ಬೆಳ್ತಂಗಡಿ ಬಸದಿಯಲ್ಲಿ ದಶಲಕ್ಷಣ ಪರ್ವ ಆಚರಣೆ

ಬೆಳ್ತಂಗಡಿ ಬಸದಿಯಲ್ಲಿ ದಶಲಕ್ಷಣ ಪರ್ವ ಆಚರಣೆ

ಉಜಿರೆ: ಬೆಳ್ತಂಗಡಿ ಜೈನಪೇಟೆಯಲ್ಲಿರುವ ರತ್ನತ್ರಯ ತೀರ್ಥಕ್ಷೇತ್ರದಲ್ಲಿ ಸೆ. 16 ರಿಂದ 26 ರ ವರೆಗೆ ದಶಲಕ್ಷಣಪರ್ವ ಆಚರಣೆ ನಡೆಯಲಿದೆ ಎಂದು ಬಸದಿಯ ಅನುವಂಶಿಕ ಆಡಳಿತ ಮೊಕ್ತೇಸರ ಕೆ. ಜಯವರ್ಮರಾಜ ಬಳ್ಳಾಲ್ ತಿಳಿಸಿದ್ದಾರೆ.

ಪ್ರತಿದಿನ ಬೆಳಿಗ್ಯೆ ಏಳು ಗಂಟೆಯಿಂದ ಮೂರೂ ಬಸದಿಗಳಲ್ಲಿ ಕ್ಷೀರಾಭಿಷೇಕ, ಅಷ್ಟವಿಧಾರ್ಚನೆ ಪೂಜೆ ಬಳಿಕ ದಶಧರ್ಮಗಳ ಸ್ವಾಧ್ಯಾಯ, ಜಪ, ತಪ, ಧ್ಯಾನ ಮೊದಲಾದ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಕ್ಷಮಾ, ಮಾರ್ದವ, ಆರ್ಜವ, ಶೌಚ, ಸತ್ಯ, ಸಂಯಮ, ತಪ, ತ್ಯಾಗ, ಆಕಿಂಚನ್ಯ ಮತ್ತು ಬ್ರಹ್ಮಚರ್ಯ ಎಂಬ ಹತ್ತು ಧರ್ಮಗಳನ್ನು ಜೈನರು ಸಂಪ್ರದಾಯದAತೆ ಹತ್ತು ದಿನಗಳಲ್ಲಿ ಎಲ್ಲಾ ಬಸದಿಗಳಲ್ಲಿ ಶ್ರದ್ಧಾ-ಭಕ್ತಿಯಿಂದ ಆಚರಿಸುತ್ತಾರೆ.

ಪ್ರತಿಯೊಂದು ಧರ್ಮವೂ ನಿತ್ಯಜೀವನದಲ್ಲಿ ಮನ, ವಚನ, ಮತ್ತು ಕಾಯಿದಿಂದ ಪಾಲಿಸಬೇಕಾದ ಶ್ರೇಷ್ಠ ಧರ್ಮವಾದುದರಿಂದ ‘ಉತ್ತಮ’ ಎಂಬ ವಿಶೇಷಣ ಬಳಸುತ್ತಾರೆ. ಉತ್ತಮ ಕ್ಷಮಾ, ಉತ್ತಮ ಮಾರ್ದವ, ಉತ್ತಮ ಆರ್ಜವ.. ಇತ್ಯಾದಿ ದಶಧರ್ಮಗಳ ಆಚರಣೆಯ ಮರುದಿನ “ಕ್ಷಮಾವಳಿ” ಆಚರಿಸುತ್ತಾರೆ.

ಮನ-ವಚನ-ಕಾಯದಿಂದ ಆಪ್ತರಲ್ಲಿ, ಬಂಧುಗಳು ಹಾಗೂ ಸ್ನೇಹಿತರಲ್ಲಿ ಏನಾದರೂ ತಪ್ಪಿ ನಡೆದಿದ್ದರೆ ವಿನಯಪೂರ್ವಕವಾಗಿ ಕ್ಷಮೆಯನ್ನು ಯಾಚಿಸುವುದೇ “ಕ್ಷಮಾವಳಿ”. ಮೌಖಿಕವಾಗಿ ಪತ್ರ ಮೂಲಕ ಅಥವಾ ದೂರವಾಣಿ ಮೂಲಕ “ಕ್ಷಮಾವಳಿ” ದೇಶದೆಲ್ಲೆಡೆ ಆಚರಿಸುತ್ತಾರೆ.

ಸೆ. 21 ರಂದು ಹೊಂಬುಜ ಜೈನಮಠದ ಪೂಜ್ಯ ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ, ಬೆಳ್ತಂಗಡಿ ಬಸದಿಗೆ ಆಗಮಿಸಲಿದ್ದು ಮಂಗಲ ಪ್ರವಚನ ನೀಡುವರು ಹಾಗೂ ವಿದ್ಯಾರ್ಥಿವೇತನ ವಿತರಿಸಲಿದ್ದಾರೆ. ಎಂದು ಕೆ. ಜಯವರ್ಮರಾಜ ಬಳ್ಳಾಲ್ ತಿಳಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article