Mangalore: ಭಜನಾ ಸಂಕೀರ್ತನೆಗೆ ಚಾಲನೆ
Monday, January 22, 2024
ಮಂಗಳೂರು: ಅಯೋಧ್ಯ ಪ್ರಭು ಶ್ರೀ ರಾಮಚಂದ್ರ ದೇವರ ಪ್ರಾಣ ಪ್ರತಿಷ್ಠೆಯ ನಿಮಿತ್ತ ಶಕ್ತಿ ನಗರ ಶ್ರೀ ಗೋಪಾಲಕೃಷ್ಣ ಭಜನಾ ಮಂದಿರದಲ್ಲಿ ಜ.22 ರಂದು ಬೆಳಿಗ್ಗೆ 9 ಗಂಟೆಗೆ ಭಜನಾ ಸಂಕೀರ್ತನೆಯನ್ನು ದೀಪ ಪ್ರಜ್ವಲನೆ ಮುಖಾಂತರ ಚಾರಣ ಗೊಳಿಸಲಾಯಿತು. ವಿಶ್ವ ಹಿಂದೂ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಎಚ್.ಕೆ. ಪುರುಷೋತ್ತಮ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನೂರಾರು ಭಕ್ತಾದಿಗಳು, ರಾಮ ಭಕ್ತರು ನೇರ ಪ್ರಸಾರವನ್ನು ವೀಕ್ಷಣೆ ಮಾಡಿದರು ಮಧ್ಯಾಹ್ನ ಮಂಗಳಾರತಿ ನಂತರ ಭೋಜನ ವ್ಯವಸ್ಥೆ ಮಾಡಲಾಗಿತ್ತು.