ಮೂಡುಬಿದಿರೆ ಶ್ರೀ ಸಿಂಚನ ಸೌಹಾರ್ದ ಕೋ ಆಪರೇಟಿವ್ ಸೊಸೈಟಿಯ ಮಹಾಸಭೆ

ಮೂಡುಬಿದಿರೆ ಶ್ರೀ ಸಿಂಚನ ಸೌಹಾರ್ದ ಕೋ ಆಪರೇಟಿವ್ ಸೊಸೈಟಿಯ ಮಹಾಸಭೆ


ಮೂಡುಬಿದಿರೆ: ಮೂಡುಬಿದಿರೆ ಶ್ರೀ ಸಿಂಚನ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ಇದರ 2025-26ನೇ ಸಾಲಿನ ವಾರ್ಷಿಕ ಮಹಾಸಭೆಯು ಮೂಡುಬಿದಿರೆ ಕೇಂದ್ರ ಕಛೇರಿಯಲ್ಲಿ ಬುಧವಾರ ನಡೆಯಿತು. 

ಸಂಘದ ಅಧ್ಯಕ್ಷ ಮೋಹನ ಪ್ರಭು ಕೆ ಇವರ ಅಧ್ಯಕ್ಷತೆ ವಹಿಸಿ ಮಾತನಾಡಿ  ಸೊಸೈಟಿಯು ತನ್ನ ವ್ಯವಹಾರವನ್ನು ವರ್ಷದಿಂದ ವರ್ಷಕ್ಕೆ ಹೆಚ್ಚಳ ಗೊಳಿಸುತ್ತಿದ್ದು, ಮುಂದಿನ ದಿನಗಳಲ್ಲಿಯೂ ಸದಸ್ಯರಿಗೆ ಹೆಚ್ಚಿನ ಸೇವೆ ನೀಡಲು ಕಾರ್ಯಕ್ರಮ ಹಮ್ಮಿಕೊಳ್ಳುವುದಾಗಿ ತಿಳಿಸಿದರು. ಸೊಸೈಟಿಯಲ್ಲಿ ಸರಕಾರದ ಸೇವಾ ಕೇಂದ್ರವನ್ನು ಪ್ರಾರಂಭಿಸಿ ಜನರ ಅಗತ್ಯತೆಗಳನ್ನು ಪೂರೈಸುವುದಾಗಿ ತಿಳಿಸಿದರು. ವಾರ್ಷಿಕ 70 ಕೋಟಿ ರೂಪಾಯಿ ವ್ಯವಹಾರ ನಡೆಸುತ್ತಿರುವ ಸೊಸೈಟಿ, 13 ಕೋಟಿ ರೂಪಾಯಿ ದುಡಿಯುವ ಬಂಡವಾಳ, 12.26 ಕೋಟಿ ಠೇವಣಿ ಹಾಗೂ ಒಂಬತ್ತು ಕೋಟಿ ಸಾಲ ಹೊಂದಿರುವುದನ್ನು ಸಭೆಗೆ ತಿಳಿಸಿದರು.

ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಜವಾಬ್ದಾರಿ ವಹಿಸಿಕೊಳ್ಳಲಿರುವ ಅನಿಲ್ ಸ್ವಾಗತಿಸಿ ಜಮಾ ಖರ್ಚು ಲೆಕ್ಕ ಮಂಡಿಸಿ. ಹಾಲಿ ಪ್ರಭಾರ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ  ಸಂಗೀತ ಕಾಮತ್ ಮಹಾಸಭೆಯ ನೋಟಿಸು ವಾಚಿಸಿ ಆಡಳಿತ ವರದಿಯನ್ನು ಮಂಡಿಸಿದರು. ಸಂತೋಷ್ ಕುಮಾರ್ ಲಾಭ ನಷ್ಟ ವಿವರ ನೀಡಿದರು. ಶಾಲಿನಿ ಪ್ರಸಾದ್ ಆಸ್ತಿ ಜವಾಬ್ದಾರಿ ವಿವರ ನೀಡಿದರು. ಬ್ರಿಜೇಶ್ ಖರ್ಚಾದ ವಿವರ ನೀಡಿದರು. 

ರತ್ನಾಕರ ಎಂ ಹೆಗ್ಡೆ ಬಜೆಟ್ ಮಂಡಿಸಿ, ದಿನೇಶ್ ಎಂ.ಕೆ. ಲೆಕ್ಕಪರಿಶೋಧಕರ ನೇಮಕಾತಿ ತಿಳಿಸಿದರು. ಗೋಪಾಲಕೃಷ್ಣ ಕೆ ಟ್ರಸ್ಟ್ ನ ವಾರ್ಷಿಕ ವರದಿ ನೀಡಿದರು. ಮಮತಾ, ಪ್ರೀತಿ ಮತ್ತು ಸುಪ್ರೀತಾ ಪ್ರಾರ್ಥನೆಗೈದರು. ಶಾಖ ಪ್ರಬಂಧ ಕುಮುದಾಕ್ಷ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು. ಬಾಲಚಂದ್ರ ವಂದಿಸಿದರು. 

ನಂತರ ಸಿಂಚನ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ಮತ್ತು ಸಿಂಚನ ಸೇವಾ ಟ್ರಸ್ಟ್ ಸಹಯೋಗದಲ್ಲಿ ಸ್ವಸಹಾಯ ಸಂಘದ ಸದಸ್ಯರಿಗೆ ಸ್ವ ಉದ್ಯೋಗ ತರಬೇತಿ ಕಾರ್ಯಕ್ರಮ ನಡೆಯಿತು. ಟ್ರಷ್ಟಿ ಎಂ. ಕೆ. ದಿನೇಶ್ ಅಧ್ಯಕ್ಷತೆಯಲ್ಲಿ ಪುರಸಭಾ ಮಾಜಿ ಸದಸ್ಯ ಸ್ವಾತಿ ಪ್ರಭು ಅತಿಥಿಯಾಗಿ ಭಾಗವಹಿಸಿದ್ದರು. ಗೀತಾ ಯೋಗೀಶ್, ಪೂಜಾ ದಿನೇಶ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು. ಟ್ರಸ್ಟಿಗಳಾದ ಸಂಗೀತ ಎಂ ಪ್ರಭು, ಗೋಪಾಲಕೃಷ್ಣ ಕೆ., ರತ್ನಾಕರ ಎಂ ಹೆಗ್ಡೆ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article