ಮುನಿರಾಜ ರೆಂಜಾಳರಿಗೆ ಆಚಾರ್ಯ ಪುರಸ್ಕಾರ

ಮುನಿರಾಜ ರೆಂಜಾಳರಿಗೆ ಆಚಾರ್ಯ ಪುರಸ್ಕಾರ


ಮೂಡುಬಿದರೆ: ಕನ್ನಡ ಭಾಷಾ ಶಿಕ್ಷಕರಾಗಿ 37 ವರ್ಷ ಸೇವೆ ಸಲ್ಲಿಸಿ ಮುಖ್ಯೋಪಾಧ್ಯಾಯರಾಗಿ ನಿವೃತ್ತರಾಗಿದ್ದು ಸಮಾಜ, ರಾಷ್ಟ್ರ ‌ಸೇವೆಯಲ್ಲಿ ಸಕ್ರಿಯರಾಗಿರುವ ಮುನಿರಾಜ ರೆಂಜಾಳ ಮೂಡುಬಿದಿರೆಯವರಿಗೆ ಆಚಾರ್ಯ ಪುರಸ್ಕಾರ ಗೌರವ ಸನ್ಮಾನ ನೀಡಲಾಗುವುದು. 

ಸೆ. 5ರಂದು ಪುತ್ತೂರು ಜಿ.ಎಲ್. ಆಚಾರ್ಯ ಸಂಸ್ಮರಣೆ ಕಾರ್ಯಕ್ರಮದ ಅಂಗವಾಗಿ ಏರ್ಪಡಿಸಲಾಗಿರುವ ಆಚಾರ್ಯ ಪುರಸ್ಕಾರ ಮತ್ತು ಆಚಾರ್ಯ ಕವಿಗೋಷ್ಠಿಯ ಸಂದರ್ಭದಲ್ಲಿ ಮುಂಬಯಿ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಡಾ. ತಾಳ್ತಜೆ ವಸಂತ ಕುಮಾರ್ ಪುರಸ್ಕಾರ ನೀಡಲಿದ್ದಾರೆ ಎಂದು  ಜಿ.ಎಲ್. ಸಂಸ್ಥೆಗಳ ಅಧ್ಯಕ್ಷ ಬಲರಾಮ ಆಚಾರ್ಯ ಕಾರ್ಯಕ್ರಮ ಸಂಯೋಜಕ ಜಯಾನಂದ ಆಚಾರ್ಯ ಪ್ರಕಟಣೆಯಲ್ಲಿ ತಿಳಿಸಿದ್ದರಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article