ಆಳ್ವಾಸ್ ಮೆಡಿಕಲ್ ಕಾಲೇಜು ಲೋಕಾಪ೯ಣೆ

ಆಳ್ವಾಸ್ ಮೆಡಿಕಲ್ ಕಾಲೇಜು ಲೋಕಾಪ೯ಣೆ

ದ.ಕ. ಜಿಲ್ಲೆ ದೇಶಕ್ಕೆ ಮೆಡಿಕಲ್ ಹಬ್: ಕೇಂದ್ರ ಸಚಿವ ಪ್ರಹ್ಲಾದ ಜೋಶಿ 


ಮೂಡುಬಿದಿರೆ: ಭಾರತದಲ್ಲಿ ದ.ಕ. ಜಿಲ್ಲೆ ಜಗತ್ತಿಗೆ ಮೆಡಿಕಲ್ ಹಬ್ ಆಗುವ ಸಾಮಥ್ಯ೯ವನ್ನು ಹೊಂದಿದೆ ಎಂದು  ಕೇಂದ್ರದ ಶಿಕ್ಷಣ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ಅಭಿಪ್ರಾಯಪಟ್ಟರು. 


ಅವರು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವೈದ್ಯಕೀಯ ಶಿಕ್ಷಣ ಕ್ಷೇತ್ರದ ಮಹತ್ವಾಕಾಂಕ್ಷೆಯ ಹೆಜ್ಜೆಯಾಗಿ ಮಿಜಾರಿನ ಶ್ರೀಮತಿ ಶೋಭಾ ಮೋಹನ್ ಆಳ್ವ ಆವರಣದಲ್ಲಿ ನಿರ್ಮಿಸಿರುವ ಆಳ್ವಾಸ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಅಂಡ್ ರಿಸರ್ಚ್ ಸೆಂಟರನ್ನು (ಆಳ್ವಾಸ್ ಮೆಡಿಕಲ್ ಕಾಲೇಜು) ಸೋಮವಾರ ಸಂಜೆ ಲೋಕಾಪ೯ಣೆಗೊಳಿಸಿ ಮಾತನಾಡಿದರು.  


ಜಗತ್ತು ವೃದ್ದಾಪ್ತದತ್ತ ಸಾಗುತ್ತಿದ್ದು ಮಾನವ ಸಂಪನ್ಮೂಲದ ಕೊರತೆಯನ್ನು ಎದುರಿಸುತ್ತಿದೆ ಪರಿಣಾಮವಾಗಿ ಜಗತ್ತಿನಲ್ಲಿ ಕೆಲಸ ಮಾಡಲು ಜನರಿಲ್ಲದಂತ್ತಾಗಿದೆ. ಮೆಡಿಕಲ್ ಫೀಲ್ಡ್ ನಲ್ಲಿ  ಭಾರತದ ಡಾಕ್ಟರ್ ಮತ್ತು ನಸ್೯ಗಳ ಬಗ್ಗೆ ವಿಶೇಷ ನಂಬಿಕೆಯಿದೆ ಆದ್ದರಿಂದ ಜಗತ್ತಿನ ಮುಂದೆ ನಮ್ಮ ದೇಶ ಯುವ ಭಾರತವಾಗುವ ಅವಕಾಶವನ್ನು ಹೊಂದಿದೆ ಎಂದರು. 

ಭಾರತವು ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ. ವಿದ್ಯುತ್ ಉತ್ಪಾದನೆ ಹೆಚ್ಚಾಗುತ್ತಿರುವುದು ಇದಕ್ಕೊಂದು ನಿದರ್ಶನ ಎಂದರು.

ಭಾರತವು ಇಂದು 863 ಬಿಲಿಯನ್ ಡಾಲರ್ ರಫ್ತು ಮಾಡುತ್ತಿದೆ. 300 ವ್ಯಾಟ್ ನವೀಕರಿಸಬಹುದಾದ ಇಂಧನವನ್ನು ಉತ್ಪಾದಿಸುತ್ತಿದೆ. ದೇಶದ ಆರ್ಥಿಕ ಸಾಧನೆ ಕಂಡು ಹಲವು ರಾಷ್ಟ್ರಗಳು ನಮ್ಮ ಜೊತೆ ಮುಕ್ತ ಒಪ್ಪಂದ ಮಾಡಿಕೊಳ್ಳುತ್ತಿವೆ ಎಂದರು.

ಶೇ98ರಷ್ಟು ಮೊಬೈಲ್ ಉತ್ಪಾದನೆಯನ್ನು ಭಾರತವೇ ಇಂದು ಮಾಡುತ್ತಿದೆ. ಮುಂದಿನ 6ಜಿ ತಂತ್ರಜ್ಞಾನವನ್ನು ಭಾರತ ನೀಡಲಿದೆ ಎಂದು ಭವಿಷ್ಯ ನುಡಿದರು. 

ಭಾರತದಲ್ಲಿ ಪ್ರಸ್ತುತ 1.4ಲಕ್ಷ ವೈದ್ಯಕೀಯ ಸೀಟುಗಳಿವೆ. 1.03 ಲಕ್ಷ  ಪೇಟೆಂಟ್, 2.3 ಲಕ್ಷ ಸ್ಟಾರ್ಟ್ ಅಪ್ ಗಳು ಸೇರಿದಂತೆ ಭಾರತದ ಶೈಕ್ಷಣಿಕ ಸಾಧನೆ ಜಾಗತಿಕ ಗಮನ ಸೆಳೆಯುತ್ತಿದೆ ಎಂದರು.

'ಮುಂದಿನ ದಿನಗಳಲ್ಲಿ ಹೆಚ್ಚಿನ  ಸ್ಟಾರ್ಟ್ ಅಪ್ ಗಳು ರಾಜ್ಯ ಹಾಗೂ ದಕ್ಷಿಣ ಕನ್ನಡದಿಂದ ಬರಲಿ' ಎಂದು ಆಶಿಸಿದ ಅವರು,  'ಹೊಸ ಯೋಚನೆ -ಯೋಜನೆ ವೈದ್ಯಕೀಯ ಕ್ಷೇತ್ರದಿಂದ ಬರಲಿ' ಎಂದರು.

ಯುವ ಜನತೆಗೆ ಸಾಕಷ್ಟು ಅವಕಾಶಗಳಿವೆ. ಕೇಂದ್ರವು ಪ್ರಸ್ತುತ   2.5 ಲಕ್ಷ ಕೋಟಿ ರೂಪಾಯಿ ಸಂಶೋಧನೆಗೆ ಮೀಸಲು ಇಟ್ಟಿದೆ. 21ನೇ ಶತಮಾನ ಭಾರತದ್ದು, 2047 ಕ್ಕೆ ವಿಕಸಿತ ಭಾರತ ಆಗಲಿದೆ ಎಂದರು.

ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಮಾತನಾಡಿ, ಸುಲಭವಾಗಿ ದೊರೆಯುವ ಆರೋಗ್ಯ ಸೇವೆ ನಮ್ಮದಾಗಬೇಕು ಎಂಬುದು ಕೇಂದ್ರ ಸರ್ಕಾರದ ಕನಸು. ಕೇಂದ್ರದ ಈ ನೀತಿಯ ಕಾರಣ ಇಂದು  ವೇಗವಾಗಿ ಆರೋಗ್ಯ ಕ್ಷೇತ್ರ ಅಭಿವೃದ್ಧಿ ಕಾಣುತ್ತಿದೆ ಎಂದ ಅವರು, ಕ್ಷಯ ಮುಕ್ತ ಭಾರತ ಅಭಿಯಾನಕ್ಕೆ ಕೈಜೋಡಿಸಿ ಎಂದು ವಿನಂತಿಸಿದರು.

ಆರೋಗ್ಯ ಮತ್ತು ಅಧ್ಯಾತ್ಮಿಕ ಗುಣಮುಖ ರಾಜಧಾನಿ ದಕ್ಷಿಣ ಕನ್ನಡ ಆಗಲಿ. ಆರೋಗ್ಯ ದೇವಾಲಯ ಹೆಚ್ಚಾಗಲಿ. ವೈದ್ಯಕೀಯ ಪ್ರವಾಸಿತಾಣವಾಗಲಿ ಎಂದ ಅವರು ಆಳ್ವಾಸ್ ಮೆಡಿಕಲ್ ಕಾಲೇಜು ಮೂಲಕ  ಶಿಕ್ಷಣ ಪ್ರೇಮಿಗಳ ಬೇಡಿಕೆ,  ಆಳ್ವರ ಕನಸು, ಜನರ ಅಪೇಕ್ಷೆ ಈಡೇರಿದೆ. ಆಳ್ವರ ಸಾಧನೆಗೆ ಅವರೇ ಸಾಟಿ ಎಂದರು.

ರಾಷ್ಟ್ರೀಯ ಸ್ವಯಂಸೇವಕ ಸಂಘದ ದಕ್ಷಿಣ ಮಧ್ಯ ಕ್ಷೇತ್ರೀಯ ಕಾರ್ಯವಾಹ ಎನ್. ತಿಪ್ಪೇಸ್ವಾಮಿ  ಮಾತನಾಡಿ, ಶಿಕ್ಷಣದ ಜೊತೆ ಸಂಸ್ಕಾರ ಅವಶ್ಯ.  ಇದಕ್ಕೆ ಅತ್ಯುತ್ತಮ ಸಂಸ್ಥೆ ಆಳ್ವಾಸ್. ಆಳ್ವಾಸ್  ಸಾಮಾಜಿಕ ಬದ್ಧತೆ ಶ್ಲಾಘನೀಯ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಎಂ. ಮೋಹನ ಆಳ್ವ, ಆಳ್ವಾಸ್ ಮೆಡಿಕಲ್ ಕಾಲೇಜು ನಿರ್ಮಾಣದ ಹಿಂದೆ ಶ್ರಮಿಸಿದ, ಕೊಡುಗೆ ನೀಡಿದ ಎಲ್ಲರಿಗೂ ಕೃತಜ್ಞತೆ ವ್ಯಕ್ತಪಡಿಸಿದರು.

ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಕುಲಪತಿ ಡಾ. ಭಗವಾನ್ ಬಿ.ಸಿ, ಶಾಸಕ ಉಮಾನಾಥ ಎ. ಕೋಟ್ಯಾನ್, ಮೊದಲ ಕುಲಪತಿಗಳು, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿ.ವಿ.ಯ ಡಾ. ಎಸ್. ಕಾಂತಾ,  ವಿಶ್ರಾಂತ ಕುಲಪತಿ ಡಾ. ಎಸ್. ಚಂದ್ರಶೇಖರ್ ಶೆಟ್ಟಿ,  ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿ.ವಿ.,  ಡಾ. ಎಚ್.ಎಸ್. ಬಲ್ಲಾಳ್, ಕುಲಾಧಿಪತಿಗಳು, ಮಾಹೆ, ಡಾ. ರಮಾನಂದ ಶೆಟ್ಟಿ, ವಿಶ್ರಾಂತ ಕುಲಪತಿಗಳು, ಡಾ. ಎಸ್. ಸಚ್ಚಿದಾನಂದ, ವಿಶ್ರಾಂತ ಕುಲಪತಿಗಳು, ಡಾ. ಜಯಕ‌ರ್ ಶೆಟ್ಟಿ, ವಿಶ್ರಾಂತ ಕುಲಪತಿಗಳು, ಡಾ. ಪಿ.ಎಲ್. ಧರ್ಮ, ಕುಲಪತಿಗಳು, ಮಂಗಳೂರು ವಿ.ವಿ., ಡಿ. ಸುರೇಂದ್ರ ಕುಮಾರ್, ಧರ್ಮಸ್ಥಳ, ಡಿ. ಹರ್ಷೇಂದ್ರ ಕುಮಾರ್, ಧರ್ಮಸ್ಥಳ, ಡಾ. ಎ.ಜೆ. ಶೆಟ್ಟಿ, ಅಧ್ಯಕ್ಷರು, ಲಕ್ಷ್ಮೀ ಮೆಮೋರಿಯಲ್ ಎಜುಕೇಶನ್ ಟ್ರಸ್ಟ್, ವಿಶಾಲ್ ಹೆಗ್ಡೆ, ಕುಲಾಧಿಪತಿಗಳು, ನಿಟ್ಟೆ ಪರಿಗಣಿತ ವಿಶ್ವವಿದ್ಯಾನಿಲಯ, ಡಾ. ಅಬ್ದುಲ್ ಕುಂಞ್ಞಿ, ಕುಲಾಧಿಪತಿಗಳು, ಯೆನೆಪೊಯ ಪರಿಗಣಿತ ವಿಶ್ವವಿದ್ಯಾನಿಲಯ, ಮಂಗಳೂರು,  ಫೌಸ್ಟಿನ್ ಲ್ಯೂಕಸ್ ಲೋಬೋ, ನಿರ್ದೇಶಕರು, ಫಾದರ್ ಮುಲ್ಲರ್ ಚಾರಿಟೆಬಲ್ ಇನ್‌ಸ್ಟಿಟ್ಯೂಷನ್ಸ್, ಮಂಗಳೂರು, ಡಾ. ಹಾಜಿ ಯು.ಕೆ. ಮೋನು, ಅಧ್ಯಕ್ಷರು, ಕಣಚೂರು ಸಮೂಹ ಸಂಸ್ಥೆಗಳು, ಮಂಗಳೂರು, ಚಿದಾನಂದ ಗೌಡ, ಅಧ್ಯಕ್ಷರು, ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್, ಸುಳ್ಯ, ಡಾ. ಎ. ಶ್ರೀನಿವಾಸ್ ರಾವ್, ಕುಲಾಧಿಪತಿಗಳು, ಶ್ರೀನಿವಾಸ ವಿಶ್ವವಿದ್ಯಾಲಯ, ಮಂಗಳೂರು,  ಎಸ್. ಗಣೇಶ್ ರಾವ್, ಸ್ಥಾಪಕಾಧ್ಯಕ್ಷರು, ಕರಾವಳಿ ಗ್ರೂಪ್ ಆಫ್ ಕಾಲೇಜಸ್, ಮಂಗಳೂರು, ಡಾ. ರಾಜೇಶ್ ಶೆಟ್ಟಿ, ವೈದ್ಯಕೀಯ ನಿರ್ದೇಶಕರು, ಫಸ್ಟ್ ನ್ಯೂರೋ ಹಾಸ್ಪಿಟಲ್ಸ್, ಡಾ. ಪ್ರಕಾಶ್ ಶೆಟ್ಟಿ, ಪ್ರವರ್ತಕರು ಮತ್ತು ಅಧ್ಯಕ್ಷರು, ಎಂಆರ್‌ಜಿ ಗ್ರೂಪ್, ರವೀಂದ್ರನಾಥ ಆಳ್ವ, ಪಾಲುದಾರರು, ಕುಮಾರಸ್ವಾಮಿ ಮಿನರಲ್ಸ್, ಬಳ್ಳಾರಿ,  ಕಿಶೋರ್ ಆಳ್ವ, ಕಾರ್ಯನಿರ್ವಾಹಕ ನಿರ್ದೇಶಕರು ಹಾಗೂ ಅಧ್ಯಕ್ಷರು, ಅದಾನಿ ಸಮೂಹ, ಕರ್ನಾಟಕ, ರೆ. ಫಾ. ಫ್ರಾನ್ಸಿಸ್ ಕ್ಷೇವಿಯರ್ ಗೋಮ್ಸ್, ಧರ್ಮಗುರುಗಳು, ಮಂಗಳೂರು ಧರ್ಮಪ್ರಾಂತ್ಯ, ಡಾ. ಎಂ.ಎಸ್. ಆಳ್ವ, ಮುಂಬೈ,  ರಾಮಚಂದ್ರ ಶೆಟ್ಟಿ, ಕೊಡ್ಡಣ್‌ಗುತ್ತು,  ಶ್ರೀನಿವಾಸ ಆಳ್ವ, ಮಿಜಾರುಗುತ್ತು,  ಶ್ರೀಪತಿ ಭಟ್, ಉದ್ಯಮಿಗಳು, ಮೂಡುಬಿದಿರೆ,  ಕುಲದೀಪ ಎಂ., ಚೌಟರ ಅರಮನೆ, ಮೂಡುಬಿದಿರೆ, ಡಾ. ಪಿ.ಜಿ.ಆರ್. ಸಿಂಧ್ಯಾ, ರಾಜ್ಯ ಪ್ರಧಾನ ಆಯುಕ್ತರು, ಭಾರತ್ ಸೌಟ್ಸ್ ಮತ್ತು ಗೈಡ್ಸ್, ಕರ್ನಾಟಕ, ಕೆ. ಅಭಯಚಂದ್ರ ಜೈನ್, ಮಾಜಿ ಸಚಿವರು, ವಿನಯ ಕುಮಾರ್ ಸೊರಕೆ, ಮಾಜಿ ಸಚಿವರು, ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಮಾಜಿ ವಿಧಾನಪರಿಷತ್ ಸದಸ್ಯರು, ಡಾ. ಶಾಂತಾರಾಮ್ ಶೆಟ್ಟಿ, ಸ್ಥಾಪಕ ಅಧ್ಯಕ್ಷರು, ತೇಜಸ್ವಿನಿ ಆಸ್ಪತ್ರೆ, ಮಂಗಳೂರು, ಡಾ. ಕಿರಣ್ ಕೆ.ವಿ. ಆಚಾರ್ಯ, ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು, ಮೂಳೆಚಿಕಿತ್ಸಾ ವಿಭಾಗ, ಕೆಎಂಸಿ, ಮಣಿಪಾಲ,  ಜಯಶ್ರೀ ಅಮರನಾಥ ಶೆಟ್ಟಿ, ಆಡಳಿತ ಮಂಡಳಿ ಸದಸ್ಯರು, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ, ಡಾ. ಅಮರಶ್ರೀ, ಅಧ್ಯಕ್ಷರು, ಅಮರನಾಥ್ ಶೆಟ್ಟಿ ಚಾರಿಟೇಬಲ್‌ ಟ್ರಸ್ಟ್,  ಡಾ. ಶಿವಶರಣ್ ಶೆಟ್ಟಿ, ನಿಕಟಪೂರ್ವ ಸಿಂಡಿಕೇಟ್, ಡಾ. ವೈಶಾಲಿ ಶ್ರೀಜಿತ್, ಸೆನೆಟ್ ಸದಸ್ಯರು,  ಪ್ರವೀಣ್ ಕುಮಾರ್, ಆಡಳಿತ ನಿರ್ದೇಶಕರು, ಬಿಮಾಲ್ ಬಿಲ್ಡ್‌ಕಾನ್ ಪ್ರೈ.ಲಿ.,  ಪಂಕಜಾ ಶಂಕರ ನಾಯಕ್, ಸ್ಥಾಪಕಾಧ್ಯಕ್ಷರು, ಡಾ. ಶಂಕರ್ ನಾಯಕ್ ಚಾರಿಟೆಬಲ್ ಟ್ರಸ್ಟ್,  ಮಂಜರಿ ಪ್ರವೀಣ್ ಸಲ್ದಾನ, ಸಲ್ದಾನ ಮತ್ತು ಅಸೋಸಿಯೇಟ್ಸ್, ಎಂ.ಬಿ.ಪುರಾಣಿಕ್, ಕಿಶೋರ್ ಆಳ್ವ, ಡಾ.ಎಂ.ಎಸ್.ಆಳ್ವ , ವಿಧಾನ ಪರಿಷತ್ತಿನ ಮಾಜಿ ಸದಸ್ಯ ಕ್ಯಾ. ಗಣೇಶ್ ಕಾರ್ಣಿಕ್, ಮುಸ್ತಫಾ ಎಸ್.ಎಂ., ವ್ಯವಸ್ಥಾಪಕ ನಿರ್ದೇಶಕರು, ಭಾರತ್ ಇನ್‌ಫ್ರಾಟೆಕ್ ಪ್ರೈ., ಕೆಪಿಸಿಸಿ ಕಾರ್ಯದರ್ಶಿ ಮಿಥುನ್ ರೈ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಮತ್ತು ಡಾ.ವಿನಯ್ ಆಳ್ವ ಹಾಗೂ ಗ್ರೀಷ್ಮಾ ವಿವೇಕ್ ಆಳ್ವ, ಹನ್ನಾ ವಿನಯ್ ಆಳ್ವ , ಉದ್ಯಮಿ ಶ್ರೀಪತಿ ಭಟ್ ಮತ್ತಿತರ ಗಣ್ಯರು  ಉಪಸ್ಥಿತರಿದ್ದರು.

ಬಳಿಕ ನಡೆದ ಸಾಂಸ್ಕೃತಿಕ ಕಾರ್ಯಕ್ರಮ ಮನ ಸೆಳೆಯಿತು.

ಉಪನ್ಯಾಸಕ ವೇಣುಗೋಪಾಲ್ ಶೆಟ್ಟಿ ಕಾಯ೯ಕ್ರಮ ನಿರೂಪಿಸಿ ವಂದಿಸಿದರು. 

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಡೀಮ್ಡ್ ಯೂನಿವರ್ಸಿಟಿ ಸ್ಥಾನಮಾನದ ಪ್ರಸ್ತಾವನೆಗೆ ಸಂಬಂಧಿಸಿದ ಅಗತ್ಯ ಸ್ಪಷ್ಟೀಕರಣ ಪ್ರಕ್ರಿಯೆ ಪೂರ್ಣಗೊಂಡ ಒಂದು ತಿಂಗಳೊಳಗೆ ಅನುಮೋದನೆ ನೀಡುವುದಾಗಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಭರವಸೆ ನೀಡಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article