ಮೂಡುಬಿದಿರೆಯಲ್ಲಿ ಕಂಬಳ ಅಕಾಡೆಮಿಯಿಂದ ಓಟಗಾರರಿಗೆ ತರಬೇತಿ ಶಿಬಿರ ಆರಂಭ

ಮೂಡುಬಿದಿರೆಯಲ್ಲಿ ಕಂಬಳ ಅಕಾಡೆಮಿಯಿಂದ ಓಟಗಾರರಿಗೆ ತರಬೇತಿ ಶಿಬಿರ ಆರಂಭ


ಮೂಡುಬಿದಿರೆ: ಕಂಬಳ ಸಂರಕ್ಷಣೆ, ನಿರ್ವಹಣೆ ಮತ್ತು ತರಬೇತಿ ಅಕಾಡೆಮಿ ಮಿಯಾರು ಕಾರ್ಕಳ ಇದರ ವತಿಯಿಂದ 10 ದಿನಗಳ ಕಾಲ ನಡೆಯುವ ಏಳನೇ ವಷ೯ದ ಕಂಬಳ ತರಬೇತಿ ಶಿಬಿರವು ಶನಿವಾರ ಕಡಲಕೆರೆಯ ಸೃಷ್ಠಿ ಗಾರ್ಡನಲ್ಲಿನಲ್ಲಿ ಆರಂಭಗೊಂಡಿತು. 


ಶಾಸಕ ಉಮಾನಾಥ ಎ. ಕೋಟ್ಯಾನ್ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ ಹಿಂದೆ ಪೂಕರೆ ಮತ್ತು ದೈವದ ಕಂಬಳಗಳಿಗೆ ಮಾತ್ರ ಸೀಮಿತವಾಗಿದ್ದ ಕಂಬಳಗಳು ಇಂದು ಆಧುನಿಕ ಸ್ಪಶ೯ವನ್ನು ಪಡೆದುಕೊಂಡಿದೆ. ಜನಪದ ಕ್ರೀಡೆಯಾಗಿರುವ ಕಂಬಳಕ್ಕೆ ಭವಿಷ್ಯವಿದೆ ಆದ್ದರಿಂದ ಶಿಬಿರಾಥಿ೯ಗಳು ಶಿಸ್ತು, ನಿಯಮವನ್ನು ಪಾಲಿಸಿ, ಆರೋಗ್ಯವನ್ನು ಕಾಪಾಡಿಕೊಂಡು ಗುರಿ ಮತ್ತು ಆತ್ಮವಿಶ್ವಾಸದೊಂದಿಗೆ ಮುನ್ನಡೆದರೆ ಯಶಸ್ಸು ಸಾಧ್ಯ ಎಂದು ಹೇಳಿದರು. 


ಆದಾನಿ ಗ್ರೂಫ್ ನ ಆಡಳಿತ ನಿದೇ೯ಶಕ ಕಿಶೋರ್ ಆಳ್ವ  ಶಿಬಿರಾಥಿ೯ಗಳಿಗೆ ಜೆಸಿ೯ಯನ್ನು ವಿತರಿಸಿ ಮಾತನಾಡಿ ಶಿಸ್ತು, ಕ್ರೀಡಾ ಮನೋಭಾವನೆಯ ಜತೆಗೆ ಕೋಣಗಳ ಆರೈಕೆಗಳ ಬಗ್ಗೆಯೂ ಗಮನ ಹರಿಸಿ ಎಂದು ಸಲಹೆ ನಿಡಿದರು.


ಕಂಬಳ ಶಿಸ್ತು ಸಮಿತಿಯ ಅಧ್ಯಕ್ಷ ಭಾಸ್ಕರ್ ಎಸ್. ಕೋಟ್ಯಾನ್ ಮಾತನಾಡಿ ಶಿಬಿರಗಳಲ್ಲಿ ತರಬೇತಿಯನ್ನು ಮಾತ್ರ ಪಡೆಯುವುದಲ್ಲ ಗದ್ದೆಗಳಲ್ಲಿ ಕೋಣಗಳನ್ನು ಉಳುಮೆ ಮಾಡುವುದನ್ನು ಕಲಿಯಬೇಕು. ಕಂಬಳಗಳಲ್ಲಿ ಮೊದಲಿಗೆ ಸಣ್ಣ ಕೋಣಗಳನ್ನು ಓಡಿಸಿದಾಗ ಮಾತ್ರ ದೊಡ್ಡ ಕೋಣಗಳನ್ನು ಓಡಿಸಲು ಧೈ ಯ೯ ಬರುತ್ತದೆ ಎಂದ ಅವರು ತಾನು ಕೂಡಾ ಗದ್ದೆಗಳಲ್ಲಿ ಉಳುಮೆ ಮಾಡಿ, ಕೋಣಗಳನ್ನು ಓಡಿಸಿ ನಂತರ ಕಂಬಳ ಕೋಣಗಳ ಯಜಮಾನನಾಗಿದ್ದೇನೆ ಎಂದರು.

ಜಿಲ್ಲಾ ಕಂಬಳ ಸಮಿತಿಯ ಮಾಜಿ ಅಧ್ಯಕ್ಷ  ಬೆಳುವಾಯಿ ಸದಾನಂದ ಶೆಟ್ಟಿ ಮಾತನಾಡಿ ಸಮವಸ್ತ್ರ ವಿತರಿಸಿ ಮಾತನಾಡಿ ಕಂಬಳ ಸಮಿತಿ ಇರುವಾಗ ಕಂಬಳಗಳು ಶಿಸ್ತಿನಲ್ಲಿ ನಡೆಯುತ್ತಿದ್ದವು ಆದರೆ ಕಳೆದ ಎರಡ್ಮೂರು ವರುಷಗಳಿಂದ ಕಂಬಳಗಳ ಸ್ಥಿತಿ ಬದಲಾಗಿದೆ. ಸಮಯಕ್ಕೆ ಸರಿಯಾಗಿ ಕಂಬಳಗಳು ನಡೆಯುತ್ತಿಲ್ಲ. ಯಾರ್ಯಾರ ಕೋಣಗಳನ್ನು ಯಾಯಾ೯ರ ಹೆಸರಿನಲ್ಲಿ ಓಡಿಸಲಾಗುತ್ತಿದೆ ಎಂದರು. 

ಮೂಡುಬಿದಿರೆ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಹಷ೯ವಧ೯ನ್ ಪಡಿವಾಳ್, ಹೊಕ್ಕಾಡಿಗೋಳಿ ಕಂಬಳದ ಸಂಘಟಕ ರಶ್ಮಿತ್ ಶೆಟ್ಟಿ ನೋಣಾಲ್ ಗುತ್ತು, ಕಂಬಳ ಕೋಣಗಳ ಯಜಮಾನರುಗಳಾದ ಇರುವೈಲು ಪಾಣಿಲ ಸತೀಶ್ಚಂದ್ರ ಸಾಲ್ಯಾನ್,  ರಂಜಿತ್ ಪೂಜಾರಿ, ಸಮಿತಿಯ ಸುಭಾಶ್ಚಂದ್ರ ಚೌಟ, ಜ್ವಾಲಾ ಪ್ರಸಾದ್, ಉಮೇಶ್ ಕಕೇ೯ರಾ, ತರಬೇತುದಾರ ಜೋನ್ ಸಿರಿಲ್ ಡಿ'ಸೋಜ ಉಪಸ್ಥಿತರಿದ್ದರು. 

ಕಂಬಳ ಅಕಾಡೆಮಿಯ ಸಂಚಾಲಕರಾದ ಗುಣಪಾಲ ಕಡಂಬ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ ೧೦ ದಿನಗಳ ಕಾಲ 40 ಮಂದಿ ಶಿಬಿರಾಥಿ೯ಗಳಿಗೆ ಕಂಬಳ ಕ್ಷೇತ್ರದ ವಿವಿಧ ಅನುಭವಿಗಳಿಂದ ತರಬೇತಿ ನೀಡಲಾಗುವುದು. ಕೋಣಗಳನ್ನು ಓಡಿಸುವುದು, ಕೋಣಗಳ ಸಾಕಣೆ, ಆಹಾರ ಪದ್ದತಿ, ಹಗ್ಗ ನೇಯ್ಗೆ, ಯೋಗ, ಆತ್ಮಸ್ಥೆಯ೯ ಹೆಚ್ಚಿಸಲು ಮಾನಸಿಕ ತಜ್ಞರಿಂದ ಮಾಹಿತಿ, ವ್ಯಕ್ತಿತ್ವ ವಿಕಸನ ಕಾರ್ಯಕ್ರಮ ನಡೆಯಲಿದೆ ಎಂದರು. 

ಉದ್ಘೋಷಕ ರವೀಂದ್ರ ಕುಕ್ಕುಂದೂರು ಕಾಯ೯ಕ್ರಮ ನಿರೂಪಿಸಿ ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article