Bangalore: ‘ಯುವನಿಧಿ’ಗೆ ಎರಡು ದಿನದಲ್ಲಿ ಆರು ಸಾವಿರಕ್ಕೂ ಅಧಿಕ ಮಂದಿ ಅರ್ಜಿ
Friday, December 29, 2023
ಬೆಂಗಳೂರು: ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಯೋಜನೆ ‘ಯುವನಿಧಿ’ ಯೋಜನೆಗೆ ಎರಡೇ ದಿನದಲ್ಲಿ ಒಟ್ಟು ೬ ಸಾವಿರಕ್ಕೂ ಅಧಿಕ ಮಂದಿ ಅರ್ಜಿ ಸಲ್ಲಿಕೆ ಮಾಡಿದ್ದಾರೆ.
ಡಿ.೨೬ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯುವನಿಧಿ ಯೋಜನೆಗೆ ಚಾಲನೆ ನೀಡಿದ್ದರು, ಅರ್ಹ ಅಭ್ಯರ್ಥಿಗಳು ‘ಸೇವಾ ಸಿಂಧು’ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಡಿ.೨೮ರ ಸಂಜೆ ೬ಗಂಟೆಯ ವೇಳೆ ಒಟ್ಟು ೬,೦೬೨ ಮಂದಿ ಯುವನಿಧಿ ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ನಿರುದ್ಯೋಗಿ ಪದವೀಧರರಿಗೆ ಮಾಸಿಕ ೩ ಸಾವಿರ ರೂ. ಭತ್ತೆ, ಡಿಪ್ಲೋಮಾ ಮಾಡಿ ನಿರುದ್ಯೋಗಿ ಯಾಗಿರುವವರಿಗೆ ಮಾಸಿಕ ೧,೫೦೦ ರೂ. ಭತ್ತೆ ನೀಡುವ ‘ಯುವನಿಧಿ’ ಯೋಜನೆಗೆ ನಿರುದ್ಯೋಗಿಗಳಿಂದ ಭಾರೀ ಸ್ಪಂದನೆ ಸಿಕ್ಕಿದೆ ಎಂದು ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.