ಅ.5: ಅಂಚೆ ಅದಾಲತ್
Friday, September 25, 2026
ಉಜಿರೆ: ಪುತ್ತೂರು ಅಂಚೆ ವಿಭಾಗದ ಅಂಚೆಅದಾಲತ್ ಅಕ್ಟೋಬರ್ 5 ರಂದು ಸೋಮವಾರ ಬೆಳಿಗ್ಗೆ ಹತ್ತು ಗಂಟೆಗೆ ಪುತ್ತೂರಿನಲ್ಲಿ ಅಂಚೆ ವಿಭಾಗದ ಅಂಚೆ ಅಧೀಕ್ಷಕರ ಕಚೇರಿಯಲ್ಲಿ ನಡೆಯಲಿದೆ ಎಂದು ಪುತ್ತೂರು ಅಂಚೆ ಅಧೀಕ್ಷಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೆಳ್ತಂಗಡಿ, ಬಂಟ್ವಾಳ, ಪುತ್ತೂರು, ಸುಳ್ಯ, ಕಡಬ, ಮೂಡಬಿದ್ರೆ, ಕಾರ್ಕಳ ಮತ್ತು ಹೆಬ್ರಿ ತಾಲ್ಲೂಕುಗಳಲ್ಲಿ ಅಂಚೆ ಸೇವೆಗೆ ಸಂಬAಧಿಸಿದ ಅಹವಾಲುಗಳನ್ನು ಸಾರ್ವಜನಿಕರಿಂದ ಸ್ವೀಕರಿಸಿ ಪರಿಹರಿಸಲಾಗುವುದು.
ಸಮಸ್ಯೆಗಳಿದ್ದಲ್ಲಿ ಅ. 3ರ ಮೊದಲು ಅಂಚೆ ಅಧೀಕ್ಷಕರಿಗೆ ತಿಳಿಸಿ ಅಂಚೆ ಅದಾಲತ್ ದಿನ ಹಾಜರಾಗಲು ಸಾರ್ವಜನಿಕರಿಗೆ ಕೋರಲಾಗಿದೆ. ಹೆಚ್ಚಿನ ಮಾಹಿತಿಗೆ: ದೂರವಾಣಿ: 9448291073