Mangalore: ಮುಳುಗುತ್ತಿರುವ ಹಡಗು ಕಾಂಗ್ರೆಸ್: ಡಾ. ಭರತ್ ಶೆಟ್ಟಿ ವೈ

Mangalore: ಮುಳುಗುತ್ತಿರುವ ಹಡಗು ಕಾಂಗ್ರೆಸ್: ಡಾ. ಭರತ್ ಶೆಟ್ಟಿ ವೈ


ಸುರತ್ಕಲ್: ಕಾಂಗ್ರೆಸ್ ಮುಳುಗುತ್ತಿರುವ ಹಡಗು ಎಂಬುದು ಪಕ್ಷದ ನಾಯಕರಿಗೆ ಅರಿವಾಗಿದ್ದು, ಭವಿಷ್ಯ ಕಂಡುಕೊಳ್ಳಲು ನಮ್ಮ ಜಿಲ್ಲೆಯ ಮಾದರಿ ಸಂಸದರಾಗಿರುವ ನಳಿನ್ ಕುಮಾರ್ ಕಟೀಲ್ ವಿರುದ್ಧ ಮುತ್ತಿಗೆಯಂತಹ ಕಾರಣವಿಲ್ಲದ ಹೋರಾಟಕ್ಕೆ ಇಳಿದಿದ್ದಾರೆ ಎಂದು ಶಾಸಕ ಡಾ. ಭರತ್ ಶೆಟ್ಟಿ ವೈ. ವ್ಯಂಗ್ಯವಾಡಿದ್ದಾರೆ.

ಕಾವೂರಿನ ಬಿಜೆಪಿ ಕಚೇರಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಸಂಸದ ನಳಿನ್ ಕುಮಾರ್ ಕಟೀಲ್ ಅವರ ನಿವಾಸಕ್ಕೆ ಪಕ್ಷದ ಯುವ ಕಾರ್ಯಕರ್ತರು ಮುತ್ತಿಗೆ ಹಾಕಲು ಯತ್ನಿಸಿದ್ದು, ಪ್ರಚಾರ ಸ್ಟಂಟ್ ಎಂದು ಬಣ್ಣಿಸಿರುವ ಶಾಸಕರು, ಕಾಂಗ್ರೆಸ್ ಹಣ ,ಹೆಂಡ ಬಳಸಿ ಚುನಾವಣೆ ಗೆಲ್ಲುತ್ತಿದ್ದ  ಕಾಲವೊಂದಿತ್ತು. ಬಿಜೆಪಿಯ ಆಡಳಿತದ ಬಳಿಕ ಮತದಾರ ಜಾಗೃತನಾಗಿ ಕಾಂಗ್ರೆಸ್‍ನ ಹೆಂಡ ರಾಜಕೀಯ ಅರಿತು ಬಿಜೆಪಿಯನ್ನು ಸತತವಾಗಿ ಆಯ್ಕೆ ಮಾಡುತ್ತಿದ್ದಾರೆ. ಇದರಿಂದ ದಕ್ಷಿಣ ಕನ್ನಡದಲ್ಲಿ ಕಾಂಗ್ರೆಸ್ ಭ್ರಮ ನಿರಸನಗೊಂಡು ಹೋರಾಟಕ್ಕೆ ಇಳಿದಂತಿದೆ. 

 ನಳಿನ್ ಕುಮಾರ್ ಕಟೀಲ್ ಅವರು ತಮ್ಮ ಅಧಿಕಾರದ ಅವಧಿಯಲ್ಲಿ ಸ್ಮಾರ್ಟ್ ಸಿಟಿ ಯೋಜನೆ ಸೇರಿದಂತೆ, ವಿವಿಧ ಇಲಾಖೆಯ ಮೂಲಕ, ಸಾವಿರಾರು ಕೋ.ರೂ. ಅನುದಾನ ತಂದು ಸದ್ಬಳಕೆ ಮಾಡಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ರೈಲ್ವೆ, ಹೆದ್ದಾರಿ, ಕೋಸ್ಟ್ ಗಾರ್ಡ್ ಟ್ರೈನಿಂಗ್ ಸೆಂಟರ್, ಪ್ಲಾಸ್ಟಿಕ್ ಪಾರ್ಕ್ ಸಹಿತ  ಹತ್ತು ಹಲವು ಅಭಿವೃದ್ಧಿ ಕಾರ್ಯಗಳು ಕಣ್ಣಮುಂದಿವೆ.

 ಕಾಂಗ್ರೆಸ್ ಕಾರ್ಯಕರ್ತರು ,ನಾಯಕರು ಈ ಎಲ್ಲಾ ಮಾಹಿತಿ ಪಡೆದುಕೊಂಡು ತನ್ನ ಜ್ನಾನ ಹೆಚ್ಚಿಸಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article