Kota: ಬೀಗ ಮುರಿದು ಕಳವು
Friday, January 5, 2024
ಕೋಟ: ಬಿಲ್ಲಾಡಿ ಗ್ರಾಮ ಬನ್ನೇರಳಕಟ್ಟೆಯ ಬೂದಾಡಿ ಎಂಬಲ್ಲಿರುವ ಮನೆಗೆ ಜ.೨ರಂದು ರಾತ್ರಿ ವೇಳೆ ನುಗ್ಗಿದ ಕಳ್ಳರು ಅಪಾರ ಮೌಲ್ಯದ ಸೊತ್ತುಗಳನ್ನು ಕಳವು ಮಾಡಿರುವ ಘಟನೆ ನಡೆದಿದೆ.
ವನಜಾ ಎಂಬವರ ಮನೆಯ ಎದುರಿನ ಬಾಗಿಲಿನ ಬೀಗವನ್ನು ಮುರಿದು ಒಳನುಗ್ಗಿದ ಕಳ್ಳರು, ತಾಮ್ರದ ಹಂಡೆ, ತಾಮ್ರದ ಕೊಡಪಾನ ಹಾಗೂ ಇತರ ಅಲ್ಯೂಮಿನಿಯಂ ಪಾತ್ರೆ, ಇತರೆ ಸಾಮಾಗ್ರಿಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ದೂರಲಾಗಿದೆ.
ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.