Chikkamagaluru: ಕೊರಟಗೆರೆ ಗ್ರಾಮದಲ್ಲಿ ಸಂವಿಧಾನ ಜಾಗೃತಿ ರಥಕ್ಕೆ ಸ್ವಾಗತ
ಚಿಕ್ಕಮಗಳೂರು: ಸಂವಿಧಾನ ಜಾಗೃತಿ ಜಾಥಾವು ಫೆಬ್ರವರಿ 13 ರಂದು ಅಜ್ಜಂಪುರ ತಾಲ್ಲೂಕಿನಲ್ಲಿ ಸಂಚರಿಸುತ್ತಿದ್ದು, ಕೊರಟಗೆರೆ, ಕುಡ್ಲೂರು, ತರೀಕೆರೆ ತಾಲ್ಲೂಕಿನ ಕಾಮನದುರ್ಗ, ಉಡೇವಾ, ಲಿಂಗದಹಳ್ಳಿ, ಕಡೂರು ತಾಲ್ಲೂಕಿನ ಬಳ್ಳಿಗನೂರು, ಬೀರೂರು ಪುರಸಭೆ ಹಾಗೂ ಜೋಡಿತಿಮ್ಮಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಂಚರಿಸಿತು.
ಪ್ರಥಮವಾಗಿ ಕೊರಟಗೆರೆ ಗ್ರಾಮ ಪಂಚಾಯತಿಗೆ ಆಗಮಿಸಿದ ಜಾಗೃತಿ ರಥ ಯಾತ್ರೆಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ದಲಿತ ಮುಖಂಡರು, ಶಿಕ್ಷಕರು, ಶಾಲಾ ಮಕ್ಕಳು, ಅಂಗನವಾಡಿ ಸಿಬ್ಬಂದಿಗಳು, ಸ್ವಸಹಾಯ ಸಂಘಗಳು, ಸ್ತೀ ಶಕ್ತಿ ಸಂಘದ ಸದಸ್ಯರುಗಳು ಮತ್ತು ಸಾರ್ವಜನಿಕರು ಸಂಭ್ರಮದಿಂದ ಪೂರ್ಣ ಕುಂಭದೊಂದಿಗೆ ಸ್ವಾಗತಿಸಿ ಪುಷ್ಪಾರ್ಚನೆ ಮಾಡಿದರು.
ಶಾಲಾ ಮಕ್ಕಳು, ಛದ್ಮವೇಷಧಾರಿಗಳು, ಶಾಲಾ ಮಕ್ಕಳು ವಿವಿಧ ವೇಷ ಭೂಷಣಗಳೊಂದಿಗೆ, ಬೈಕ್ ರ್‍ಯಾಲಿ, ಟ್ರ್ಯಾಕ್ಟರ್‌ನಲ್ಲಿ ಏರ್ಪಡಿಸಲಾಗಿತ್ತು. ವಿದ್ಯಾರ್ಥಿಗಳು ಡ್ರಂಸೆಟ್ ವಾದ್ಯ, ತಮಟೆ ವಾದ್ಯ, ಛದ್ಮವೇಷ, ವೀರಗಾಸೆ ಕುಣಿತ, ಡೊಳ್ಳು ವಾದ್ಯದೊಂದಿಗೆ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ನಂತರ ಗ್ರಾಮ ಪಂಚಾಯತ್ ಸದಸ್ಯರು ಸಂವಿಧಾನ ಪೀಠಿಕೆ ಭೋದಿಸಲಾಯಿತು. ಶಾಲಾ ಮಕ್ಕಳು ದೇಶಭಕ್ತಿ ಗೀತೆ ಹಾಡಿದರು. ಉಡೇವಾ ಶಾಲಾ ಮಕ್ಕಳು ಕಿರುನಾಟಕ ಪ್ರದರ್ಶಿಸಿದರು. ಬಲೂನ್‌ಗಳ ಪ್ರದರ್ಶನ ಆಕರ್ಷಣೀಯವಾಗಿತ್ತು. ಕಡೂರು ತಾ. ಬಳ್ಳಿಗನೂರಿನ ತಹಸೀಲ್ದಾರ್‌ರು ಸಂವಿಧಾನದ ಉಪನ್ಯಾಸ ನೀಡುತ್ತಾ ಸಂವಿಧಾನದ ಮಹತ್ವ, ಮೌಲ್ಯಗಳಾದ ಸಮಾನತೆ, ಭ್ರಾತೃತ್ವ, ಸ್ವಾತಂತ್ರ್ಯ ಮೌಲ್ಯಗಳನ್ನು ಜನಸಾಮಾನ್ಯರು ಅಳವಡಿಸಿಕೊಳ್ಳಬೇಕೆಂದು ತಿಳಿಸಿದರು.







