Moodubidire: ಎಕ್ಸಲೆಂಟ್ ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ

Moodubidire: ಎಕ್ಸಲೆಂಟ್ ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ


ಮೂಡುಬಿದಿರೆ: ವೈಜ್ಞಾನಿಕ ಮನೋಭಾವವನ್ನು ಪ್ರೋತ್ಸಾಹಿಸಿ ಅನ್ವೇಷಣಾ ಪ್ರವೃತ್ತಿಯನ್ನು ಬೆಳೆಸುವಲ್ಲಿ ಅಟಲ್ ಟಿಂಕರಿಂಗ್ ಲ್ಯಾಬ್ ಪ್ರಮುಖ ಪಾತ್ರವನ್ನು ವಹಿಸುತ್ತಿವೆ ಎಂದು ಎಕ್ಸಲೆಂಟ್ ಶಿಕ್ಷಣ ಸಂಸ್ಥೆಗಳ ಕಲ್ಲಬೆಟ್ಟು ಅಧ್ಯಕ್ಷ ಯುವರಾಜ ಜೈನ್ ಹೇಳಿದರು.

ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಅಂಗವಾಗಿ ಎಕ್ಸಲೆಂಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದರು. 

ಕಾರ್ಯದರ್ಶಿ ರಶ್ಮಿತಾ ಜೈನ್ ಮಾತನಾಡಿ, ಕ್ರಿಮಿಕೀಟ, ಇಲಿ, ಹಕ್ಕಿಗಳು ನಿತ್ಯ ಜೀವನದಲ್ಲಿ ಉಪದ್ರವಿಗಳು ಎಂದು ಭಾವಿಸಿ ಕೀಟನಾಶಕ, ರಾಸಯನಿಕ ಉಪಯೋಗಿಸಿ ಕೊಲ್ಲುವುದರ ಬದಲು ಅವುಗಳ ಹಾವಳಿಯನ್ನು ತಡೆಗಟ್ಟುವ ಪರಿಸರ ಸ್ನೇಹಿ ಮಾದರಿಯ ಅನ್ವೇಷಣೆ ವಿದ್ಯಾರ್ಥಿಗಳಿಂದಾಗಲಿ ಎಂದರು. 

ಮುಖ್ಯ ಶಿಕ್ಷಕ ಶಿವಪ್ರಸಾದ್ ಭಟ್, ಸಹ ಮುಖ್ಯ ಶಿಕ್ಷಕ ಜಯಶೀಲ, ಮೆಂಟರ್‌ಗಳಾದ ವಿಜ್ಞಾನ ಶಿಕ್ಷಕ ನಿರಂಜನ್ ಪೂಜಾರಿ, ವೆಂಕಟೇಶ್ ಭಟ್ ಹಾಗೂ ಹಳೆ ವಿದ್ಯಾರ್ಥಿನಿ ಗೌರಿ ಉಪಸ್ಥಿತರಿದ್ದರು. 

ವಿಜ್ಞಾನ ದಿನದ ಪ್ರಯುಕ್ತ ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಗೌರವಿಸಲಾಯಿತು.



Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article