ದೇವಸ್ಥಾನದ ಪರಿಚಾರಕ ನೇಣು ಬಿಗಿದು ಆತ್ಮಹತ್ಯೆ
Wednesday, September 9, 2026
ಉಜಿರೆ: ಬೆಳ್ತಂಗಡಿ ತಾಲೂಕಿನ ಇತಿಹಾಸ ಪ್ರಸಿದ್ದ ಕುತ್ಯಾರು ಶ್ರೀ ಸೋಮನಾಥೇಶ್ವರ ದೇವಸ್ಥಾನದಲ್ಲಿ ಅನೇಕ ವರ್ಷಗಳಿಂದ ಪರಿಚಾರಕರಾಗಿ ಸೇವೆ ಸಲ್ಲಿಸುತ್ತಿದ್ದ ಅವಿವಾಹಿತ ಭಾಸ್ಕರ ರಾವ್ (60) ಸೆ.9 ರಂದು ದೇವಸ್ಥಾನದ ವಸತಿಗೃಹದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ದೇವಸ್ಥಾನದಲ್ಲಿ ದೀರ್ಘಕಾಲದಿಂದ ಧಾರ್ಮಿಕ ಸೇವೆ ಹಾಗೂ ಪರಿಚಾರಕರಾಗಿ ತೊಡಗಿಸಿ ಕೊಂಡಿದ್ದ ಅವರ ಮರಣಕ್ಕೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಬೆಳ್ತಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.