ಪಾಡ್ಯಾರಿನಲ್ಲಿ ನಿಮಾ೯ಣವಾಗಲಿರುವ ರೋಟರಿ ಆಯುವೇ೯ದ ವನಕ್ಕೆ ಚಾಲನೆ

ಪಾಡ್ಯಾರಿನಲ್ಲಿ ನಿಮಾ೯ಣವಾಗಲಿರುವ ರೋಟರಿ ಆಯುವೇ೯ದ ವನಕ್ಕೆ ಚಾಲನೆ


ಮೂಡುಬಿದಿರೆ: ರೋಟರಿ ಕ್ಲಬ್ ಮೂಡುಬಿದಿರೆ ಹಾಗೂ ಅರಣ್ಯ ಇಲಾಖೆ,ಮೂಡುಬಿದಿರೆಯ ಸಹಯೋಗದಲ್ಲಿ ಬನ್ನಡ್ಕ ಪಾಡ್ಯಾರಿನಲ್ಲಿ ನಿರ್ಮಾಣವಾಗಲಿರುವ ರೋಟರಿ ಆಯುರ್ವೇದ ವನಕ್ಕೆ ರೋಟರಿ ಕ್ಲಬ್ ಅಧ್ಯಕ್ಷ ಡಾ.ಆಶೀರ್ವಾದ್ ಅವರು ಭಾನುವಾರ ಚಾಲನೆ ನೀಡಿದರು.


ನಂತರ ಮಾತನಾಡಿದ ಡಾ.ಆಶೀರ್ವಾದ್ ಅವರು ‘ವಿನಾಶದ ಅಂಚಿನಲ್ಲಿರುವ ಆಯುರ್ವೇದ ಗಿಡಗಳನ್ನು ರಕ್ಷಿಸಿ ಉಳಿಸುವ ನಿಟ್ಟಿನಲ್ಲಿ ಪಾಡ್ಯಾರಿನಲ್ಲಿ ಸುಮಾರು ಒಂದು ಎಕ್ರೆ ಜಾಗದಲ್ಲಿ ವಿವಿಧ ಪ್ರಭೇದಗಳ ಗಿಡಗಳನ್ನು ನೆಡುವ ಯೋಜನೆಯನ್ನು ಅರಣ್ಯ ಇಲಾಖೆ ಹಾಗೂ ಪಾಡ್ಯಾರ್ ಜನರ ಸಹಕಾರದಲ್ಲಿ ಹಮ್ಮಿಕೊಂಡಿದ್ದು ಶೀಘ್ರದಲ್ಲೇ ಇಲ್ಲೊಂದು ಸುಂದರವಾದ ರೋಟರಿ ಆಯುರ್ವೇದ ವನ ನಿರ್ಮಾಣವಾಗಲಿದೆ’ ಎಂದರು.

ವನ ನಿರ್ಮಾಣಕ್ಕೆ ಹೆಚ್ಚುವರಿ ಜಾಗ ನೀಡಿದ ಪಾಡ್ಯಾರಿನ ವಸಂತ ಶೆಟ್ಟಿ ಹಾಗೂ ಕುಟುಂಬಸ್ಥರಿಗೆ ಅವರು ಕೃತಜ್ಞತೆ ಸಲ್ಲಿಸಿದರು.

ಶ್ರೀ ನಾಗಬ್ರಹ್ಮ ರಕ್ತೇಶ್ವರಿ ಸೇವಾ ಸಮಿತಿಯ ಆಶ್ರಯದಲ್ಲಿ ಇಲ್ಲಿನ ನಾಗಬನದ ಬಳಿ ಇದೇ ಸಂದರ್ಭದಲ್ಲಿ ವನಮಹೋತ್ಸವ ಕಾರ್ಯಕ್ರಮವನ್ನು ನಡೆಸಲಾಯಿತು.

ರೋಟರಿ ಕ್ಲಬ್ ಕಾರ್ಯದರ್ಶಿ ಪ್ರಜ್ವಲ್ ಆಚಾರ್,ರೋಟರಿ ಕ್ಲಬ್ ನ ನಾರಾಯಣ ಪಿ.ಎಂ, ಪ್ರಕಾಶ್ ಪೂಜಾರಿ, ಪಿ.ಕೆ.ಥೋಮಸ್,ಶರೀಫ್,ಶ್ರೀಕಾಂತ ಕಾಮತ್,ಜಯರಾಮ ಕೋಟ್ಯಾನ್, ಸಂತೋಷ್ ಕುಮಶರ್ ಹಾಗೂ ಪದಾಧಿಕಾರಿಗಳು, ವಸಂತ ಶೆಟ್ಟಿ ಪಾಡ್ಯಾರ್, ನಮಿರಾಜ್ ಬಲ್ಲಾಳ್, ಫಣಿರಾಜ್ ಬಲ್ಲಾಳ್,ಸತೀಶ್ ಭಟ್,ಅರಣ್ಯ ಇಲಾಖೆಯ ಗಸ್ತು ಅಧಿಕಾರಿ ಚಂದ್ರಶೇಖರ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article