ಎರಡು ಬಣಗಳ ಭಿನ್ನಾಭಿಪ್ರಾಯ: ವಾಲ್ಪಾಡಿಯಲ್ಲಿ ಪೊಲೀಸ್ ಬಂದೋಬಸ್ತ್‌ನಲ್ಲಿ ನಡೆದ ಸೋಣದ ಕೋಲ

ಎರಡು ಬಣಗಳ ಭಿನ್ನಾಭಿಪ್ರಾಯ: ವಾಲ್ಪಾಡಿಯಲ್ಲಿ ಪೊಲೀಸ್ ಬಂದೋಬಸ್ತ್‌ನಲ್ಲಿ ನಡೆದ ಸೋಣದ ಕೋಲ


ಮೂಡುಬಿದಿರೆ: ವಾಲ್ಪಾಡಿ ಗರಡಿಯ ಸೋಣದ ಕೋಲದ ವಿಚಾರವಾಗಿ  ಎರಡು ಬಣಗಳ ಮಧ್ಯೆ ನಡೆಯುತ್ತಿದ್ದ ಭಿನ್ನಾಭಿಪ್ರಾಯದ ಹಿನ್ನೆಲೆಯಲ್ಲಿ ಭಾನುವಾರ (ಸೆ.13)  ಪೊಲೀಸರ ಬಿಗಿ ಬಂದೋಬಸ್ತಿನಲ್ಲಿ  ರಾಜಂದೈವ ಮತ್ತು ಬ್ರಹ್ಮಬೈದರ್ಕಳ ಗರಡಿಯಲ್ಲಿ  ಸೋಣದ ಕೋಲ ನಡೆಯಿತು.


ವಾಲ್ಪಾಡಿ ಗರಡಿಯ ಹಿಂದಿನ ಸಮಿತಿಯ ಅಧ್ಯಕ್ಷರು ಮತ್ತು ಈಗಿನ ಸಮಿತಿಯ ಮಧ್ಯೆ ಕಳೆದ ಕೆಲವು ಸಮಯಗಳ ಹಿಂದೆ ಅಸ್ರಣ್ಣರ ವಿಷಯಕ್ಕೆ ಸಂಬಂಧಿಸಿದಂತೆ ಭಿನ್ನಾಭಿಪ್ರಾಯ ಉಂಟಾಗಿತ್ತು ಈ ಮಧ್ಯೆ ಈಗಿನ ಸಮಿತಿಯು ಸೆ. 13ರಂದು ಕೋಲ ನಡೆಸುವುದೆಂದು ನಿಧ೯ರಿಸಿತ್ತು. ಆಗ ಹಿಂದಿನ ಸಮಿತಿಯು ಊರವರು ಮತ್ತು ಗುತ್ತು ಬಕೆ೯ಯವರನ್ನು ಬಿಟ್ಟು ಸೆ. 8ರಂದು ಕೋಲ ನಡೆಸಲು ನಿಧ೯ರಿಸಿತ್ತು ಆದರೆ ಈಗಿನ ಸಮಿತಿಯು ಇದಕ್ಕೆ ವಿರೋಧ ವ್ಯಕ್ತಪಡಿಸಿತ್ತು. ಇದರಿಂದಾಗಿ ಪ್ರಕರಣವು ಪೊಲೀಸ್ ಠಾಣೆಯ ಮೆಟ್ಟಿಲೇರಿತ್ತು. 


ಇದರ ಪರಿಣಾಮವಾಗಿ ಸೋಣದ ಕೋಲ ನಡೆಸದಂತೆ ಹಿಂದಿನ ಸಮಿತಿಯ ಅಧ್ಯಕ್ಷರು ಗರಡಿಗೆ ಬೀಗವನ್ನು ಹಾಕಿದ್ದರು. ಈ ವಿಷಯಕ್ಕೆ ಸಂಬಂಧಿಸಿದಂತೆ ಈಗಿನ ಸಮಿತಿ ಪೊಲೀಸ್ ಠಾಣೆಗೆ ದೂರು ನೀಡಿತ್ತು. ಪ್ರಕರಣವನ್ನು ಪರಿಗಣಿಸಿದ ಎಸಿಪಿ ಶ್ರೀಕಾಂತ್ ಅವರು ಈಗಿನ ಸಮಿತಿಗೆ ಕೋಲ ನಡೆಸುವಂತೆ ಸೂಚಿಸಿದ್ದರು ಹಾಗೂ ತಹಶೀಲ್ದಾರ್ ಕೂಡಾ ಕಾನೂನಿಗೆ ತೊಂದರೆಯಾಗಬಾರದು ಎಂದು ಎರಡೂ ಬಣಗಳಿಗೆ ಸೂಚನೆ ನೀಡಿದ್ದರು. 


ಭಾನುವಾರ ಕೋಲ ನಡೆಸಲು ಉದ್ದೇಶಿಸಿದಂತೆ ಊರವರು ನೆರೆದಿದ್ದರು. ಮೂಡುಬಿದಿರೆ ಪೊಲೀಸ್ ನಿರೀಕ್ಷಕ ರಾಜೇಂದ್ರ ನೇತೃತ್ವದಲ್ಲಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.  ಈ ಸಂದಭ೯ದಲ್ಲಿ ಅಲ್ಲಿಗೆ ಆಗಮಿಸಿದ ಹಿಂದಿನ ಸಮಿತಿಯ ಅಧ್ಯಕ್ಷರು ಹಾಗೂ ಅವರ ಸಹಚರರು ಈಗಿನ ಸಮಿತಿಯವರಿಗೆ ಪೊಲೀಸರೆದುರೆ ಮನ ಬಂದಂತೆ ಬೈದಿದ್ದಾರೆ ಅದೇ ಸಮಯಕ್ಕೆ ಆಗಮಿಸಿದ ಎಸಿಪಿ ಶ್ರೀಕಾಂತ್  ಎರಡೂ ಬಣಗಳ ಮುಖಂಡರನ್ನು ಹೊರಗೆ ಕರೆದು  ಮಾತುಕತೆ ನಡೆಸಿ ಕೋಲ ನಡೆಸಲು ಅನುವು ಮಾಡಿಕೊಟ್ಟರು.


ಕೋಲ ನಡೆಯುವ ಸಂದಭ೯ ಒಂದು ಬಣದ ಸದಸ್ಯರು ಭಾಗವಹಿಸದೆ ಹಿಂತಿರುಗಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article