‘ಭೂಮಿಪೂಜೆ’ ಮೂಲಕ ಸರ್ಕಾರಿ ಮೆಡಿಕಲ್ ಆಸ್ಪತ್ರೆಗೆ ಚಾಲನೆ

‘ಭೂಮಿಪೂಜೆ’ ಮೂಲಕ ಸರ್ಕಾರಿ ಮೆಡಿಕಲ್ ಆಸ್ಪತ್ರೆಗೆ ಚಾಲನೆ


ಪುತ್ತೂರು: ಪುತ್ತೂರಿನಲ್ಲಿ ನೂತನವಾಗಿ ನಿರ್ಮಾಣಗೊಳ್ಳಲಿರುವ ಸರ್ಕಾರಿ ಮೆಡಿಕಲ್ ಕಾಲೇಜ್‌ಗೆ ಪೂರ್ವಭಾವಿಯಾಗಿ ನಿರ್ಮಾಣಗೊಳ್ಳಲಿರುವ ಪುತ್ತೂರು ಮೆಡಿಕಲ್ ಬೋಧನಾ ಆಸ್ಪತ್ರೆಗೆ ಶುಕ್ರವಾರ ಶಾಸಕ ಅಶೋಕ್ ಕುಮಾರ್ ರೈ ಅವರು ಭೂಮಿಪೂಜೆ ನೆರವೇರಿಸಿದರು. 

ಪುತ್ತೂರು ತಾಲೂಕಿನ ಕೋಡಿಂಬಾಡಿ ಗ್ರಾಮದ ಸೇಡಿಯಾಪುವಿನಲ್ಲಿ ನೂತನ ಮೆಡಿಕಲ್ ಕಾಲೇಜ್ ನಿರ್ಮಾಣಕ್ಕೆ ಈಗಾಗಲೇ ಸರ್ಕಾರದಿಂದ ಸುಮಾರು 550 ಕೋಟಿ ಅನುದಾನ ಮಂಜೂರುಗೊಂಡಿದೆ. ಅದಕ್ಕೂ ಮುನ್ನ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಮೆಡಿಕಲ್ ಕಾಲೇಜ್ ನಿರ್ಮಾಣಕ್ಕೆ ಪೂರ್ವಭಾವಿಯಾಗಿ 300 ಬೆಡ್‌ಗಳ ಮೆಡಿಕಲ್ ಬೋಧನಾ ಆಸ್ಪತ್ರೆಯನ್ನು ನಿರ್ಮಿಸಲು ರೂ. 182 ಕೋಟಿ ಅನುದಾನವನ್ನು ಮಂಜೂರುಗೊಳಿಸಿದ್ದರು. ಈ ಅನುದಾನದಲ್ಲಿ ಮೆಡಿಕಲ್ ಬೋಧನಾ ಕಾಲೇಜ್ ಕಟ್ಟಡ ಕಾಮಗಾರಿಗೆ ಶಾಸಕರು ಭೂಮಿಪೂಜೆ ನೆರವೇರಿಸಿದರು. 

ಬಳಿಕ ಮಾತನಾಡಿದ ಅವರು ಯಾರಿಗೂ ಸಾಯುವ ತನಕ ರಾಜಕೀಯ ಇರುವುದಿಲ್ಲ. ಆದರೆ ಇರುವ ಅವಧಿಯಲ್ಲಿ ಜನರು ನೆನಪಿಡುವ ಕೆಲಸ ಮಾಡಬೇಕು. ಪುತ್ತೂರಿನಲ್ಲಿ ಬೆಂಚ್‌ಮಾರ್ಕ್ ಕೆಲಸ ಆಗಬೇಕು ಎಂಬ ಕನಸು ಕಂಡಿರುವ ನಾನು ಅದನ್ನು ನನಸು ಮಾಡುವ ನಿಟ್ಟಿನಲ್ಲಿ ಈ ಮೆಡಿಕಲ್ ಕಾಲೇಜ್ ತರುವ ಪ್ರಯತ್ನ ಮಾಡಿದ್ದೇನೆ. ಈ ಬಗ್ಗೆ ನನ್ನನ್ನು ಫೇಸ್‌ಬುಕ್‌ನಲ್ಲಿ ಟೀಕಿಸಿದವರು, ಇದು ಆಗುವುದಿಲ್ಲ ಎಂದವರು ಹಲವರು ಇದ್ದಾರೆ. ಮುಂದೆ ಇಲ್ಲಿ ಮೆಡಿಕಲ್ ಕಾಲೇಜ್ ಆದಲ್ಲಿ ಅವರ ಕುಟುಂಬಸ್ಥರೂ ಆರೋಗ್ಯ ಸೇವೆಯನ್ನು ಪಡೆಯಬಹುದಾಗಿದೆ ಎಂದರು. 

ಈ ಸಂದರ್ಭದಲ್ಲಿ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್, ಕೆಪಿಸಿಸಿ ಕಾರ್ಯದರ್ಶಿ ಎಂ.ಎಸ್. ಮಹಮ್ಮದ್, ಪುಡಾ ಅಧ್ಯಕ್ಷ ಅಮಳ ರಾಮಚಂದ್ರ, ಪಕ್ಷದ ಮುಖಂಡರಾದ ಮುರಳೀಧರ ರೈ ಮಠಂತಬೆಟ್ಟು, ಮಹಮ್ಮದ್ ಬಡಗನ್ನೂರು, ಕೆ.ಪಿ. ಆಳ್ವ, ರೈತ ಮುಖಂಡ ರೂಪೇಶ್ ರೈ ಅಲಿಮಾರ್ ಮತ್ತಿತರರು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article