ಖಾಸಗಿ ವ್ಯಕ್ತಿಗಳಿಂದ ಸರಕಾರಿ ಜಾಗ ಅತಿಕ್ರಮಣ: ಕ್ರಮಕೈಗೊಳ್ಳದ ಅಧಿಕಾರಿಗಳು-ಬೆಳುವಾಯಿ ಗ್ರಾಮಸಭೆಯಲ್ಲಿ ಮಾಜಿ ಅಧ್ಯಕ್ಷರು, ಸದಸ್ಯರ ಆರೋಪ

ಖಾಸಗಿ ವ್ಯಕ್ತಿಗಳಿಂದ ಸರಕಾರಿ ಜಾಗ ಅತಿಕ್ರಮಣ: ಕ್ರಮಕೈಗೊಳ್ಳದ ಅಧಿಕಾರಿಗಳು-ಬೆಳುವಾಯಿ ಗ್ರಾಮಸಭೆಯಲ್ಲಿ ಮಾಜಿ ಅಧ್ಯಕ್ಷರು, ಸದಸ್ಯರ ಆರೋಪ


ಮೂಡುಬಿದಿರೆ: ಬೆಳುವಾಯಿ ಕಾನ ಅಂಬೇಡ್ಕರ್ ಭವನದ ಬಳಿ 378 ಮತ್ತು 390 ಸವೆ೯ ನಂಬರಿನಲ್ಲಿ ಸುಮಾರು 50 ಎಕ್ರೆ ಜಾಗವನ್ನು ಮತ್ತು ಪಂಚಾಯತ್ ಬಳಿಯಲ್ಲಿರುವ ಸರಕಾರಿ ಜಾಗವನ್ನು ಖಾಸಗಿ ವ್ಯಕ್ತಿಗಳು ಅತಿಕ್ರಮಣ ಮಾಡಿಕೊಂಡು ತಮ್ಮ ಸ್ವಂತ ಉಪಯೋಗಕ್ಕೆ ಬಳಸಿಕೊಳ್ಳುತ್ತಿದ್ದು ಈ ಬಗ್ಗೆ ಸಂಬಂಧಪಟ್ಟ ಇಲಾಖೆಗಳು ಕ್ರಮಕೈಗೊಳ್ಳುತ್ತಿಲ್ಲವೆಂದು  ಗ್ರಾಮಸ್ಥರು ಆರೋಪಿಸಿದ್ದಾರೆ. 


ಬುಧವಾರ ಬೆಳುವಾಯಿ ಗ್ರಾಮ ಪಂಚಾಯತ್ ನಲ್ಲಿ ನಡೆದ 2026-27ನೇ ಸಾಲಿನ ಪ್ರಥಮ ಹಂತದ ಗ್ರಾಮಸಭೆಯಲ್ಲಿ ಭಾಗವಹಿಸಿದ ಪಂಚಾಯತ್ ನ ಮಾಜಿ ಸದಸ್ಯ ಭರತ್ ಶೆಟ್ಟಿ ಅವರು ಮಾತನಾಡಿ ಬೆಳುವಾಯಿ ಕಾನದ ಬಳಿ ವಸತಿ ಯೋಜನೆಗೆಂದು ಮೀಸಲಿಟ್ಟ ಜಾಗದಲ್ಲಿ ಖಾಸಗಿ ವ್ಯಕ್ತಿಯೋವ೯ ರಬ್ಬರ್ ಗಿಡಗಳನ್ನು ಬೆಳಿಸಿ ಇದೀಗ ಕಡಿದು ಆ ಜಾಗದಲ್ಲಿ ಹಣ್ಣಿನ ಗಿಡಗಳನ್ನು ನೆಡಲು ಆರಂಭಿಸಿದ್ದು ಇದಕ್ಕೆ ಅನುಮತಿ ನೀಡಿದವರು ಯಾರು? ಎಂದು ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಪ್ರಶ್ನಿಸಿದರು. 


ಇದಕ್ಕೆ ಧ್ವನಿಗೂಡಿಸಿದ ಮಾಜಿ ಅಧ್ಯಕ್ಷ ಸುರೇಶ್ ಗೋಲಾರ ಅವರು ಮೊದಲು ಈ ಜಾಗ ಡೀಮ್ಡ್ ಫಾರೆಸ್ಟ್ ಆಗಿತ್ತು ಇದೀಗ ಅದನ್ನು ತೆಗೆದು ಹಾಕಲಾಗಿದೆ ಎಂದ ಅವರು ನಮ್ಮ ಪಟ್ಟಾ ಜಾಗದಲ್ಲಿರುವ ಮರಗಳನ್ನು ಕಡಿದರೆ ಅರಣ್ಯ ಇಲಾಖೆಯವರು ಬಂದು ಕೇಸ್ ಹಾಕ್ತೀರಿ ಆದರೆ ಇದಕ್ಕೆ ಯಾರೂ ಕ್ರಮ ತೆಗೆದುಕೊಳ್ಳುತ್ತಿಲ್ಲವೆಂದು ಕೇಳಿದರು. 


ಇದಕ್ಕೆ ಉತ್ತರಿಸಿದ ಅರಣ್ಯ ಗಸ್ತು ಅಧಿಕಾರಿ ಚಂದ್ರಶೇಖರ್ ಅವರು ಈ ವಿಷಯವನ್ನು ಮೇಲಾಧಿಕಾರಿಗಳ ಗಮನಕ್ಕೆ ತರುವುದಾಗಿ ತಿಳಿಸಿದರು. 

ಪಂಚಾಯತ್ ಜಾಗವನ್ನು ಚಂದ್ರಶೇಖರ ಎಂಬವರು ಅತಿಕ್ರಮಣ ಮಾಡಿ ಶೆಡ್ಡೊಂದನ್ನು ನಿಮಿ೯ಸಿದ್ದು ಇದನ್ನು ನೆಲಸಮ ಅವಕಾಶವಿದ್ದರೂ  ಕಂದಾಯ ಅಧಿಕಾರಿಗಳು ಮೌನ ವಹಿಸಿರುವ ಬಗ್ಗೆ ಸುರೇಶ್ ಗೋಲಾರ ಮತ್ತು ಶೇಖ್ ಶಹಬಾಜ್ ಅವರು ಗ್ರಾಮಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. 

ಇದಕ್ಕೆ ಉತ್ತರಿಸಿದ ವಿಎ ಅಪೂವ೯ ಅವರು ಈ ಬಗ್ಗೆ ತಹಶೀಲ್ದಾರ್ ಅವರ ಗಮನಕ್ಕೆ ತರಲಾಗಿದೆ ಆದರೆ ಈ ಪ್ರಕರಣವು ನ್ಯಾಯಾಲದಲ್ಲಿದೆ  ಎಂದರು.

ಬೆಳುವಾಯಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಖಾಯಂ ವೈದ್ಯರು ಬೇಕೆಂಬ ಆಗ್ರಹವು ಸಭೆಯಲ್ಲಿ ಕೇಳಿ ಬಂತು. 

ಮಾಜಿ ಅಧ್ಯಕ್ಷ ರಾಘು ಪೂಜಾರಿ, ಗ್ರಾಮಸ್ಥ ಸೌಕತ್ ಆಲಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸವಿತ ಮಂದೋಲಿಕರ ಸಹಿತ ಗ್ರಾಮಸ್ಥರು ಚಚೆ೯ಯಲ್ಲಿ ಪಾಲ್ಗೊಂಡರು. 

ಡಾ. ಮಲ್ಲಿಕಾಜು೯ನ ರಾಯಪ್ಪ ಈಳಿಗೇರ ಮಾಗ೯ದಶಿ೯ ಅಧಿಕಾರಿಯಾಗಿ ಭಾಗವಹಿಸಿದ್ದರು. 

ಬೆಳುವಾಯಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಭರತ್,  ಮೆಸ್ಕಾಂ ನ ಬಸವ ಗೌಡ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವೀಣಾ ಎಸ್. ಹೆಗ್ಡೆ ಇಲಾಖಾ ಮಾಹಿತಿ ನೀಡಿದರು. 

ಕಾಯ೯ದಶಿ೯ ಶೇಖರ ಎಂ. ಸ್ವಾಗತಿಸಿದರು. ದ್ವಿತೀಯ ದಜೆ೯ ಲೆಕ್ಕ ಸಹಾಯಕ ಶ್ರೀಧರ ಅಣಗೌಡರ್ ವಾಡ್೯ ಸಭೆಯ ವರದಿ ಮಂಡಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article