Bantwal: ವಿನೂತನ ರೀತಿಯಲ್ಲಿ ಪ್ರತಿಭಟನೆ
Thursday, January 4, 2024
ಮಂಗಳೂರು: ಹುಬ್ಬಳ್ಳಿಯಲ್ಲಿ ಶ್ರೀಕಾಂತ್ ಪೂಜಾರಿ ಎಂಬ ರಾಮ ಮಂದಿರದ ಕರಸೇವಕನನ್ನು ಪೊಲೀಸ್ ಇಲಾಖೆ ಮತ್ತು ಹಿಂದೂ ವಿರೋಧಿ ಕಾಂಗ್ರೆಸ್ ಸರ್ಕಾರ ೩೧ ವರ್ಷದ ಹಳೆ ಕೇಸನ್ನು ಕೆದಕಿ ಬಂಧಿಸಿದ ಘಟನೆಯನ್ನು ವಿರೋಧಿಸಿ ಹಿಂದು ಜಾಗರಣ ವೇದಿಕೆ ಮಂಗಳೂರು ಗ್ರಾಮಾಂತರ ಜಿಲ್ಲೆ ವತಿಯಿಂದ ಬಿ.ಸಿ. ರೋಡಿನಲ್ಲಿ ನಾನು ರಾಮ ಭಕ್ತ ನನ್ನನ್ನು ಬಂಧಿಸಿ ಎಂದು ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು.
ಈ ಪ್ರತಿಭಟನೆಯಲ್ಲಿ ವಿಚಾರ ಪರಿವಾರದ ಪ್ರಮುಖ ಕಾರ್ಯಕರ್ತರು ಭಾಗವಹಿಸಿದ್ದರು.
ಪ್ರಮುಖರಾದ ರವಿರಾಜ್ ಬಿ.ಸಿ. ರೋಡ್, ರತ್ನಾಕರ ಶೆಟ್ಟಿ, ಪ್ರಶಾಂತ್ ಕೆಂಪುಗುಡ್ಡೆ, ನರಸಿಂಹ ಮಾಣಿ, ಸಮಿತ್ ರಾಜ್ ಧರೆಗುಡ್ಡೆ, ರಾಮದಾಸ್ ಬಂಟ್ವಾಳ, ಪ್ರಭಾಕರ್ ಪ್ರಭು, ಸುದರ್ಶನ್ ಬಜ, ರಮಾನಾಥ ರಾಯಿ, ಅಜಿತ್ ಶೆಟ್ಟಿ ಕಾರಿಂಜ, ರವಿ ಕೆಂಪು ಗುಡ್ಡೆ, ಬಾಲಕೃಷ್ಣ ಕಲಾಯಿ, ಅರುಣ್ ಸಜೀಪ, ಹರೀಶ್ ತಲೆಂಬೀಲ ಉಪಸ್ಥಿತರಿದ್ದರು.