Kundapura: ಜ.22: ಶ್ರೀ ರಾಮನ ಪ್ರಾಣ ಪ್ರತಿಷ್ಠೆ ಪ್ರಯುಕ್ತ 'ಪಂಚಾಮೃತ ಅಭಿಷೇಕ'

Kundapura: ಜ.22: ಶ್ರೀ ರಾಮನ ಪ್ರಾಣ ಪ್ರತಿಷ್ಠೆ ಪ್ರಯುಕ್ತ 'ಪಂಚಾಮೃತ ಅಭಿಷೇಕ'


 ಕುಂದಾಪುರ: ಇಲ್ಲಿನ ಶ್ರೀ ಸೀತಾರಾಮಚಂದ್ರ ದೇವಸ್ಥಾನದಲ್ಲಿ ಅಯೋಧ್ಯೆ ಶ್ರೀ ರಾಮನ ಪ್ರಾಣ ಪ್ರತಿಷ್ಠೆ ಪ್ರಯುಕ್ತ ಜ.22 ರಂದು ಬೆಳಿಗ್ಗೆ  7 ಗಂಟೆಗೆ 'ಪಂಚಾಮೃತ ಅಭಿಷೇಕ' 10.30ಕ್ಕೆ ಶ್ರೀ ರಾಮ ತಾರಕ ಮಂತ್ರ ಹೋಮ ನಡೆಯಲಿದೆ.

ಬೆಳಿಗ್ಗೆ 7 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ನಿರಂತರ ಭಜನೆಯು ಶ್ರೀ ಚಿಕ್ಕಮ್ಮದೇವಿ, ಶ್ರೀ ಮೈಲಾರೇಶ್ವರ, ರಾಮಕ್ಷತ್ರಿಯ ಮಹಿಳಾ ಮಂಡಳಿ, ಶ್ರೀ ಏಕನಾಥೇಶ್ವರಿ, ಶ್ರೀ ಮಹಾಲಕ್ಷ್ಮೀ, ಶ್ರೀ ರಾಮ ಮಾತೃ ಮಂಡಳಿ ಕುಂದಾಪುರದ ಭಜನಾ ತಂಡಗಳಿಂದ ಜರುಗಲಿದೆ.

ಮಧ್ಯಾಹ್ನ 12ಗಂಟೆಯಿಂದ ಸಾಮೂಹಿಕವಾಗಿ 'ಶ್ರೀ ರಾಮ ತಾರಕ ಮಂತ್ರ ಜಪ' 'ಕಲಶಾಭಿಷೇಕ' 'ವಿಶೇಷ ಮಹಾಪೂಜೆ' ನಡೆಯಲಿದೆ. ಮಧ್ಯಾಹ್ನ 1 ಗಂಟೆಗೆ ಸಾರ್ವಜನಿಕ 'ಮಹಾ ಅನ್ನಸಂತರ್ಪಣೆ' ನಡೆಯಲಿದೆ.

ಸಂಜೆ  7 ಗಂಟೆಗೆ ದೀಪ ಪ್ರಜ್ವಲನೆಯೊಂದಿಗೆ ದೀಪೋತ್ಸವ, ರಾತ್ರಿ ಪೂಜೆ, ಪ್ರಸಾದ ವಿತರಣೆ ನಡೆಯಲಿದೆ ಎಂದು ದೇವಳದ ಆಡಳಿತ ಮಂಡಳಿಯ ಪ್ರಕಟಣೆಯಲ್ಲಿ ತಿಳಿಸಿದೆ. 

ಇದೇ ಸಂದರ್ಭದಲ್ಲಿ ಅಯೋಧ್ಯೆಯಲ್ಲಿ ನಡೆಯುವ ಶ್ರೀ ರಾಮ ಪ್ರಾಣ ಪ್ರತಿಷ್ಠೆಯ ಕಾರ್ಯಕ್ರಮದ  ನೇರ ವೀಕ್ಷಣೆಗೆ ಭಕ್ತರಿಗೆ ಪ್ರೊಜೆಕ್ಟರ್ ಮೂಲಕ ಅವಕಾಶ ಕಲ್ಪಿಸಲಾಗಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article