Mangalore: ಶಾಸಕ ಕಾಮತ್ ವಿರುದ್ಧ ಸ್ಫೀಕರ್‌ಗೆ ದೂರು, ಕ್ರಿಮಿನಲ್ ಕೇಸು ದಾಖಲು
ಮಂಗಳೂರು: ಜೇರೊಸಾ ಶಾಲಾ ಶಿಕ್ಷಕಿ ಧಾರ್ಮಿಕವಾಗಿ ಅವಹೇಳನ ವಿಚಾರದಲ್ಲಿ ಶಾಸಕ ವೇದವ್ಯಾಸ ಕಾಮತ್ ಅವರು ತನ್ನ ಅಧಿಕಾರವನ್ನು ಮರೆತು ಬೀದಿಗಿಳಿದು ಸಣ್ಣ ಮಕ್ಕಳನ್ನು ಸೇರಿಸಿಕೊಂಡು ಬೊಬ್ಬೆ ಹೊಡೆಯಲು ಪ್ರಚೋದನೆ ನೀಡಿದ್ದು, ಅವರ ವಿರುದ್ಧ ವಿಧಾನಸಭಾ ಸ್ಪೀಕರ್, ಮುಖ್ಯಮಂತ್ರಿಗಳಿಗೆ ದೂರನ್ನು ನೀಡಲಾಗುವುದು. ಇದರೊಂದಿಗೆ ಮಾನವ ಹಕ್ಕು ಹಾಗೂ ಮಕ್ಕಳ ಆಯೋಗ ಹಾಗೂ ಕ್ರಿಮಿನಲ್ ಕೇಸು ದಾಖಲಿಸಲಾಗುವುದು ಎಂದು ಕೆಪಿಸಿಸಿ ಉಪಾಧ್ಯಕ್ಷ, ಮಾಜಿ ವಿಧಾನಪರಿಷತ್ ಸದಸ್ಯ ಐವನ್ ಡಿ’ಸೋಜ ಹೇಳಿದರು.
ಅವರು ಫೆ.14 ರಂದು ನಗರದ ಕಾಂಗ್ರೆಸ್ ಭವನದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿ, ಗೌರವಯುತ ಸ್ಥಾನದಲ್ಲಿರುವ ಶಾಸಕರು ನೇರವಾಗಿ ಶಿಕ್ಷಣ ಅಧಿಕಾರಿಗಳನ್ನು ಕರೆದುಕೊಂಡುಹೋಗಿ ಸಮಸ್ಯೆಯ ಬಗ್ಗೆ ವಿಚಾರಣೆ ನಡೆಸಿ ಈ ವಿಚಾರವನ್ನು ನಾಲ್ಕು ಗೋಡೆಗಳ ಮಧ್ಯದಲ್ಲಿಯೇ ಮುಗಿಸಬಹುದಾಗಿತ್ತು. ಆದರೆ ಇಲ್ಲಿ ಶಾಸಕರು ಶಾಲೆಯ ಗೇಟ್ ಒಳಗೂ ಬಾರದೇ ರಸ್ತೆಯಲ್ಲಿ ನಿಂತು ಅವಹೇಳನಕಾರಿ ಪದಗಳನ್ನು ಬಳಸಿ ಸಿಸ್ಟರ್‌ಗಳಗೆ ಅವಮಾನ ಮಾಡಿರುವುದು ಮಾತ್ರವಲ್ಲದೇ, ರಸ್ತೆಯಲ್ಲಿ ಕುರಿಗಳನ್ನು ನಿಲ್ಲಿಸಿದಂತೆ ನಿಲ್ಲಿಸಿ ಉಪನ್ಯಾಸ ನೀಡಿದ್ದಾರೆ.
ಶಾಸಕ ಡಾ. ವೈ. ಭರತ್ ಶೆಟ್ಟಿ ಅವರು ತಮ್ಮ ಕ್ಷೇತ್ರವಲ್ಲದಿದ್ದರೂ, ಇಲ್ಲಿಗೆ ಬಂದು ಹಿಂದೂಗಳು ಅಲ್ಪಸಂಖ್ಯಾತರ ಶಾಲೆಗಳಿಗೆ ಮಕ್ಕಳನ್ನು ಕಳುಹಿಸಬೇಡಿ ಎಂದು ಹೇಳುತ್ತಾರೆ ಅವರು ಯಾರು ಇಲ್ಲಿಗೆ ಬಂದು ಮಾತನಾಡಲು, ಕೆಲವು ಮನಪಾ ಕಾರ್ಪೊರೇಟರ್‌ಗಳು ಅವ್ಯಚ್ಛ ಪದಗಳನ್ನು ಬಳಸಿ ಸಿಸ್ಟರ್‌ಗಳನ್ನು ನಿಂದಿದಿದ್ದಾರೆ. ಕಳೆದ 60 ವರ್ಷಗಳಿಂದ ಶಾಲೆಯನ್ನು ನಡೆಸಿಕೊಂಡು ಬರುತ್ತಿದ್ದು, ಶಾಲೆಯ ಮರ್ಯಾದೆಯನ್ನು ಕಳೆಯುವ ಕೆಲಸವನ್ನು ಶಾಸಕರು ಮಾಡಿದ್ದಾರೆ ಎಂದು ದೂರಿದರು.
ಶಾಸಕ ಕಾಮತ್ ಅವರು ವಿದ್ಯಾದೇಗುಲಕ್ಕೆ ಅವಮಾನ ಮಾಡಿದ್ದು, ಅವರಿಗೆ ಪ್ರಮಾಣಿಕತೆ ಇಲ್ಲ. ಸಮಸ್ಯೆ ಪರಿಹಾರವಾಗುವುದು ಬೇಕಾಗಿಲ್ಲ. ಅವರಿಗೆ ಸಾರ್ವಜನಿಕವಾಗಿ ಹೀರೋ ಆಗಬೇಕೆಂದು ಈ ರೀತಿ ನಡೆದುಕೊಂಡಿದ್ದಾರೆ. ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದೆ. ಶಾಸಕರು ಚುನಾಯಿತ ಪ್ರತಿನಿಧಿಯ ಗೌರವವನ್ನು ಹಾಳುಮಾಡಿದ್ದಾರೆ ಎಂದು ಆರೋಪಿಸಿದರು.
ಶಾಸಕರು ಜನರಲ್ಲಿ ಕಂಧಕವನ್ನು ಸೃಷ್ಟಿಸುತ್ತಿದ್ದು, ಅವರಿಗೆ ಶಾಸಕರಾಗುವ ನೈತಿಕತೆ ಇಲ್ಲವಾಗಿದೆ. ನಾನು ಶಾಲೆಯ ವಿಚಾರ ಮಾತನಾಡಿದ್ದಕ್ಕೆ ಇದು ನಮ್ಮ ಅಪ್ಪನ ಶಾಲೆ ಅಲ್ಲ ಎಂದು ಶಾಸಕ ಕಾಮತ್ ಹೇಳಿದ್ದು, ಇದು ಅವರ ಅಪ್ಪನ ಶಾಲೆಯೂ ಅಲ್ಲ ಎಂದು ತಿರುಗೇಟು ನೀಡಿದ ಅವರು ಶಾಸಕ ಕಾಮತ್ ಆಕಸ್ಮಿಕವಾಗಿ ರಾಜಕೀಯಕ್ಕೆ ಬಂದವರು ಆದರೆ ನಾನು 21 ವರ್ಷದಲ್ಲಿಯೇ ಜುನಾವಣೆಗೆ ನಿಂತು ಗೆದ್ದು ಬಂದವನ್ನು ಎಂದು ಹೇಳಿದರು.
ಶಾಸಕರ ಈ ಕೃತ್ಯದಿಂದ 10 ವರ್ಷ ಹಿಂದಕ್ಕೆ ತೆರಳಿದೆ. ಶಾಸಕರು ಬೆದರಿಕೆ ಹಾಕಿ ವಿದ್ಯಾರ್ಥಿಗಳನ್ನು ಕರೆಸಿ ಜೈಕಾರ ಹಾಕಿಸಿ ನಾಗರಿಕರ ಘನತೆಗೆ ಕುಂದಾಗಿದೆ. ಇದು ನಾಚಿಕೆ ಗೇಡಿನ ವಿಚಾರ. ಸಿಸ್ಟರ್‌ಗಳು ಮನೆ ಮಠ ಬಿಟ್ಟು ಸಮಾಜಸೇವೆಗೆ ಬಂದಿದ್ದಾರೆ, ಎಷ್ಟೋ ಮಕ್ಕಳಿಗೆ ಶಿಸ್ತು ಕಲಿಸಿದವರನ್ನು ಅಶಿಸ್ತಿನಿಂದ ನಡೆಸಿಕೊಳ್ಳುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಮಾಜಿ ಶಾಸಕ ಜೆ.ಆರ್. ಲೋಬೋ ಮಾತನಾಡಿ, ಶಾಲೆಯಿಂದ ತಪ್ಪಾಗಿದೆ ಎಂದು ಕಂಡುಬರುತ್ತಿಲ್ಲ. ಶಾಸಕರು ಶಿಕ್ಷಕರು, ಮಕ್ಕಳ ಜತೆ ನಡೆದುಕೊಂಡ ರೀತಿ ಶಾಸಕತ್ವಕ್ಕೆ ಅವಮಾನ. ಭರತ್ ಶೆಟ್ಟಿಗೆ ಈ ಕ್ಷೇತ್ರದಲ್ಲಿ ಏನು ಕೆಲಸ? ಎಲ್ಲರನ್ನು ಸಮಾನವಾಗಿ ನೋಡಿ ಸಮಸ್ಯೆ ಬಗೆಹರಿಸದೆ ಉಲ್ಭಣಿಸಿದ್ದು ಕರ್ತವ್ಯ ಚ್ಯುತಿ. ಎಲ್ಲರನ್ನು ಒಳಗೆ ಹೋಗಿ ಮಾತುಕತೆ ಮಾಡೋದು ಬಿಟ್ಟು ರಸ್ತೆಯಲ್ಲಿ ನಿಂತು ಅವಾಚ್ಯ ನಿಂದನೆ ಶೋಭೆಯಲ್ಲ. ಈ ಬಗ್ಗೆ ವಿಚಾರಣೆ ಆಗಬೇಕು.
ಅಧಿಕಾರಿಗಳು ಶಾಸಕರ ಜತೆ ಬರ್ತಾರೆ. ಅಧಿಕಾರಿಗಳು ಸೇರಿ ಒತ್ತಡ ಹಾಕಿ ಅವರೇ ಲೆಟರ್ ಡ್ರಾಫ್ಟ್ ಮಾಡಿಕೊಟ್ಟು ಸೈನ್ ಹಾಕಿಸಿದ್ದಾರೆ, ಈ ದಬ್ಬಾಳಿಕೆ ತನಿಖೆ ಆಗಬೇಕು. ಮಕ್ಕಳ ಹಕ್ಕು ಉಲ್ಲಂಘನೆ ಮಾಡಿದ ಶಾಸಕರ ತನಿಖೆ ಆಗಬೇಕು, ತಪ್ಪಾಗಿದ್ದರೆ ಅವರ ಮೇಲೂ ಕ್ರಮ ಆಗಬೇಕು. ಬೇಲಿಯೇ ಎದ್ದು ಹೊಲ ಮೇಯ್ದಿದೆ. ಇಬ್ಬರೂ ಶಾಸಕರಿಂದ ನಿಯಮ ಉಲ್ಲಂಘನೆಯಾಗಿದೆ. ಕಾನೂನು ಚೌಕಟ್ಟಲ್ಲಿಕೆಲಸ ಮಾಡಿ ಅದರಿಂದ ಹೊರಗೆ ಬಂದರೆ ನಿಮ್ಮನ್ನು ಹೇಗೆ ಎದುರಿಸಬೇಕು ಅಂತ ನಮಗೆ ಗೊತ್ತಿದೆ ಎಂದು ಹೇಳಿದರು.
ಪ್ರಮುಖರಾದ ಇಬ್ರಹಿಂ ಕೊಡಿಜಾಲ್, ಪಿ.ವಿ. ಮೋಹನ್, ಸದಾಶಿವ ಉಳ್ಳಾಲ್, ಎ.ಸಿ. ವಿನಾಯರಾಜ್, ನವೀನ್ ಡಿ’ಸೋಜಾ, ಅಪ್ಪಿಲತಾ, ಜೆ. ಅಬ್ದುಲ್ ಸಲೀಮ್, ಗಣೇಶ್ ಪೂಜಾರಿ, ಯು.ಟಿ. ಫರ್ಜನಾ, ವಿಕಾಸ್ ಶೆಟ್ಟಿ, ಎಂ.ಜಿ. ಹೆಗ್ಡೆ, ಇಮ್ರಾನ್ ಎ.ಆರ್., ಶುಭೋದಯ ಆಳ್ವಾ, ಭಾಸ್ಕರ್ ರಾವ್ ಉಪಸ್ಥಿತರಿದ್ದರು.
"ಮೊಬೈಲಲ್ಲಿ ಮೊದಲು ರೆಕಾರ್ಡ್ ಮಾಡಿದ ಮಹಿಳೆ ಯಾರು?. ಪಾಲಕರು ಪ್ರಿನ್ಸಿಪಾಲ್‌ಗೆ ಕಂಪ್ಲೇಂಟೇ ಕೊಟ್ಟಿಲ್ಲ. ಇದೊಂದು ಸಂಚಿನ ಕೃತ್ಯವಾಗಿದ್ದು, ಶಾಸಕರೇ ಈ ಸಂಚಿಗೆ ಬೆಂಬಲಕ್ಕೆ ನಿಂತದ್ದು. ಭರತ್ ನೀವು ನಾಳೆಯಿಂದ ಎಲ್ಲಾ ಹಿಂದೂ ಮಕ್ಕಳನ್ನು ನಿಮ್ಮ ನಿಮ್ಮ ಸಾಲೆಗೆ ಸೇರಿಸಿ, ಸುಮ್ನೆ ಗಲಾಡೆ ಮಾಡಿದಬೇಡಿ. ನಿಮ್ಮ ಶಾಲೆಗಳಿಗೆ ಮಕ್ಕಳ ಸಂಖ್ಯೆ ಏರಿಸಲು ಬೇರೆ ಶಾಲೆಗಳನ್ನು ಟಾರ್ಗೆಟ್ ಮಾಡಬೇಡಿ. ಒಂದಾದರೂ ಶಾಲೆ ಮಾಡಿದ್ದೀರಾ? ಬ್ರಾಹ್ಮಣ ಮಹಿಳೆಯರಿಗೆ ಮೊದಲ ಶಾಲೆ ಮಾಡಿದ್ದೇ ಒಬ್ಬರು ಫಾದರ್. -ಪಿ.ವಿ. ಮೋಹನ್.
ಪ್ರತಿಭಟನೆ ವೇಳೆ ಕಾನೂನು ಉಲ್ಲಂಘಿಸಿದವರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಲಿದೆ. ಅದಕ್ಕೆ ತನಿಖೆ ಆಗಲಿದೆ. ಅನುಮತಿ ಇಲ್ಲದೆ ಪ್ರತಿಭಟನೆ ಬಗ್ಗೆ ಸುಮೊಟೊ ಕೇಸ್ ಹಾಕಲಿ ಕಮಿಷನರ್‌ಗೆ ಒತ್ತಾಯಿಸುತ್ತೇನೆ. ಐವನ್ ಡಿ’ಸೋಜ."