ರಾಷ್ಟ್ರೀಯ ಮಟ್ಟದ ಕಬಡ್ಡಿ ಉತ್ಸವ: ಪೋಸ್ಟರ್ ಬಿಡುಗಡೆ
Sunday, September 20, 2026
ಸುಳ್ಯ: ಧ್ವನಿ ಬೆಳಕು ಮತ್ತು ಶಾಮಿಯಾನ ಮಾಲಕರ ಸಂಘದ ವತಿಯಿಂದ ಅಕ್ಟೋಬರ್ 3 ಮತ್ತು 4ರಂದು ರಾಷ್ಟ್ರೀಯ ಮಟ್ಟದ ಆಹ್ವಾನಿತ ತಂಡಗಳ ರಾಷ್ಟ್ರೀಯ ಮಟ್ಟದ ಎ ಗ್ರೇಡ್ ಮ್ಯಾಟ್ ಕಬಡ್ಡಿ ಪಂದ್ಯಾಟ ಸುಳ್ಯ ಯುವಜನ ಸಂಯುಕ್ತ ಮಂಡಳಿ ಬಳಿಯ ಜೂನಿಯರ್ ಕಾಲೇಜು ಮೈದಾನದದಲ್ಲಿ ನಡೆಯಲಿದೆ.ಕಬಡ್ಡಿಯ ಪೋಸ್ಟರ್‌ನ್ನು ತಹಶೀಲ್ದಾರ್ ಮಂಜುಳಾ ಬಿಡುಗಡೆ ಮಾಡಿದರು.
ಸುಳ್ಯ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ. ಎಂ.ಮುಸ್ತಫ, ನಗರ ಪಂಚಾಯತ್ ಮುಖ್ಯಾಧಿಕಾರಿ ಬಸವರಾಜ್, ಧ್ವನಿ ಬೆಳಕು ಮತ್ತು ಶಾಮಿಯಾನ ಮಾಲಕರ ಸಂಘದ ಅಧ್ಯಕ್ಷ ಸಂಶುದ್ದೀನ್ ಭಾರತ್ ಶಾಮಿಯಾನ, ಪದಾಧಿಕಾರಿಗಳಾದ, ಜಿ ಎ. ಮಹಮ್ಮದ್, ಗುರು ಪ್ರಸಾದ್, ಶಾಫಿ, ಶ್ರೀಧರ ಮೊದಲಾದವರು ಉಪಸ್ಥಿತರಿದ್ದರು.