Moodubidire: ರಾಮೋತ್ಸವ ಚಿತ್ರ ಸ್ಪರ್ಧೆ: ಬಾಲ ರಾಮರಿಗೆ ಬಹುಮಾನ ವಿತರಣೆ

Moodubidire: ರಾಮೋತ್ಸವ ಚಿತ್ರ ಸ್ಪರ್ಧೆ: ಬಾಲ ರಾಮರಿಗೆ ಬಹುಮಾನ ವಿತರಣೆ


ಮೂಡುಬಿದಿರೆ: ದ.ಕ ಜಿಲ್ಲಾ ಕಾರ್ಯನಿರತ ಫೋಟೋಗ್ರಾಫರ್ಸ್ ಮತ್ತು ವೀಡಿಯೋ ಗ್ರಾಫರ್ಸ್ ಅಸೋಸಿಯೇಶನ್ (ರಿ) ವತಿಯಿಂದ ಶ್ರೀ ರಾಮ ಮಿತ್ರ ಮಂಡಳಿ ಸಿದ್ಧಕಟ್ಟೆ ಇವರ ಸಹಯೋಗದಲ್ಲಿ ರಾಮೋತ್ಸವ ಪ್ರಯುಕ್ತ 1ರಿಂದ 6 ವರ್ಷದೊಳಗಿನ ಮಕ್ಕಳಿಗೆ ನಡೆದಿದ್ದ ಶ್ರೀ ರಾಮ ವೇಷ ಫೋಟೋ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮ ಶನಿವಾರ ಸಮಾಜ ಮಂದಿರ ಮೀಟಿಂಗ್ ಹಾಲ್ ನಲ್ಲಿ ನಡೆಯಿತು.

ಪ್ರಭಾತ್ ಸಿಲ್ಕ್ ನ ಪ್ರಭಾತ್ ಚಂದ್ರ ಜೈನ್, ತುಳಸೀ ಕೋಚಿಂಗ್ ಸೆಂಟರ್ ನ ಮಮತಾ ಮೋಹನ್, ಸಂಘದ ಸ್ಥಾಪಕಾಧ್ಯಕ್ಷ ಗಣೇಶ್ ಹೊಳ್ಳ, ಸ್ಥಾಪಕ ಸಂಚಾಲಕ ಥೋಮಸ್ ಡಿ'ಕೋಸ್ತಾ ಬಂಟ್ವಾಳ, ಶ್ರೀ ರಾಮ ಮಿತ್ರ ಮಂಡಳಿಯ ನೀಲಕಂಠ ಪರಾಡ್ಕರ್ ಅತಿಥಿಗಳಾಗಿ ಪಾಲ್ಗೊಂಡು ಬಹುಮಾನಗಳನ್ನು ವಿತರಿಸಿದರು.

 ವಿಜೇತರು:

ಪ್ರಥಮ: ಶಿರಾಲಿ ಪೂಜಾರಿ, ದ್ವಿತೀಯ: ಲಕ್ಷ ವಿ. ಕೋಟ್ಯಾನ್ ತೃತೀಯ: ಋತ್ವಿಕಾ ಎ. ಮಂಗಳೂರು.

ಪ್ರೋತ್ಸಾಹಕ: 

ಸಾನಿಧ್ಯಾ ಡಿ. ರಾವ್, ಗ್ಯಾನ್ ಎ., ಅಹನಾ ಭಟ್, ಸುಕನ್ಯಾ ಕಾಮತ್, ಸುಧನ್ಯ ಭಟ್, ಜಿ.ಯ. ಕೋಟ್ಯಾನ್, ಅಥರ್ವ ಕಿಣಿ ಮೂಡುಬಿದಿರೆ.

ಸಂಘದ ಅಧ್ಯಕ್ಷ ರಾಜೇಶ್ ಶ್ಯಾನುಭಾಗ್ ಸ್ವಾಗತಿಸಿ, ಕಾರ್ಯದರ್ಶಿ ಯಶೋಧರ್ ರಾವ್ ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article