ಶ್ರೀ ಪಂಚಶಕ್ತಿ ವಿವಿದೋದ್ದೇಶ ಸಹಕಾರಿ ಸಂಘದ ಮಹಾಸಭೆ: 2025-26ನೇ ಸಾಲಿನಲ್ಲಿ 13 ಲಕ್ಷ ಲಾಭಾಂಶ: ರಂಜಿತ್ ಪೂಜಾರಿ
ಎಸ್ಸೆಸೆಲ್ಸಿಯಲ್ಲಿ 85% ಕ್ಕಿಂತ ಹೆಚ್ಚು ಅಂಕಗಳಿಸಿರುವ ಸ್ವಸಹಾಯ ತಂಡದ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿ ವೇತನವನ್ನು ವಿತರಿಸಲಾಯಿತು. ಐದು ಜನ ಉತ್ತಮ ಗ್ರಾಹಕರನ್ನು ಗುರುತಿಸಿ ಗೌರವಿಸಲಾಯಿತು. ಅತಿ ಹೆಚ್ಚು ಪಿಗ್ಮಿ ಸಂಗ್ರಹಣೆ ಮಾಡಿದ ದಿನೇಶ್ ಪೂಜಾರಿಯವರನ್ನು ಸನ್ಮಾನಿಸಲಾಯಿತು.
ಮುಖ್ಯ ಕಾರ್ಯನಿರ್ವಣಾಧಿಕಾರಿ ಯು. ರಾಜಶೇಖರ್ ಮಧ್ಯಸ್ಥ ಅವರು ಮಹಾಸಭೆಯ ನೋಟಿಸ್ ನ್ನು ಓದಿ ದಾಖಲಿಸಿ 25- 26 ನೇ ಸಾಲಿನ ವಾರ್ಷಿಕ ವರದಿಯನ್ನು ಮಂಡಿಸಿ ಮಂಜೂರಾತಿ ಪಡೆದುಕೊಂಡರು.
ನಿರ್ದೇಶಕ ಸುರೇಶ್ ಪೂಜಾರಿ ಅವರು 2024-25 ಸಾಲಿನ ಮಹಾಸಭೆಯ ನಡವಳಿಕೆಯನ್ನು ಓದಿದರು. ಗಣೇಶ್ .ಆರ್. ನಾಯ್ಕ್ ಅವರು 25- 26ನೇ ಸಾಲಿನ ಲೆಕ್ಕ ಪರಿಶೋಧಿತ ಲೆಕ್ಕಪತ್ರಗಳನ್ನು ಮಂಡನೆಯು ಮಂಡಿಸಿದರು. ಬಜೆಟ್ ಕ್ಕಿಂತ ಜಾಸ್ತಿಯಾದ ಖರ್ಚಿಗೆ ಸ್ವಾತಿ ಅವರು ಮಂಡಿಸಿ ಮಂಜೂರಾತಿ ಪಡೆದುಕೊಂಡರು.
ನಿದೇ೯ಶಕ ರಾಜೇಂದ್ರ .ಬಿ ಅವರು ಲಾಭಾಂಶವನ್ನು ವಿಂಗಡನೆ ಮಾಡಿದರು. ಶರತ್ .ಜೆ. ಶೆಟ್ಟಿ ಅವರು 26-27ನೇ ಸಾಲಿನ ಬಜೆಟ್ ಮಂಡಿಸಿದರು. ಉಪಾಧ್ಯಕ್ಷರಾದ ಶಂಕರನಾರಾಯಣ ಭಟ್ ಇವರು ಲೆಕ್ಕ ಪರಿಶೋಧನೆ ಮಂಡಿಸಿದರು.
ರೇಖಾ ಕೋಟ್ಯಾನ್ ಮಾಹಿತಿ ನೀಡಿದರು.
ಪ್ರತಿಭಾ ಅವರು ಸ್ವಸಹಾಯ ತಂಡದ 3 ವರ್ಷದ ಲಾಭಾಂಶವನ್ನು ಮಂಡಿಸಿದರು.
ನಿರ್ದೇಶಕರಾದ ರಮೇಶ .ಎಸ್. ಶೆಟ್ಟಿ ಸ್ವಾಗತಿಸಿದರು. ಗೋಪಾಲ್ ಶೆಟ್ಟಿಗಾರ್ ಕಾರ್ಯಕ್ರಮವನ್ನು ನಿರೂಪಿಸಿದರು. ನಿರ್ದೇಶಕಿ ಉಷಾ ಭಂಡಾರಿ ವಂದಿಸಿದರು.
