Kundaura: ಸಾಹಿತಿ ಶಾರದಾ ಭಟ್ ನಿಧನ
Tuesday, January 2, 2024
ಕುಂದಾಪುರ: ಮೂಲತಃ ಕುಂದಾಪುರ ಕೋಟೇಶ್ವರ ಮೂಲದವರಾದ ಸಾಹಿತಿ ಕೆ. ಶಾರದಾ ಭಟ್ (೭೫) ಸೋಮವಾರ ರಾತ್ರಿ ಅಲ್ಪಕಾಲದ ಅಸೌಖ್ಯದಿಂದ ಕೋಟೇಶ್ವರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಪಯಣ, ಪಲಾಯನ, ಪರಿಭ್ರಮಣ, ಪದರಗಳು ಕಾದಂಬರಿ ಹಾಗೂ ಸಾತತ್ತೆಗೊಂದು ಸನ್ಮಾನ, ಸೆಕ್ರೆಟರಿ ಸಾಹೇಬರ ಹೆಂಡತಿ ಸೇರಿದಂತೆ ೨೦ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದರು.
ಕಳೆದ ೧೦ ವರ್ಷಗಳಿಂದ ಚಡಗ ಕಾದಂಬರಿ ಪ್ರಶಸ್ತಿ ಆಯ್ಕೆ ಸಮಿತಿ ಸಂಚಾಲಕಿಯಾಗಿ ಸೇವೆ ಸಲ್ಲಿಸಿದ್ದರು.
ಸಂಘಟನೆ, ಪತ್ರಿಕೋದ್ಯಮ ಕ್ಷೇತ್ರದಲ್ಲಿಯೂ ಗುರುತಿಸಿಕೊಂಡಿದ್ದರು.
ಅವಿವಾಹಿತೆಯಾಗಿದ್ದ ಅವರ ಮೃತದೇಹವನ್ನು ಅವರ ಇಚ್ಛೆಯಂತೆ ಮಣಿಪಾಲ ಕೆಎಂಸಿ ವೈದ್ಯಕೀಯ ಕಾಲೇಜಿಗೆ ನೀಡಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿವೆ.
ಈಚೆಗಷ್ಟೇ ಅವರ ಸಹೋದರಿ, ಸಾಹಿತಿ ತಾರಾ ಭಟ್ ನಿಧನರಾಗಿದ್ದರು.
ಸಾಹಿತಿ ಶಾರದಾ ಭಟ್ ನಿಧನಕ್ಕೆ ಕಸಪಾ ಉಡುಪಿ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಸಂತಾಪ ಸೂಚಿಸಿದ್ದಾರೆ.