Moodubidire: ಡಿಸಿ ಮನ್ನಾ ಜಾಗವನ್ನು ಹಂಚಲು ಕಾನೂನು ತಿದ್ದುಪಡಿ ಮಾಡಬೇಕು

Moodubidire: ಡಿಸಿ ಮನ್ನಾ ಜಾಗವನ್ನು ಹಂಚಲು ಕಾನೂನು ತಿದ್ದುಪಡಿ ಮಾಡಬೇಕು


ಮೂಡುಬಿದಿರೆ: ಡಿಸಿ ಮನ್ನಾ ಜಾಗವನ್ನು ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಹಂಚಲು ಸರಕಾರ ಸೂಕ್ತ ಕಾನೂನು ತಿದ್ದುಪಡಿ ಮಾಡಬೇಕೆಂದು ಮೂಡುಬಿದಿರೆ ತಾಲ್ಲೂಕು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಜಾತಿಗಳ ನಾಗರಿಕ ಹಕ್ಕು ಜಾಗೃತಿ ಸಮಿತಿ ಆಗ್ರಹಿಸಿದೆ.

ಪ್ರೆಸ್‌ಕ್ಲಬ್‌ನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿ ಅಧ್ಯಕ್ಷ ರಮೆಶ್ ಬೋಧಿ ಅವರು ಡಿಸಿ ಮನ್ನಾ ಜಾಗವನ್ನು ಪರಿಶಿಷ್ಟ ಜಾತಿ, ಪಂಗಡವದರಿಗೆ ಹಂಚಲು 2014ರಲ್ಲಿ ಆಗಿನ ಜಿಲ್ಲಾಧಿಕಾರಿ ಅದೇಶ ಮಾಡಿದ್ದರು ಕರ್ನಾಟಕ ಭೂಮಂಜುರಾತಿ ಕಾಯ್ದೆ 1969ಕ್ಕೆ ಸೂಕ್ತ ತಿದ್ದುಪಡಿ ಆಗದ ಕಾರಣ ಆದೇಶ ಅನುಷ್ಠಾನಕ್ಕೆ ತೊಡಕಾಗಿದೆ. 

ಸದ್ರಿ ಕಾನೂನಿಗೆ ಸೂಕ್ತ ತಿದ್ದುಪಡಿ ತರಬೇಕೆಂದು ಮದ್ರಾಸ್ ಪ್ರಾಂತ್ಯಕ್ಕೊಳಪಡುವ ಭಟ್ಕಳ, ಹೊನ್ನಾವರ, ಕುಮಟಾ, ಕುಂದಾಪುರ, ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು ಮತ್ತು ಶೃಂಗೇರಿ, ಮಡಿಕೇರಿ, ಕಾಸರಗೋಡು ಶಾಸಕರಿಗೆ ಮನವಿ ಮಾಡಲಾಗಿದೆ. ವಿಧಾನಸಭೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿ ಕಂದಾಯ ಸಚಿವರು ಮತ್ತು ಮುಖ್ಯಮಂತ್ರಿ ಮೇಲೆ ಒತ್ತಡ ಹೇರಿ ಡಿ.ಸಿ ಮನ್ನಾ ಜಾಗಕ್ಕೆ ಕಾನೂನು ತಿದ್ದುಪಡಿ ತಂದು ಅರ್ಹ ಫಲಾನುಭವಿಗಳಿಗೆ ಇದರ ಪ್ರಯೋಜನ ಸಿಗುವಂತಾಗಬೇಕೆಂದು ನಾವು ಆಗ್ರಹಿಸುತ್ತೇವೆ ಎಂದರು. 

ಸಮಿತಿ ಅಧ್ಯಕ್ಷ ರಮೇಶ್ ಬೋಧಿ, ಪ್ರಮುಖರಾದ ನಾರಾಯಣ ಕಡಲಕೆರೆ, ಭಾಸ್ಕರ್ ಎನ್.ಎಸ್, ಜ್ಯೋತಿ ನಾಯಕ್, ಭವಾನಿ ನಾಯಕ್, ರಾಮಚಂದ್ರ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article