Chikkamagaluru: ಅತಿಥಿ ಬೋಧಕರಿಂದ ಸಚಿವರಿಗೆ ಮನವಿ

Chikkamagaluru: ಅತಿಥಿ ಬೋಧಕರಿಂದ ಸಚಿವರಿಗೆ ಮನವಿ


ಚಿಕ್ಕಮಗಳೂರು: ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಬೋಧಕರ ಸಮಸ್ಯೆಗಳನ್ನು ಪರಿಹರಿಸುವಂತೆ ಒತ್ತಾಯಿಸಿ ರಾಜ್ಯ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಅತಿಥಿ ಬೋಧಕರ ಸಮಿತಿ ರಾಜ್ಯಾಧ್ಯಕ್ಷೆ ಇ. ನಾಗವೇಣಿ ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ. ರಾಜೇಗೌಡ ಅವರ ಮೂಲಕ ಕೌಶಲ್ಯಭಿವೃದ್ದಿ ಸಚಿವರಿಗೆ ಮನವಿ ಸಲ್ಲಿಸಿದರು.

ಗುರುವಾರ ನರಸಿಂಹರಾಜಪುರ ಪಟ್ಟಣದಲ್ಲಿ ಶಾಸಕ ಟಿ.ಡಿ. ರಾಜೇಗೌಡ ಅವರಿಗೆ ಮನವಿ ಸಲ್ಲಿಸಿದ ಅವರು, ಸರ್ಕಾರಿ ಕೈಗಾರಿಕಾ ಸಂಸ್ಥೆ (ಐಟಿಐ) ಅತಿಥಿ ಬೋಧಕರು ಕಡಿಮೆ ವೇತನಕ್ಕೆ ಕಾರ್ಯನಿರ್ವ ಹಿಸುತ್ತಿದ್ದಾರೆ. ಸೇವಾಭದ್ರತೆ ಇಲ್ಲದೆ ಅನೇಕ ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಸಂಸ್ಥೆಗಳಲ್ಲಿ ಏಳುನೂರಕ್ಕೂ ಹೆಚ್ಚು ಬೋಧಕರು ಪ್ರತಿನಿತ್ಯ ಏಳು ಗಂಟೆಗೂ ಹೆಚ್ಚುಕಾಲ ಕಾರ್ಯನಿರ್ವಹಿಸುತ್ತಿದ್ದು, ರಾಜ್ಯದ ಅನೇಕ ಸರ್ಕಾರಿ ಕೈಗಾರಿಕಾ ಸಂಸ್ಥೆಗಳು ಅತಿಥಿ ಬೋಧಕರಿಂದ ನಡೆಯುತ್ತಿವೆ ಎಂದು ಹೇಳಿದರು.

ಇಂದು ಅತಿಥಿ ಬೋಧಕರು ಪ್ರತಿನಿತ್ಯ ಕೇವಲ ಐನೂರು ರೂ.ನಂತೆ ಸಂಭಾವನೆಯಂತೆ ಪ್ರತೀ ತಿಂಗಳು 8 ರಿಂದ 10 ಸಾವಿರ ರೂ. ಮಾತ್ರ ಪಡೆಯುತ್ತಿದ್ದಾರೆ. ಈ ವೇತನವೂ ವರ್ಷದಲ್ಲಿ 11 ತಿಂಗ ಳು ಮಾತ್ರ ಪಡೆಯುತ್ತಿದ್ದಾರೆ. ಸರ್ಕಾರ ಪ್ರತಿನಿತ್ಯ ನಾಲ್ಕು ಗಂಟೆಯಂತೆ ಸಂಭಾವನೆ ನೀಡುತ್ತಿದ್ದು, ಬೋಧಕರು 6 ರಿಂದ 7 ಗಂಟೆಯವರೆಗೂ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದರು.

ಸರ್ಕಾರ ನೀಡುತ್ತಿರುವ ಸಂಭಾವನೆಯಿಂದ ಜೀವನ ನಡೆಸುವುದು ಕಷ್ಟವಾಗಿದೆ ಹಾಗೂ ಸಂಭಾವನೆ ಪ್ರತಿ ತಿಂಗಳು ನೀಡದೆ ಮೂರು ತಿಂಗಳು ಆರು ತಿಂಗಳಿಗೊಮ್ಮೆ ನೀಡಲಾಗುತ್ತಿದೆ ಎಂದ ಅವರು, ಈ ಹಿಂದೆ ಅನೇಕ ಬಾರಿ ಸರ್ಕಾರದ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ಹೇಳಿದರು.

ಸರ್ಕಾರಿ ಕೈಗಾರಿಕಾ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಬೋಧಕರ ವೇತನವನ್ನು ಹೆಚ್ಚಳ ಮಾಡಬೇಕು ಹಾಗೂ ಸೇವಾಭದ್ರತೆ ನೀಡಬೇಕು. ಪ್ರತಿ ತಿಂಗಳು ಸಕಾಲದಲ್ಲಿ ಸಂಭಾವನೆ ನೀಡಬೇಕು ಜೊತೆಗೆ ಅತಿಥಿ ಬೋಧಕರು ಎದುರಿಸುತ್ತಿರುವ ಇತರೆ ಸಮಸ್ಯೆಗಳ ಪರಿಹಾರಕ್ಕೆ ಸರ್ಕಾರ ಮುಂದಾಗಬೇಕೆಂದು ತಿಳಿಸಿದರು. 

ಈ ಸಂದರ್ಭ ಎಚ್.ಆರ್. ಕೇಶವಮೂರ್ತಿ ಮತ್ತಿತರರು ಇದ್ದರು.


Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article