Mangalore: ಕರಾವಳಿಯಲ್ಲಿ ಎರಡನೇ ದಿನವೂ ಮುಂದುವರೆದ ಅಕಾಲಿಕ ಮಳೆ
Thursday, January 4, 2024
ಮಂಗಳೂರು: ಮಂಗಳೂರು ನಗರ ಸೇರಿದಂತೆ ದ.ಕ.-ಉಡುಪಿ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಎರಡನೇ ದಿನವಾದ ಗುರುವಾರವೂ ಅಕಾಲಿಕ ಮಳೆಯಾಗಿದ್ದು, ವಾಆತಾವರಣ ತಂಪಾಗಿದೆ.
ಮಂಗಳೂರು ನಗರದಲ್ಲಿ ಬುಧವಾರ ರಾತ್ರಿಯಿಂದಲೇ ಮೋಡ ಕವಿದ ವಾತಾವರಣವಿದ್ದು, ಗುರುವಾರ ಬೆಳಗ್ಗೆಯಿಂದಲೇ ಮಳೆ ಬೀಳಲು ಆರಂಭವಾಗಿದ್ದು, ಮಧ್ಯಾಹ್ನದ ತನಕ ಬಿಡದೆ ಮಳೆಯಾಗಿದ್ದು, ಮಧ್ಯಾಹ್ನದ ಬಳಿಕ ಕೊಂಚ ಬಿಡುವು ನೀಡಿದೆ.
ನಗರದ ನಗರ ಹೊರವಲಯದಲ್ಲೂ ಸಾಧಾರಣ ಮಳೆಯಾಗುತ್ತಿದೆ. ಜಿಲ್ಲಾದ್ಯಂತ ಮೋಡ ಕವಿದ ವಾತಾವರಣವಿದ್ದು, ಪುತ್ತೂರು, ಬಂಟ್ವಾಳ, ಬೆಳ್ತಂಗಡಿ, ಸುಳ್ಯ ತಾಲೂಕಿನಾದ್ಯಂತ ಬೆಳಗ್ಗೆಯಿಂದ ಉತ್ತಮ ಮಳೆಯಾಗಿದೆ. ಉಡುಪಿ ಜಿಲ್ಲೆಯಲ್ಲಿಯೂ ಮಳೆ ಮುಂದುವರೆದಿದೆ.