ತಲಪಾಡಿ ವಿವಾಹಿತ ನೇಣಿಗೆ ಶರಣು
Wednesday, September 23, 2026
ಉಳ್ಳಾಲ: ವಿವಾಹಿತ ಮನೆಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ತಲಪಾಡಿ ನಾರ್ಲಪಡೀಲ್‌ನಲ್ಲಿ ನಡೆದಿದೆ.
ನಾರ್ಲಪಡೀಲ್ ನಿವಾಸಿ ರಂಜಿತ್ (35) ಆತ್ಮಹತ್ಯೆ ಮಾಡಿಕೊಂಡವರು. ವಿವಾಹಿತರಾಗಿರುವ ರಂಜಿತ್ ಅವರಿಗೆ ಆರು ತಿಂಗಳ ಮಗುವೊಂದಿದೆ. ತಾಯಿಗೆ ಊಟ ಮಾಡಲು ತಿಳಿಸಿದ ರಂಜಿತ್ ಬಳಿಕ ಮನೆಯೊಳಗೆ ತೆರಳಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ.
ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.