Kundapura: ಕುಂದಾಪುರ ಶ್ರೀ ಬಗಳಾಂಬ ತಾಯಿ ದೇಗುಲದಲ್ಲಿ ಆಶ್ಲೇಷಾ ಪೂಜೆ

Kundapura: ಕುಂದಾಪುರ ಶ್ರೀ ಬಗಳಾಂಬ ತಾಯಿ ದೇಗುಲದಲ್ಲಿ ಆಶ್ಲೇಷಾ ಪೂಜೆ


ಕುಂದಾಪುರ: ಇಲ್ಲಿನ ಚಿಕ್ಕನ್ ಸಾಲ್ ರಸ್ತೆಯಲ್ಲಿರುವ ಶ್ರೀ ಬಗಳಾಂಬ ತಾಯಿ ದೇವಸ್ಥಾನದ ಪುನರ್ ಪ್ರತಿಷ್ಠೆ ಹಾಗೂ ಅಷ್ಟಬಂಧ ಬ್ರಹ್ಮ ಕಲಶೋತ್ಸವದ ಪ್ರಯುಕ್ತ ದೇವಳದ ಪರಿವಾರ ದೇವರಾದ ಶ್ರೀ ನಾಗದೇವರಲ್ಲಿ ಪ್ರಾಯಶ್ಚಿತ್ತವಾಗಿ ಫೆ.6 ರಂದು ಬೆಳಿಗ್ಗೆ 9 ರಿಂದ 'ಆಶ್ಲೇಷಾ ಬಲಿ ಪೂಜೆ' ಕಾರ್ಯಕ್ರಮ ವೇ.ಮೂ. ಕೋಟ ಚಂದ್ರಶೇಖರ ಸೋಮಯಾಜಿಯವರ ನೇತೃತ್ವದಲ್ಲಿ ನಡೆಯಿತು.

ಮಧ್ಯಾಹ್ನ 1 ಗಂಟೆಗೆ ಮಹಾಪೂಜೆ, ಮಂಗಳಾರತಿ, ‌ತೀರ್ಥ ಪ್ರಸಾದ ವಿತರಣೆ ಬಳಿಕ 'ಅನ್ನ ಸಂತರ್ಪಣೆ' ಕಾರ್ಯಕ್ರಮ ನಡೆಯಿತು. ನೂರಾರು ಭಕ್ತರು ನಾಗದೇವರ ಮತ್ತು ಶ್ರೀ ಬಗಳಾಂಬ ತಾಯಿಯ ದರ್ಶನ ಪಡೆದು ಪುನಿತರಾದರು. 

ಈ ಸಂದರ್ಭದಲ್ಲಿ ದೇವಳದ ಧರ್ಮದರ್ಶಿಗಳಾದ ಗಣಪತಿ ಸುವರ್ಣ ಮತ್ತು ಜಲಜ ಸುವರ್ಣ ಮತ್ತು ಮಕ್ಕಳು ಹಾಗೂ ಉತ್ಸವ ಸಮಿತಿಯ ಅಧ್ಯಕ್ಷರು ಮತ್ತು ಆಡಳಿತ ಮಂಡಳಿಯ ಸದಸ್ಯರು, ಮತ್ತು ಭಕ್ತಾದಿಗಳು ಉಪಸ್ಥಿತರಿದ್ದರು.



Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article