ನರೇಂದ್ರ ಮೋದಿಜಿ ಅವರ ಹುಟ್ಟುಹಬ್ಬದ ಪ್ರಯುಕ್ತ ಬಿಜೆಪಿ ಮುಲ್ಕಿ ಮಹಾಶಕ್ತಿ ಕೇಂದ್ರದಿಂದ ಸೇವಾ ಕಾರ್ಯಕ್ರಮ

ನರೇಂದ್ರ ಮೋದಿಜಿ ಅವರ ಹುಟ್ಟುಹಬ್ಬದ ಪ್ರಯುಕ್ತ ಬಿಜೆಪಿ ಮುಲ್ಕಿ ಮಹಾಶಕ್ತಿ ಕೇಂದ್ರದಿಂದ ಸೇವಾ ಕಾರ್ಯಕ್ರಮ


ಮೂಡುಬಿದಿರೆ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಪ್ರಯುಕ್ತ ಭಾರತೀಯ ಜನತಾ ಪಾರ್ಟಿ ಮುಲ್ಕಿ ಮಹಾಶಕ್ತಿ ಕೇಂದ್ರದ ವತಿಯಿಂದ ವಿವಿಧ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು.


ಈ ಪ್ರಯುಕ್ತ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರಿಗೆ ವಿಶೇಷ ಪೂಜೆ ಸಲ್ಲಿಸಿ, ದೇಶದ ಸುಖ, ಶಾಂತಿ, ಸಮೃದ್ಧಿ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿಜಿ ಅವರ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸಲಾಯಿತು.

ನಂತರ ಮುಲ್ಕಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ, ಅಲ್ಲಿನ ರೋಗಿಗಳಿಗೆ ಹಣ್ಣುಹಂಪಲುಗಳನ್ನು ವಿತರಿಸುವ ಮೂಲಕ ಸೇವಾ ಮನೋಭಾವದಿಂದ ಹುಟ್ಟುಹಬ್ಬವನ್ನು ಆಚರಿಸಲಾಯಿತು.

ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷರಾದ  ದಿನೇಶ್ ಪುತ್ರನ್,ಜಿಲ್ಲಾ ಉಪಾಧ್ಯಕ್ಷರಾದ  ಸುನೀಲ್ ಆಳ್ವ, ಮುಲ್ಕಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ  ಶೈಲೇಶ್ ಕುಮಾರ್,ಮು.ನ.ಪ ನಿಕಟಪೂರ್ವ ಅಧ್ಯಕ್ಷ ಸತೀಶ್ ಅಂಚನ್,ಸ್ಥಾಯಿ ಸಮಿತಿ ಅಧ್ಯಕ್ಷ  ಹರ್ಷರಾಜ್ ಶೆಟ್ಟಿ,ಮಂಡಲ ಮಹಿಳಾ ಮೋರ್ಚಾ ಅಧ್ಯಕ್ಷೆ ಗೀತಾ, ರಶ್ಮಿ, ರಾಧಿಕಾ ಕೋಟ್ಯಾನ್, ಪ್ರಶಾಂತ.ಕೆ ನಗರ ಕಾರ್ಯದರ್ಶಿ ಮುಲ್ಕಿ,ಶ್ರೀ ವಿಠ್ಠಲ್ ಏನ್ ಎಮ್ ಮುಖಂಡರು, ಶಕ್ತಿಕೇಂದ್ರ ಪ್ರಮುಖ  ಅಶೋಕ್ ಜನನಿ, ಹರಿಶ್ಚಂದ್ರ ಕೋಟ್ಯಾನ್ ಪಕ್ಷದ ಅನನ್ಯ ಜವಾಬ್ದಾರಿಯುಳ್ಳ ಪ್ರಮುಖರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article