KVGB ವ್ಯಾಪಾರಿ ವರ್ಗಕ್ಕೆ ಹೊಸ ಕರೆಂಟ್‌ಅಕೌಂಟ್ ಬಿಡುಗಡೆ
ಮಂಗಳೂರು: ವ್ಯಾಪಾರಿಗಳು, ಟ್ರಸ್ಟ್‌ಗಳು, ಪಾಲುದಾರಿಕೆಗಳು, ಸಂಘಗಳು ಮತ್ತು ಸಂಸ್ಥೆಗಳನ್ನು ಗುರಿಯಾಗಿಸಿಕೊಂಡು ಪ್ರೀಮಿಯರ್ ವಿಭಾಗಕ್ಕೆ ಪ್ರಮುಖ ಗ್ರಾಮೀಣ ಬ್ಯಾಂಕುಗಳ ಸಾಲಿನಲ್ಲಿರುವ ಕರ್ನಟಕ ವಿಕಾಸ ಗ್ರಾಮೀಣ ಬ್ಯಾಂಕು ವಿನೂತನ ಚಾಲ್ತಿ ಖಾತೆ ಯೋಜನೆಯನ್ನು ಬುಧವಾರ ಬ್ಯಾಂಕಿನ ಅಧ್ಯಕ್ಷ ಶ್ರೀಕಾಂತ್ ಎಂ. ಭಂಡಿವಾಡ ಅವರು ಬಿಡುಗಡೆ ಮಾಡಿದರು.
ಬಳಿಕ ಮಾತನಾಡಿದ ಅವರು, ನೂತನವಾಗಿ ಬಿಡುಗಡೆಗೊಂಡ ಚಾಲ್ತಿ ಖಾತೆ ವ್ಯಾಪಾರಿ ವರ್ಗಕ್ಕೆ ವಿಶೇಷ ಪ್ರಯೋಜನ ನೀಡಲಿದೆ. ಹೊಸ ಚಾಲ್ತಿ ಖಾತೆಯ ಪ್ರಯೋಜನಗಳನ್ನು ವಿವರಿಸಿದ ಅವರು ಮಾಸಿಕ ಸರಾಸರಿ ೨ ಲಕ್ಷ ರೂ. ಶಿಲ್ಕು ಇಟ್ಟು ಖಾತೆ ನಿರ್ವಹಿಸುವವರಿಗೆ ದಿನಕ್ಕೆ ೫ ಲಕ್ಷ ರೂ. ತನಕ ನಗದು ನಿರ್ವಹಣೆ ಶುಲ್ಕ ಮನ್ನಾ ಮಾದಲಾಗುವುದು. ಹೆಚ್ಚುವರಿಯಾಗಿ, ಖಾತೆದಾರರು ಆರ್‌ಟಿಜಿಎಸ್/ನೆಫ್ಟ್/ ಮೊಬೈಲ್ ಬ್ಯಾಂಕಿಂಗ್, ನೆಟ್ ಬ್ಯಾಂಕಿಂಗ್ ಮಚೆಂಟ್ ಅಪ್ಲಿಕೇಶನ್, ಯುಪಿಐ, ಎಸ್‌ಎಂಎಸ್ ಮತ್ತು ಡಿಮ್ಯಾಂಡ್ ಡ್ರಾಫ್ಟ್‌ಗಳ ಮೇಲಿನ ಕಮಿಶನ್/ಶುಲ್ಕಗಳ ವಿನಾಯಿತಿಗಳನ್ನು ಪಡೆಯುವರು ಎಂದು ಹೇಳಿದರು.
೩೦೦ ಹಾಳೆಗಳ ಮುದ್ರಿತ ಚೆಕ್ ಪುಸ್ತಕಗಳು ಮತ್ತು ರೂಪೇ ಡೆಬಿಟ್ ಕಾರ್ಡ್‌ಗಳು/ರೂಪೇ ಪ್ಲಾಟಿನಂ ಕಾರ್ಡ್‌ಗಳು, ಜೊತೆಗೆ ಕ್ಯೂಆರ್ ಕೋಡ್‌ಗಳನ್ನು ಕೂಡ ಶುಲ್ಕವಿಲ್ಲದೆ ನೀಡಲಾಗುವುದು ಎಂದು ಶ್ರೀಕಾಂತ್ ಎಂ. ಭಂಡಿವಾಡ ಹೇಳಿದರು.
ಬ್ಯಾಂಕಿನ ಒಟ್ಟು ವ್ಯವಹಾರ ೩೩,೯೩೮ ಕೋಟಿ ರೂ. ದಾಟಿದ್ದು ಅದು ೧೮೪೭೯ ಕೋಟಿ ರೂ.ಗಳ ಠೇವಣಿ ಮತ್ತು ೧೫,೪೫೯ ಕೋಟಿ ರೂ. ಮುಂಗಡ ಮಟ್ಟವನ್ನು ಹೊಂದಿದೆ. ಬದಲಾಗುತ್ತಿರುವ ಪರಿಸರಕ್ಕೆ ತಕ್ಕಂತೆ ಬ್ಯಾಂಕ್ ತನ್ನ ಗ್ರಾಹಕರಿಗೆ ಉನ್ನತ ದರ್ಜೆಯ ಯೋಜನೆಗಳಲ್ಲದೆ ಉತ್ಕೃಷ್ಟ ಸೇವೆ ನೀಡಲು ಯತ್ನಿಸುತ್ತಿದೆ ಎಂದು ಅವರು ಹೇಳಿದರು.
ಬ್ಯಾಂಕಿನ ಮಹಾ ಪ್ರಬಂಧಕರುಗಳಾದ ವಿ. ತೆನ್ನರಸು, ಆರ್.ಟಿ. ಕಾಂಬಳೆ, ಸತೀಶ್ ಆರ್., ಸತ್ಯ ಪ್ರಸಾದ್ ಎನ್., ಎಂ. ಪುನಿತ್, ಮಾರುಕಟ್ಟೆ ಮುಖ್ಯ ಪ್ರಬಂಧಕ ಉಲ್ಲಾಸ ಗುನಗಾ, ಯೋಜನಾ ವಿಭಾಗದ ಮುಖ್ಯ ಪ್ರಬಂಧಕ ವಿನೋದಕದಮ್ ಮತ್ತಿತರರು ಪಸ್ಥಿತರಿದ್ದರು.