Mangalore: ಡಿ. 28ರಂದು ಉಚಿತ ಸಾಮೂಹಿಕ ವಿವಾಹ

Mangalore: ಡಿ. 28ರಂದು ಉಚಿತ ಸಾಮೂಹಿಕ ವಿವಾಹ

 


ಮಂಗಳೂರು: ಅಖಿಲ ಕರ್ನಾಟಕ ರಾಜಕೇಸರಿ ಟ್ರಸ್ಟ್ ಮಂಗಳೂರು ವಲಯ, ಅರಸು ಫ್ರೆಂಡ್ಸ್ ಬಳಗ ಮಂಗಳೂರು, ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ- ದ.ಕ ಜಿಲ್ಲಾ ಘಟಕ, ಅಳಕೆ ಫ್ರೆಂಡ್ಸ್ ಮಂಗಳೂರು ಇದರ ನೇತೃತ್ವದಲ್ಲಿ ಡಿ. 28ರಂದು ಶ್ರೀಕ್ಷೇತ್ರ ಕುದ್ರೋಳಿ ಗೋಕರ್ಣನಾಥ ದೇವಸ್ಥಾನದ ಕೊರಗಪ್ಪ ಕಲ್ಯಾಣ ಮಂಟಪದಲ್ಲಿ ಉಚಿತ ಸಾಮೂಹಿಕ ವಿವಾಹ ಹಾಗೂ 3 ಬಡ ಕುಟುಂಬಗಳಿಗೆ ಮನೆ  ಹಸ್ತಾಂತರ ಕಾರ್ಯ ನಡೆಯಲಿದೆ.

 ಡಿ. 28ರ ಬೆಳಗ್ಗೆ 9 ಕ್ಕೆ ಅಳಕೆಯಿಂದ ಕುದ್ರೋಳಿ ಶ್ರೀಗೋಕರ್ಣನಾಥೇಶ್ವರ ದೇವಸ್ಥಾನದ ವರೆಗೆ ವಧು-ವರರ ದಿಬ್ಬಣ ಮೆರವಣೆಗೆ ನಡೆಯಲಿದೆ. 10ಕ್ಕೆ ಕುದ್ರೋಳಿ ದೇವಸ್ಥಾನದ ಪ್ರಾಂಗಣದಲ್ಲಿ ವಧು-ವರರ ಸಾಂಪ್ರದಾಯಿಕ ಸ್ವಾಗತ ಕಾರ್ಯಕ್ರಮ ನಡೆಯಲಿದೆ. ನಂತರ ನಡೆಯುವ ಸಬಾ ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ದ.ಕ ಸಂಸದ ನಳೀನ್ ಕುಮಾರ್ ಕಟೀಲ್ ವಹಿಸಲಿದ್ದಾರೆ. ಗುರುಪುರ ವಜ್ರದೇಹಿಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಅಖಿಲ ಕರ್ನಾಟಕ ರಾಜಕೇಸರಿ ಟ್ರಸ್ಟ್ ಸ್ಥಾಪಕಾಧ್ಯಕ್ಷ ದೀಪಕ್ ಜಿ. ಬೆಳ್ತಂಗಡಿ, ಉದ್ಯಮಿ ಕಿರಣ್ ಚಂದ್ರ ಧರ್ಮಸ್ಥಳ, ಸಾಮಾಜಿಕ ಕಾರ್ಯಕರ್ತ ಡಾ. ಸಿ.ಕೆ ಮೌಲ ಶರೀಫ್,

 ಶಾಸಕರಾದ ಡಾ. ವೈ. ಭರತ್ ಶೆಟ್ಟಿ, ಹರೀಶ್ ಪೂಂಜಾ, ವೇದವ್ಯಾಸ ಕಾಮತ್, ಶ್ರೀಕ್ಷೇತ್ರ ಕುದ್ರೋಳಿಯ  ಅಧ್ಯಕ್ಷ ಸಾಯಿರಾಮ್, ಕೋಶಾಧಿಕಾರಿ ಪದ್ಮರಾಜ್, ಜಿಲ್ಲಾ ಅಧ್ಯಕ್ಷ ಸುದರ್ಶನ್ ಮೂಡಬಿದ್ರೆ, ಉದ್ಯಮಿಗಲಾದ ವಾಮನ ಪೈ, ಕೃಷ್ಣದಾಸ್ ಪ್ರಭು, ಸಂತೋಷ್ ಕೋಟ್ಯಾನ್, ಚಲನಚಿತ್ರ ನಿರ್ಮಾಪಕರಾದ ನರೇಶ್ ಕುಮಾರ್ ಮತ್ತು ಪ್ರತಿಭಾ ನರೇಶ್, ನಟ ಡಾ.  ಪಿ. ಮೂರ್ತಿ, ಪುತ್ತೂರು ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಆಂಜನೇಯ ರೆಡ್ಡಿ,  ಅಖಿಲ ಕರ್ನಾಟಕ ರಾಜಕೇಸರಿ ಟ್ರಸ್ಟ್ ಜಿಲ್ಲಾಧ್ಯಕ್ಷ ಅಶೋಕ್ ಎಸ್ ಪೂಜಾರಿ, ಅಳಕೆ ಫ್ರೆಂಡ್ಸ್ ಅಧ್ಯಕ್ಷ ಪ್ರಶಾಂತ್ ಭಂಡಾರಿ, ರಕ್ಷಣಾ ವೇದಿಕೆ ಅಧ್ಯಕ್ಷ ಗಿರೀಶ್ ಶೇಟ್, ಅರಸು ಫ್ರೆಂಡ್ಸ್ ಅಧ್ಯಕ್ಷ ಮನೋಜ್ ಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿರುವರು. ಮಧ್ಯಾಹ್ನ 12.20ರ ಮೀನಲಗ್ನದಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮ ನೆರವೇರಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article