ಯುವಕ ಮೃತ್ಯು ಪ್ರಕರಣ: ಕೊಲೆ ಶಂಕಿಸಿ ದೂರು ದಾಖಲು

ಯುವಕ ಮೃತ್ಯು ಪ್ರಕರಣ: ಕೊಲೆ ಶಂಕಿಸಿ ದೂರು ದಾಖಲು

ಮೂಲ್ಕಿ: ತಿಂಗಳ ಹಿಂದೆ ತನ್ನ ಕೆಲಸದ ಸ್ಥಳದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಉತ್ತರ ಪ್ರದೇಶ ಮೂಲದ ಅಜಯ್ ಅವರದ್ದು ಕೊಲೆ ಮಾಡಲಾಗಿದೆ ಎಂದು ಶಂಕಿಸಿ ಆತನ ತಂದೆ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಅಜಯ್ ಹಳೆಯಂಗಡಿಯ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಬೇರುಗಳಿಂದ ತಯಾರಿಸಲಾಗುವ ಕುರ್ಚಿ, ಟೇಬಲ್‌ಗಳನ್ನು ಮಾರಾಟ ಮಾಡುವ ಅಂಗಡಿ ಹೊಂದಿದ್ದರು.

ತಿಂಗಳ ಹಿಂದೆ ಅವರು ಅನಾರೋಗ್ಯಕ್ಕೀಡಾಗಿದ್ದ ಅಜಯ್ ನನ್ನು ಸ್ಥಳೀಯರು ಆ?ಯಂಬುಲೆನ್ಸ್ ಮೂಲಕ ನಗರದ ವೆನ್‌ಲಾಕ್ ಆಸ್ಪತ್ರೆಗೆ ದಾಖಲಿಸಿದ್ದರು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದರು. ಬಳಿಕ ಮೃತರ ಮರಣೋತ್ತರ ಪರೀಕ್ಷೆ ನಡೆಸಿ ಮುಲ್ಕಿ ಪೊಲೀಸರು ಯುಡಿಆರ್ ದಾಖಲಿಸಿಕೊಂಡು ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಿದ್ದರು.

ಬುಧವಾರ ಏಕಾಏಕಿ ಮೃತ ಅಜಯ್ ತಾಯಿ, ಪತ್ನಿ ಮತ್ತು ಮಗನೊಂದಿಗೆ ತಂದೆ ಮಾನ್‌ಸಿಂಗ್ ಎಂಬವರು ಮುಲ್ಕಿ ಪೊಲೀಸ್ ಠಾಣೆಗೆ ಬಂದು ಅಜಯ್ ನನ್ನು ಕೊಲೆ ಮಾಡಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿ ಪ್ರಕರಣ ದಾಖಲಿಸಿದ್ದಾರೆ.

ಅದರಂತೆ, ಅಜಯ್ ಕುಟುಂಬವನ್ನು ಘಟನಾ ಸ್ಥಳಕ್ಕೆ ಕರೆತಂದ ಪೊಲೀಸರು, ಅವರ ಸಮ್ಮುಖದಲ್ಲಿ ಸ್ಥಳೀಯರನ್ನು ಕರೆಸಿ ವಿಚಾರಣೆ ನಡೆಸಿದರು. ಜೊತೆಗೆ ಕೊಲೆ ಪ್ರಕರಣ ದಾಖಲಾಗಿರುವ ಕಾರಣ ಸ್ಥಳವನ್ನು ಮಹಜರು ನಡೆಸಲಾಯಿತು.

ಘಟನಾ ಸ್ಥಳಕ್ಕೆ ಮೂಲ್ಕಿ ಪೊಲೀಸರು, ವಿಧಿವಿಜ್ಞಾನ ವಿಭಾಗದ ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುಂದಿನ ಕಾನೂನು ಕ್ರಮಗಳನ್ನು ಕೈಗೊಂಡಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article