು.

ಉಪ ವಲಯಾರಣ್ಯಾಧಿಕಾರಿಗಳಾದ ಕೃಷ್ಣಮೂರ್ತಿ, ಬಸಪ್ಪ, ಗಸ್ತು ಅರಣ್ಯ ಪಾಲಕರು ಈ ಸಂದಭ೯ದಲ್ಲಿದ್ದರು.

ಮಂಗಳೂರು ವೃತ್ತ ಉಪ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಧರ್ ಪಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ವಲಯ ಅರಣ್ಯಾಧಿಕಾರಿ ಕಿರಣ್ ಕುಮಾರ್ ಸ್ವಾಗತಿಸಿ ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article