ಕಾಡಾನೆಯನ್ನು ಕಾಡಿಗಟ್ಟಿದ ಅರಣ್ಯ ಇಲಾಖೆ

ಕಾಡಾನೆಯನ್ನು ಕಾಡಿಗಟ್ಟಿದ ಅರಣ್ಯ ಇಲಾಖೆ

ಉಜಿರೆ: ಭಾನುವಾರ ಉಜಿರೆಯ ಇಂಜಿನೀಯರಿಂಗ್ ಕಾಲೇಜು ಬಳಿ ಪ್ರತ್ಯಕ್ಷವಾಗಿ ಜನರಲ್ಲಿ ಭಯ, ಆತಂಕ ಮೂಡಿಸಿದ್ದ ಕಾಡಾನೆಯನ್ನು ಅರಣ್ಯ ಇಲಾಖೆ  ಸಿಬ್ಬಂದಿ ಕೊನೆಗೂ ಕಾಡಿಗಟ್ಟುವಲ್ಲಿ ಯಶಸ್ವಿಯಾಗಿದೆ. 

ಸಾರ್ವಜನಿಕರ ಆಗ್ರಹದ ಮೇರೆಗೆ ಬೆಳ್ತಂಗಡಿ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಮಂಗಳೂರಿನಿಂದ ಆಗಮಿಸಿದ್ದ ಆನೆ ಕಾರ್ಯಪಡೆ ಕಾಲೇಜು ಪರಿಸರದಲ್ಲಿ ದಿನವಿಡೀ ಗಸ್ತು ನಡೆಸಿ ಸಂಜೆ ವೇಳೆ ಆನೆ ಪೇಟೆಯತ್ತ ಸಾಗಿಬರುವ ಸಂದರ್ಭ ಗುಂಡು ಹಾರಿಸಿ ತಡೆದು ಆನೆ ಸುತ್ತಾಡುತ್ತ ಅರಣ್ಯದತ್ತ ಹೆಜ್ಜೆ ಹಾಕಿರುವ ಮಾಹಿತಿ ಒದಗಿದೆ. ಆನೆ ಮತ್ತೆ ಜನ ಸಂಚಾರದ ನಗರ ಪ್ರದೇಶದತ್ತ ಸುಳಿಯದಂತೆ ಇಲಾಖೆ ಅದರ ಚಲನವಲನದತ್ತ ನಿಗಾ ವಹಿಸುವುದೆಂದು ಇಲಾಖೆ ತಿಳಿಸಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article